ರೋಗಗ್ರಸ್ಥ ಸಮಾಜಕ್ಕೆ ಬೇಂದ್ರೆ ಕಾವ್ಯವೇ ಮದ್ದು

ಕಾಲಲ್ಲಿ ಕಣ್ಣಿದ್ದವರು ಹೊಸ ಹಾದಿಯಲ್ಲಿ ನಡೆಯಬಲ್ಲರು. ಅಲ್ಲಿ ಹೊಸದೊಂದು ಅನುಭವ ಲೋಕ ಸೃಷ್ಟಿಯಾಗುತ್ತದೆ

Team Udayavani, Feb 3, 2022, 5:52 PM IST

ರೋಗಗ್ರಸ್ಥ ಸಮಾಜಕ್ಕೆ ಬೇಂದ್ರೆ ಕಾವ್ಯವೇ ಮದ್ದು

ಧಾರವಾಡ: ಇಂದಿನ ರೋಗಗ್ರಸ್ಥ ಸಮಾಜಕ್ಕೆ ಬೇಂದ್ರೆ ಕಾವ್ಯವೇ ಮದ್ದಾಗಿದೆ ಎಂದು ಹಿರಿಯ ನಾಟಕಕಾರ ಪ್ರೊ| ಕೆ.ವೈ. ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಧಾರವಾಡ ಕಟ್ಟೆಯು ಬೇಂದ್ರೆ ಜನ್ಮದಿನ ನಿಮಿತ್ತ ವರ್ಚುವಲ್‌ ವೇದಿಕೆಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬೇಂದ್ರೆ ಕಾವ್ಯದ ಹಿರಿಮೆ, ಭಾಷೆ ಮತ್ತು ಅವರ ಕಾವ್ಯ ಶಕ್ತಿಯ ಕುರಿತು ಮಾತನಾಡಿದರು.

“ಹಬ್ಬಿರುವ ಇರುಳಗತ್ತಲಿನಲ್ಲಿ ಹಕ್ಕಿ ನರಳಿದ ಹಾಗೆ ಒಂದು ನಿಟ್ಟುಸಿರು’ ಗಾಂಧಿ ಸಾವು ಎಂಥ ಘೋರ ಹತ್ಯೆ ಎನ್ನುವುದನ್ನು ಬೇಂದ್ರೆ ಕವಿ ಮನಸ್ಸು ಇಂಥದ್ದೊಂದು ಅದ್ಭುತ ರೂಪಕವನ್ನು ಬಳಸಿ ನೋವಿನಿಂದ ಅಭಿವ್ಯಕ್ತವಾಗುತ್ತದೆ. ಹೇಳುವವನ ಅಹಂಕಾರವನ್ನು ತಗ್ಗಿಸುವ ಮತ್ತು ಅವನಿಗೆ ಹೇಳಿದ್ದರ ಆಚೆಗೂ ಇನ್ನೂ ಹೇಳಬೇಕಾದ್ದು ಇದೆ ಎಂದು ತೋರುವ ಶಕ್ತಿ ಬೇಂದ್ರೆ ಕಾವ್ಯಕ್ಕಿದೆ. ಎಂದೂ ಮುಗಿಯದ ಅಮೃತದ ಸಾಗರದಂತೆ ಬೇಂದ್ರೆ ಕಾವ್ಯವಿದೆ ಎಂದರು.

