ಮತ್ಸ್ಯಾಮೃತ ಎಫ್‌ಪಿಒ ಸ್ಥಾಪನೆಯಲ್ಲಿ ಸಾಧನೆ : ‌ ಮೀನು ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ

Team Udayavani, Jan 31, 2022, 5:11 PM IST

ಮತ್ಸ್ಯಾಮೃತ ಎಫ್‌ಪಿಒ ಸ್ಥಾಪನೆಯಲ್ಲಿ ಸಾಧನೆ : ‌ ಮೀನು ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ

ವಿಜಯಪುರ:  ರಾಜ್ಯದಲ್ಲಿ ಕೃಷಿ ಹಾಗೂ ಕೃಷಿ ಆಧಾರಿತ ಉತ್ಪನ್ನಗಳಿಗೆ ಮಧ್ಯವರ್ತಿಗಳ ಶೋಷಣೆ ತಪ್ಪಿಸಿ, ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಸರ್ಕಾರವೇ ರೈತ ಉತ್ಪಾದಕ ಕಂಪನಿಗಳನ್ನು ತೆರೆಯಲು ಪ್ರೋತ್ಸಾಹ ನೀಡುತ್ತಿದೆ. ಪರಿಣಾಮ ಮೀನು ಉತ್ಪಾದಕ ರೈತರ ಕಂಪನಿ (ಎಫ್‌ಪಿಒ) ಸ್ಥಾಪನೆಯಲ್ಲಿ ನಿರೀಕ್ಷಿತ ಗುರಿ ಮೀರಿ ಸಾಧನೆ ಮಾಡಲಾಗಿದೆ.

ಎಫ್‌ಪಿಒ ಎಂದರೇನು?: ದೇಶದಲ್ಲಿ ಸಣ್ಣ-ಅತಿ ಸಣ್ಣ ರೈತರು ಮಾತ್ರವಲ್ಲ ದೊಡ್ಡ ಮಟ್ಟದ ರೈತರು ಕೂಡ ಶ್ರಮ ವಹಿಸಿ ಉತ್ಪಾದಿಸಿದ ಉತ್ಪನ್ನ ಮಾರುವಾಗ ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಶೋಷಣೆಗೆ ಅನುಭವಿಸುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ರೈತ ಉತ್ಪಾದಕ ಕಂಪನಿ ಸ್ಥಾಪನೆಗೆ ಮುಂದಾಗಿದೆ. ಇದರಿಂದ ರೈತರಿಗೆ ಸಾಮೂಹಿಕ ಹೊಣೆಗಾರಿಕೆ ಜೊತೆಗೆ ತಾವು ಎದುರಿಸುವ ಸವಾಲುಗಳಿಗೆ ತಾವೇ ಸಾಂಘಿಕ ವ್ಯವಸ್ಥೆಯಲ್ಲಿ ಮಾರಾಟಗಾರರಾಗುವ ಅವಕಾಶ ಕಲ್ಪಿಸಿರುವುದೇ ಎಫ್‌ಪಿಒ.

ಕಂಪನಿ ನೋಂದಣಿ: ಇದೀಗ ರೈತರು ತಾವು ಉತ್ಪಾದಿಸಿದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕಂಪನಿ ಕಾಯ್ದೆಯಲ್ಲಿ ರೈತರೇ ಕಂಪನಿ (ಎಫ್‌ಪಿಒ) ನೋಂದಣಿ ಮಾಡಿಸಿ, ಕಂಪನಿ ಸ್ಥಾಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿ ರೈತ ಎಫ್‌ಪಿಒ ಸ್ಥಾಪನೆ ಸಂದರ್ಭದಲ್ಲಿ ತಾನೇ ಸ್ವಯಂ ಪ್ರೇರಿತನಾಗಿ ಷೇರು ಬಂಡವಾಳ ಹೂಡುವ ಮೂಲಕ
ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಿದೆ. ರೈತರ ಆರ್ಥಿಕ ಪ್ರಗತಿಗೆ ಅದರಲ್ಲೂ ಸಣ್ಣ-ಅತಿ ಸಣ್ಣ ರೈತರಿಗೆ ಎಫ್‌ಪಿಒ ಸಹಕಾರಿ ಆಗಿದೆ.

