ನ್ಯಾಯಾಂಗ ನಿಂದನೆ: ವಕೀಲರಿಗೆ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್
Team Udayavani, Jan 15, 2022, 6:45 AM IST
ಬೆಂಗಳೂರು: ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್ ಜಿ ಮತ್ತು ಅವರ ಟ್ರಸ್ಟ್ ವಿರುದ್ಧ ತನಿಖೆ ಕೋರಿ ಹಲವು ಸುಳ್ಳು ಮೊಕದ್ದಮೆಗಳನ್ನು ಹೂಡಿದ್ದ ಇಂಡಿಯಾ ಅವೇಕ್ ಫಾರ್ ಟ್ರಾನ್ಸ್‌ಪರೆನ್ಸಿ ಎಂಬ ಸರಕಾರೇತರ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಇಬ್ಬರು ವಕೀಲರಿಗೆ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ವಕೀಲರಾದ ಆರ್.ಸುಬ್ರಮಣಿ ಮತ್ತು ಪಿ. ಸದಾನಂದ ಅವರಿಗೆ 2 ತಿಂಗಳು ಜೈಲು ಹಾಗೂ ದಂಡ ವಿಧಿಸಲಾಗಿದೆ.
ವಿಪ್ರೋ ಸಂಸ್ಥೆ, ಅರ್ಜಿಂ ಪ್ರೇಮ್ ಜಿ ಮತ್ತಿತರರು ಸಲ್ಲಿಸಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಆದೇಶ ಹೊರಡಿಸಿದೆ.
ಪ್ರಕರಣದ ಎಲ್ಲ ಅಂಶಗಳನ್ನು ಮತ್ತು ಹಿಂದೆ ಏಕಸದಸ್ಯ ನ್ಯಾಯಪೀಠ ದಂಡ ವಿಧಿಸಿದ್ದು ಮತ್ತಿತರ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ಹೈಕೋರ್ಟ್ ಈ ಆದೇಶ ನೀಡಿದ್ದು, ಆರೋಪಿಗಳಾದ ಆರ್. ಸುಬ್ರಮಣಿ ಮತ್ತು ಪಿ.ಸದಾನಂದ ವಿರುದ್ಧದ ಆರೋಪಗಳು ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್ 2(3) ಅಡಿ ದೃಢಪಟ್ಟಿವೆ.
ಇದನ್ನೂ ಓದಿ:ಒನ್‌ಪ್ಲಸ್ 9ಆರ್‌ಟಿ ಬಿಡುಗಡೆ; 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೌಲಭ್ಯ
ಪ್ರಕರಣದ ಅಂಶಗಳನ್ನು ಪರಿಶೀಲಿಸಿದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೈಬಿಡಲು ಯಾವುದೇ ಸಾಕ್ಷ್ಯಾಧಾರವಿಲ್ಲ, ಹಾಗಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ”ಆರೋಪಿಗಳಿಬ್ಬರು ಎರಡು ತಿಂಗಳು ಸಾದಾ ಜೈಲು ಶಿಕ್ಷೆಗೆ ಒಳಗಾಗಬೇಕು, ತಲಾ 2 ಸಾವಿರ ರೂ. ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ಅಲ್ಲದೆ, ಆ ವಕೀಲರಿಗೆ ಅಜೀಂ ಪ್ರೇಮ್ ಜಿ ಮತ್ತು ವಿಪ್ರೊ ಕಂಪನಿ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಬಗೆಯ ಕೇಸ್ ದಾಖಲಿಸದಂತೆ ನಿರ್ಬಂಧವಿಸಿದೆ.
ಈ ಮಧ್ಯೆ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕಾಲಾವಕಾಶ ನೀಡಬೇಕು ಎಂದು ವಕೀಲರು ಕೋರಿದ ಹಿನ್ನಲೆಯಲ್ಲಿ, ಈ ಆದೇಶವನ್ನು ನಾಲ್ಕು ವಾರಗಳ ಕಾಲ ಅಮಾನತ್ತಿನಲ್ಲಿಡಲು ಇದೇ ವೇಳೆ ನ್ಯಾಯಪೀಠ ಆದೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಕ್ಕೆ ವರ್ಷಾಘಾತ: ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿ
ದ್ವಿತೀಯ ಪಿಯು ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಲಭ್ಯ
ಕಾಮೆಡ್ ಕೆ ಫಲಿತಾಂಶ ಪ್ರಕಟ: ಟಾಪ್ 10ರಲ್ಲಿ ರಾಜ್ಯದ ಐವರಿಗೆ ಸ್ಥಾನ
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನ ವಿರುದ್ಧದ ಎಫ್ಐಆರ್ ರದ್ದತಿಗೆ ನಕಾರ
ಪಿರಿಯಾಪಟ್ಟಣ : ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