ಬೇಂದ್ರೆ ಕಾವ್ಯವನ್ನು ಮತ್ತೆ ಮತ್ತೆ ಓದುತ್ತ ಅದನ್ನು ನಮ್ಮದಾಗಿಸಿಕೊಳ್ಳವ ಹವಣಿಕೆಯಲ್ಲಿರುವ ದೊಡ್ಡ ಪಡೆ ಇವತ್ತಿಗೂ ನಮ್ಮ ನಡುವೆ ಇರುವುದು ಬೇಂದ್ರೆ ಕಾವ್ಯದ ಜೀವಂತಿಕೆಯ ಮುಖ್ಯವಾದ ಲಕ್ಷಣವಾಗಿದೆ. ದಶಕಗಳಿಂದಲೂ ಕನ್ನಡ ಕಾವ್ಯ ಲೋಕವನ್ನು ಪ್ರಭಾವಿಸಿದ ಬೇಂದ್ರೆ ಕನ್ನಡ ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಬೇಂದ್ರೆ ಕಾವ್ಯದ ಕುರಿತು ಮಾತನಾಡುವ ಮಾತುಗಳಲ್ಲಿ ತಾನು “ಇದಮಿತ್ತಂ’ ಎಂದು ಈ ಕವಿತೆಯ ಅರ್ಥ ಇದೇ ಎಂದು ಹೇಳುವ ಭಾಷ್ಯವನ್ನು ಇನ್ನೂ ಕನ್ನಡ ವಿಮರ್ಶೆ ತೋರಿಸಿಲ್ಲ ಎನ್ನುವದು ಒಪ್ಪಿತ ಸಂಗತಿಯಾಗಿದೆ. ಬೇಂದ್ರೆ ಭಾಷೆಯನ್ನು ಪಡೆದ ಭಾಷೆ, ಅದೊಂದು ಭಾಗ್ಯಶಾಲಿಯಾದ ಭಾಷೆಯಾಗಿದೆ ಎಂದು ಹೇಳಿದರು.

ವರ್ತಮಾನದಲ್ಲಿ ನಾವು ಅನುಭವಿಸುತ್ತಿರುವ ಹಿಂಸೆ, ಅಪೇಕ್ಷೆ, ವಿರಸ, ದ್ವೇಷಗಳಿಂದ ನಮ್ಮ ನಡುವೆ ಸೃಷ್ಟಿ ಆಗುತ್ತಿರುವ “ಹೇಟ್ರೆಡ್‌ ಲೋಕವನ್ನು’ ದಾಟಲು ಕಣ್ಣಿನಲ್ಲಿ ಕಣ್ಣಿರಬೇಕು. ಕ್ಷೀರಸಾಗರದ ನಕಾಶೆಯನ್ನು ಬರೆಯಲು ಸಹ ಕಣ್ಣಲ್ಲಿ ಕಣ್ಣಿರಬೇಕು. ಇಂಥ ಸಾಮರ್ಥ್ಯವೇ ನಿಜವಾದ ಕಾವ್ಯ ಸಾಮರ್ಥ್ಯ. ಅದನ್ನು ಬೇಂದ್ರೆ ತಮ್ಮ ಕಾವ್ಯದಲ್ಲಿ ಅನುಸಂಧಾನಗೊಳಿಸಿದ್ದಾರೆ. ಕಾಲಲ್ಲಿ ಕಣ್ಣಿದ್ದವರು ಹೊಸ ಹಾದಿಯಲ್ಲಿ ನಡೆಯಬಲ್ಲರು. ಅಲ್ಲಿ ಹೊಸದೊಂದು ಅನುಭವ ಲೋಕ ಸೃಷ್ಟಿಯಾಗುತ್ತದೆ. ಇದರಲ್ಲಿ ಬೇಂದ್ರೆಯವರಿಗೆ ಗಾಢವಾದ ನಂಬಿಕೆ ಇತ್ತು ಎಂದರು.