ರೈತರ ಗುಂಪು: ಮಹಿಳಾ ಸ್ವ ಸಹಾಯ ಗುಂಪುಗಳ ಮಾದರಿಯಲ್ಲಿ ವಿವಿಧ ಕೃಷಿ ಉತ್ಪನ್ನಗಳ ಉತ್ಪಾದನೆ ಮಾಡುವ ರೈತರ ಸಂಘಗಳನ್ನು ಸ್ಥಾಪಿಸಿಕೊಂಡು ಅದರ ಮೂಲಕ ಎಫ್‌ಪಿಒ ಕಂಪನಿಗೆ ನಿರ್ದೇಶಕರನ್ನು ಕಳಿಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ.

ಉತ್ಪಾದಕ ರೈತನೇ ಉದ್ಯಮಿ: ಕೃಷಿ ವ್ಯವಸ್ಥೆಯಲ್ಲಿ ರೈತರು ಉತ್ಪಾದಿಸುವ ಎಲ್ಲ ಉತ್ಪನ್ನಗಳಿಗೂ ಇದೀಗ ಎಫ್‌ಪಿಒ ಸ್ಥಾಪನೆ ಕೆಲಸ ನಡೆಯುತ್ತಿದೆ. ತಾನು ಬೆಳೆದ ಉತ್ಪಾದನೆಗೆ ರೈತ ಕೊಯ್ಲೋತ್ತರದ ಬಳಿಕ ತಾನೇ ಉದ್ಯಮಿಯಾಗಿ ಪರಿವರ್ತನೆಗೊಳ್ಳುವ ಅವಕಾಶ ಕಲ್ಪಿಸಿದೆ. ಜೊತೆಗೆ ಕೃಷಿಯಲ್ಲಿ ಪರಿಣಿತನಾತ ರೈತ ತನ್ನ ಉತ್ಪನ್ನ ಮಾರುವಲ್ಲಿಯೂ ಆರ್ಥಿಕ ಪರಿಣಿತಿ-ಕೌಶಲ್ಯ ಕಲ್ಪಿಸುವಲ್ಲಿ ಎಫ್‌ಪಿಒ ಪ್ರಮುಖ ಪಾತ್ರ ವಹಿಸುತ್ತಿದೆ. ಸದರಿ ಎಫ್‌ಪಿಒ ಆಡಳಿತ ವ್ಯವಸ್ಥೆಯಲ್ಲಿ ಎಲ್ಲವೂ ಪಾರದರ್ಶಕವಾಗಿದ್ದು ಹಣಕಾಸಿನ ವ್ಯವಸ್ಥೆಯಲ್ಲಂತೂ ಬ್ಯಾಂಕಿಂಗ್‌ ಮೂಲಕವೇ ಎಲ್ಲ ವ್ಯವಹಾರ ನಡೆಯುತ್ತದೆ.

ಸಿಎಂ. ಘೋಷಿತ ಅಮೃತ ಎಫ್‌ಪಿಒ: ಪ್ರಸಕ್ತ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವ ಸಂಭ್ರಮಾಚರಣೆ ವರ್ಷದಲ್ಲಿದೆ. ಹೀಗಾಗಿ 2021 ಆಗಸ್ಟ್‌ 15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಉತ್ಪಾದಕ ಕಂಪನಿ (ಎಫ್‌ಪಿಒ)ಗಳನ್ನು ಅಮೃತ ಎಫ್‌ಪಿಒ ಎಂದು ಘೋಷಿಸಿದರು. ಅಲ್ಲದೇ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಹೀಗೆ ಕೃಷಿ ಆಧಾರಿತ ಬಹುತೇಕ ಎಲ್ಲ ಇಲಾಖೆಗಳಲ್ಲೂ ಎಫ್‌ಪಿಒ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ.