ಧಾರವಾಡ ಕಟ್ಟೆ ಅಧ್ಯಕ್ಷ ಪ್ರೊ| ಬಸವರಾಜ ಡೋಣೂರ ಮಾತನಾಡಿ, ನಮ್ಮ ತಿಳಿವಳಿಕೆ ಮತ್ತು ಊಹೆಗೆ ನಿಲುಕದ ಅನೇಕ ವಿಸ್ಮಯಕಾರಿ ಸಂಗತಿಗಳು ಬೇಂದ್ರೆ ಕಾವ್ಯದ ಒಡಲಲ್ಲಿ ಹುದುಗಿವೆ. ಅಂಥದ್ದೊಂದು ಶಕ್ತಿ ಜನ್ಮಜಾತವೇ ಬೇಂದ್ರೆಯವರಲ್ಲಿ ಇತ್ತು. ಕಣ್ಣಿಗೆ ಕಂಡದ್ದನ್ನು ಹೇಳುವವನು ಸಾಮಾನ್ಯ ಕವಿಯಾದರೆ, ಬುದ್ಧಿ ಹಾಗೂ ಭಾವಕ್ಕೆ ನಿಲುಕದ್ದನ್ನೂ ಹೇಳುವವನೇ ಯುಗದ ಕವಿಯಾಗಲು ಸಾಧ್ಯ. ಅಂಥ ಕವಿಗಳಲ್ಲಿ ಬೇಂದ್ರೆ ಪ್ರಮುಖರು ಎಂದು ಹೇಳಿದರು.

ಲೇಖಕರಾದ ಪ್ರೊ| ಓ.ಎಲ್‌. ನಾಗಭೂಷಣಸ್ವಾಮಿ, ಪ್ರೊ| ಮಲ್ಲಿಕಾರ್ಜುನ ಮೇಟಿ, ಪ್ರೊ| ವಿಕ್ರಮ ವಿಸಾಜಿ, ಡಾ| ಆಶಾ ರಬ್‌, ಡಾ| ಇಂದಿರಾ ಪಾಟೀಲ, ಪುಟ್ಟು ಕುಲಕರ್ಣಿ, ವಸಂತಕುಮಾರ, ವಾಣಿ ಎಸ್‌., ಸ್ಮಿತಾ ಶೆಟ್ಟರ, ಗೀತಾ ಉಲ್ಲಾಸ, ಡಾ| ರಂಗಸ್ವಾಮಿ ಇನ್ನಿತರರಿದ್ದರು. ಡಾ| ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ವಿಜಯಲಕ್ಷ್ಮೀ ದಾನರಡ್ಡಿ, ಶಿವರಾಜ ಸಣಮನಿ ತಾಂತ್ರಿಕ ನೆರವು ನೀಡಿದರು.

ಟಾಪ್ ನ್ಯೂಸ್

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anjali Ambigera Case; Protest by BJP workers in Hubli

Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರಮಠದ ಜಗದ್ಗುರು ಶ್ರೀ

Anjali case; ಕಾನೂನಿಗೆ ಬೆಲೆಯಿದೆ ಎಂದು ಸರ್ಕಾರ ತೋರಿಸಲಿ: ಮೂರುಸಾವಿರ ಮಠದ ಜಗದ್ಗುರು

Anjali Ambigera case: ABVP protest in Hubli

Anjali Ambigera case: ಹುಬ್ಬಳ್ಳಿಯಲ್ಲಿ ಎಬಿವಿಪಿ ಪ್ರತಿಭಟನೆ

mango

ಧಾರವಾಡ ಮಾವು ಮೇಳಕ್ಕೆ ಉತ್ತಮ‌ ಸ್ಪಂದನೆ: 40 ಟನ್ ಮಾರಾಟ, ಮತ್ತೆ ಮೂರು ದಿನ‌ ವಿಸ್ತರಣೆ

Dhaeawad: ಶರಣರ ತತ್ವ ಪ್ರಚಾರಕ್ಕೆ ವಚನ ವಿಶ್ವವಿದ್ಯಾಲಯ ಬೇಕು : ಬಾಲ್ಕಿ ಶ್ರೀ

Dharwad: ಶರಣರ ತತ್ವ ಪ್ರಚಾರಕ್ಕೆ ವಚನ ವಿಶ್ವವಿದ್ಯಾಲಯ ಬೇಕು : ಬಾಲ್ಕಿ ಶ್ರೀ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

god promise kannada movie

Kannada Cinema; ‘ಗಾಡ್‌ ಪ್ರಾಮಿಸ್‌’ ಮುಹೂರ್ತ ಮಾಡಿದ್ರು

Wadgera; A crocodile appeared in the farm

Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.