ನೋಡಲ್‌ ಸಂಸ್ಥೆ: ರಾಜ್ಯದಲ್ಲಿ ಕೃಷಿ ಉತ್ಪಾದಕರ ಕಂಪನಿ ಸ್ಥಾಪನೆಗಾಗಿ ಸರ್ಕಾರ ಕರ್ನಾಟಕ ರೈತ ಉತ್ಪಾದಕ ಕಂಪನಿಯ ರಾಜ್ಯಮಟ್ಟದ ಅ ಧಿಕಾರಯುಕ್ತ ಸಮಿತಿಯನ್ನು ನೇಮಿಸಿದೆ. ಇದಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರನ್ನೇ ಸದಸ್ಯ ಕಾರ್ಯದರ್ಶಿಯನ್ನಾಗಿ ಮಾಡಿದೆ.

ಎಫ್‌ಪಿಒ ಸ್ಥಾಪನೆ ಎನ್‌ಜಿಒ ಹೊಣೆ: ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಕೈಮಗ್ಗ-ಜವಳಿ ಉತ್ಪಾದಕರ ಕಂಪನಿ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಟೆಂಡರ್‌ ಕರೆದು 15 ಎನ್‌ಜಿಒಗಳನ್ನು ಆಯ್ಕೆ ಮಾಡಲಾಗಿದೆ. ಸದರಿ 15 ಸರ್ಕಾರೇತರ ಸಂಸ್ಥೆ (ಎನ್‌ ಜಿಒ)ಗಳಿಗೆ ಹೊಣೆಯನ್ನು ನೀಡಿ, ಪ್ರತಿ ಇಲಾಖೆಯ ಎಫ್‌ಪಿಒ ಸ್ಥಾಪನೆಗೆ ಗುರಿಯನ್ನೂ ನಿಗದಿ ಮಾಡಿದೆ.

ಎನ್‌ಜಿಒ ಕೆಲವೇನು?: ಸದರಿ ಎನ್‌ಜಿಒಗಳು ರಾಜ್ಯದಲ್ಲಿ ರೈತ ಉತ್ಪಾದಕರ ಕಂಪನಿ ಸ್ಥಾಪನೆಗೆ ರೈತರಲ್ಲಿ ಅರಿವು ಮೂಡಿಸುವ, ತರಬೇತಿ ನೀಡುವ, ಕಂಪನಿ ಸ್ಥಾಪನೆಗೆ ಸೂಕ್ತ ಮಾರ್ಗದರ್ಶನ ನೀಡುವಂಥ ಕೆಲಸ ಮಾಡುತ್ತದೆ. ಇದಲ್ಲದೇ ಸರ್ಕಾರ ಸದರಿ ಸರ್ಕಾರೇತರ ಸಂಸ್ಥೆಗೆ ಮಾಸಿಕ 12 ಸಾವಿರ ರೂ. ಸಂಭಾವನೆಯನ್ನೂ ನೀಡುತ್ತದೆ. ಇದಕ್ಕಾಗಿ 29.78 ಲಕ್ಷ ರೂ. ಅನುದಾನವನ್ನೂ ನೀಡಿದೆ. ರೈತರು ಉತ್ಪಾದನೆ ಮಾಡುವ ವಸ್ತುಗಳು, ಅದರ ಮೌಲ್ಯವರ್ಧನೆ, ಕಂಪನಿ ಸ್ಥಾಪನೆ ಹಂತದಿಂದ ಮಾರುಕಟ್ಟೆ ಪ್ರವೇಶದ ಹಂತದವರೆಗೆ ಎಲ್ಲ ಹಂತದಲ್ಲಿ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತದೆ.

ಎಫ್‌ಪಿಒ ಮಾರುಕಟ್ಟೆ ಪ್ರವೇಶ: ಪ್ರಮುಖವಾಗಿ ನಿರ್ದಿಷ್ಟ ಕೃಷಿ ಉತ್ಪನ್ನಗಳ ಉತ್ಪಾದಕರಿಂದ ಮಾತ್ರ ರೂಪುಗೊಳ್ಳುವ ಎಫ್‌ಪಿಒ ತನ್ನ ರೈತರ ನಿರ್ದಿಷ್ಟ ಉತ್ಪನ್ನ ಮಾರಾಟಕ್ಕೆ ಮಾರುಕಟ್ಟೆ ಪ್ರವೇಶಿಸುತ್ತದೆ. ದೊಡ್ಡ ದೊಡ್ಡ ಕಂಪನಿಗಳೊಂದಿಒಗೆ ಒಪ್ಪಂದ ಮಾಡಿಕೊಳ್ಳುವ, ಕೊಯ್ಲೋತ್ತರ ಸಂದರ್ಭದಲ್ಲಿ ಮೌಲ್ಯವರ್ಧನೆ ಮಾಡಿಸಿ ಮಾರುಕಟ್ಟೆ ಪ್ರವೇಶಿಸುತ್ತದೆ.

10 ಲಕ್ಷ ರೂ. ಸುತ್ತು ನಿಧಿ: ಅಧಿಕೃತವಾಗಿ ನೋಂದಣಿ ಮೂಲಕ ಸ್ಥಾಪನೆಯಾಗುವ ಎಫ್‌ಪಿಒಗಳಿಗೆ ಸರ್ಕಾರ 2 ಹಾಗೂ 3ನೇ ವರ್ಷದಲ್ಲಿ 5 ಲಕ್ಷ ರೂ.ನಂತೆ 10 ಲಕ್ಷ ರೂ. ಹಣ ಆರ್ಥಿಕ ನೆರವನ್ನೂ ನೀಡುತ್ತದೆ. ಇದರಿಂದ ನಿ ರ್ದಿಷ್ಟ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ಸಂಗ್ರಹಣೆ, ಶಿಥಿಲ ಘಟಕ, ಅಗತ್ಯ ಯಂತ್ರೋಪಕರಣ ಖರೀದಿ, ಬ್ರ್ಯಾಂಡಿಂಗ್ ಹೀಗೆ ಉತ್ಪಾದಕ ಕೆಲಗಳಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಅಲ್ಲದೇ ಹೆಚ್ಚಿನ ಸಾಲದ ಅಗತ್ಯ ಎನಿಸಿದಲ್ಲಿ ಸಾಲವನ್ನೂ ಕೊಡಿಸುತ್ತದೆ.

ಸಿಬ್ಬಂದಿ ಸಂಬಳ: ಕಂನಿಯ ಬಲವರ್ಧನೆಗೆ ಯಂತ್ರೋಪಕರಣ ಖರೀದಿಗೆ ಸಾಲದ ಸೌಲಭ್ಯ, ಆರ್ಥಿಕ ಸಬಲೀಕರಣ ಹಂತದ ವರತೆಗೆ ಕಚೇರಿ ನಿರ್ವಹಣೆಗೆ ಅನುದಾನವನ್ನೂ ನೀಡುತ್ತದೆ. ಅಲ್ಲದೇ 3 ವರ್ಷದವರೆಗೆ ಕಂಪನಿಯ ಸಿಇಒ, ಸಿಬ್ಬಂದಿ ವೇತನವನ್ನೂ ಸರ್ಕಾರವೇ ನೀಡುತ್ತದೆ.

ಲೆಕ್ಕ ಪರಿಶೋಧನೆ: ಎಫ್‌ಪಿಒ ಸ್ಥಾಪನೆ ಬಳಿಕ ಸದಸ್ಯರು ನೀಡಿದ ಸದಸ್ಯತ್ವ-ಷೇರು ಹಣ, ಸರ್ಕಾರ ನೀಡುವ ಸುತ್ತು ನಿಧಿ , ಸಾಲದ ಸೌಲಭ್ಯ ಹೀಗೆ ಇಲ್ಲಿನ ಪ್ರತಿ ವ್ಯವಹಾರವೂ ಪಾರದರ್ಶಕವಾಗಿರುತ್ತದೆ. ಅಲ್ಲದೇ ಪ್ರತಿ ಆರ್ಥಿಕ ವರ್ಷದಲ್ಲಿ ಲೆಕ್ಕ ಪರಿಶೋಧನೆ ಮಾಡಿಸುವ ಮೂಲಕ ಹಣಕಾಸಿನ ಲೋಪ ಆಗದಂತೆ ಎಚ್ಚರಿಕೆ ವಹಿಸುವುದನ್ನು ಕಡ್ಡಾಯ ಮಾಡಿದೆ.
ಸರ್ಕಾರ ಜಲಾನಯನ ಇಲಾಖೆ ಮೂಲಕ 75 ಅಮೃತ ಮೀನು ಉತ್ಪಾದಕ ರೈತರ ಕಂಪನಿ ಸ್ಥಾಪನೆಗೆ ಗುರಿ ನೀಡಿತ್ತು. ಇದಕ್ಕಾಗಿ 3 ವರ್ಷಗಳ ಕಾಲಮಿತಿಯನ್ನೂ ನೀಡಿದೆ. ರಾಜ್ಯದಲ್ಲಿ ಮೀನು
ಉತ್ಪಾದಕ ರೈತರ ಸಂಖ್ಯೆ ವಿರಳವಾಗಿದೆ. ಹೀಗಾಗಿ ನಿಗದಿತ 3 ವರ್ಷಗಳಲ್ಲಿ ಪ್ರತಿ ವರ್ಷ ತಲಾ 25ರಂತೆ ಎಫ್‌ಪಿಒ ರಚಿಸಲು ಜಲಾನಯನ ಇಲಾಖೆ ನಿರ್ಧರಿಸಿತ್ತು.

ಮಿತಿ ಸಡಿಲಿಕೆ: ಕೃಷಿಯಲ್ಲಿ ನಿರ್ದಿಷ್ಟ ಉತ್ಪಾದಕ ಕಂಪನಿ ಸ್ಥಾಪನೆಗೆ ನಿರ್ದಿಷ್ಟ ಕೃಷಿ ಉತ್ಪಾದಿಸುವ 300-400 ಸದಸ್ಯರು ಇರುವುದು ಕಡ್ಡಾಯ. ಆದರೆ ರಾಜ್ಯದಲ್ಲಿ ಮೀನುಗಾರಿಕೆ ಬಲವರ್ಧನೆ ಕಂಡಿಲ್ಲ. ಅದರಲ್ಲೂ ಒಳನಾಡು, ಉತ್ತರ ಒಳನಾಡಿನಲ್ಲಿ ಮೀನುವಾರಿಕೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಇದನ್ನು ಮನಗಂಡ ಸರ್ಕಾರ 300 ಸದಸ್ಯರನ್ನು ಹೊಂದುವ ಕಡ್ಡಾಯವನ್ನು 150 ಸಂಖ್ಯೆಗೆ ಇಳಿಕೆ ಮಾಡಿ ನಿರ್ಬಂಧದಲ್ಲಿ ಸಡಿಲಿಕೆ ಮಾಡಿದೆ.

ಗುರಿ ಮೀರಿದ ಸಾಧನೆ: ಮೀನುಗಾರಿಕೆ ಇಲಾಖೆ ಅ ಧಿಕಾರಿಗಳ ಬದ್ಧತೆಯ ಕಾರಣ ಮೊದಲ ವರ್ಷದಲ್ಲೇ 36 ಎಫ್‌ಪಿಒ ನೋಂದಣಿ ಆಗಿವೆ. ಅಲ್ಲದೇ ನೋಂದಣಿ ಹಂತದಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿಕೊಳ್ಳುವಲ್ಲಿ ನಿರತವಾಗಿರುವ ಇನ್ನೂ 5-6 ಕಂಪನಿಗಳು ನೋಂದಣಿಗೆ ಸಿದ್ಧವಾಗಿದೆ. ಅಲ್ಲಿಗೆ ಮೀನುಗಾರಿಕೆ ಇಲಾಖೆ ಎಫ್‌ಪಿಒ ಸ್ಥಾಪನೆಯಲ್ಲಿ ಮೊದಲ ವರ್ಷ ಪೂರ್ಣಗೊಳ್ಳುವ ಮೊದಲೇ ನಿರೀಕ್ಷೆ ಮೀರಿ ಪ್ರಗತಿ ಸಾ ಧಿಸುತ್ತಿರುವುದು ಸರ್ಕಾರಕ್ಕೂ ಸಂತಸ ತಂದಿದೆ.

– ಜಿ.ಎಸ್‌. ಕಮತರ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.