ಅನರ್ಹರಿಗೆ ತ್ರಿಚಕ್ರ ವಾಹನ ವಿತರಣೆ-ಧರಣಿ


Team Udayavani, Feb 7, 2022, 2:27 PM IST

17kembavi

ಕೆಂಭಾವಿ: ನಿಯಮ ಗಾಳಿಗೆ ತೂರಿ ಪುರಸಭೆ ಮುಖ್ಯಾಧಿಕಾರಿ ಮೂರು ತ್ರಿಚಕ್ರ ವಾಹನಗಳನ್ನು ಅನರ್ಹ ಫಲಾನುಭವಿಗಳಿಗೆ ವಿತರಿಸಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಶನಿವಾರ ಮಧ್ಯೆರಾತ್ರಿವರೆಗೂ ಧರಣಿ ನಡೆಸಿದರು.

ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಪುರಸಭೆ ಸದಸ್ಯ ಮಲ್ಲಿನಾಥಗೌಡ ಪೊಲೀಸ ಪಾಟೀಲ, ಪುರಸಭೆ ಅನುದಾನದಲ್ಲಿ ಬಂದ ತ್ರಿಚಕ್ರ ವಾಹನಗಳನ್ನು ಮುಖ್ಯಾಧಿಕಾರಿಗಳು ಯಾರ ಗಮನಕ್ಕೂ ತರದೇ, ಶಾಸಕರು ಮೌಖೀಕ ಆದೇಶ ನೀಡಿದ್ದಾರೆ. ಪುರಸಭೆಗೆ ಹೊಸ ಅಧ್ಯಕ್ಷ ಬರುವವರೆಗೂ ಆಡಳಿತಾಧಿಕಾರಿಯ (ಸಹಾಯಕ ಆಯುಕ್ತ) ಅನುಮೋದನೆ ಪಡೆಯದೇ ಅನರ್ಹ ಫಲಾನುಭವಿಗಳಿಗೆ ತರಾತುರಿಯಲ್ಲಿ ವಾಹನ ನೀಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕೆಲಕಾಲ ಅಧಿಕಾರಿಗಳ ಮತ್ತು ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.

ಪುರಸಭೆ ಮುಂದೆ ಹೈಡ್ರಾಮಾ

ತ್ರಿಚಕ್ರ ವಾಹನ ನೀಡಿಕೆಯಲ್ಲಿ ನಡೆದ ಅಕ್ರಮದ ಬಗ್ಗೆ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಧರಣಿ ಕುಳಿತರು. ಈ ನಡುವೆ ಸದಸ್ಯರ ಮತ್ತು ಮುಖ್ಯಾಧಿಕಾರಿಗಳ ಮಧ್ಯೆ ವಾಗ್ವಾದ ನಡೆದು ಒಬ್ಬರಿಗೊಬ್ಬರು ಆತ್ಮಹತ್ಯೆ ಬೆದರಿಕೆಗಳ ಮಾತುಗಳು ಕೇಳಿ ಬಂದವು. ಆಗ ಪಿಎಸ್‌ಐ ಗಜಾನಂದ ಬಿರಾದಾರ ಆಗಮಿಸಿ ಸಂಧಾನ ನಡೆಸಿದ ನಂತರ ಮುಖ್ಯಾಧಿಕಾರಿಗಳು, ತ್ರಿಚಕ್ರ ವಾಹನ ವಾಪಸ್‌ ತರಿಸಿಕೊಂಡು ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ವಿತರಿಸಲಾಗುವುದು ಎಂದು ಲಿಖೀತ ರೂಪದಲ್ಲಿ ಸ್ಪಷ್ಟನೆ ನೀಡಿದ ನಂತರ ಮಧ್ಯರಾತ್ರಿ ಧರಣಿ ಹಿಂಪಡೆಯಲಾಯಿತು.

ಸದಸ್ಯರಾದ ರವಿಶಂಕರ ಸೊನ್ನದ, ಶರಣಪ್ಪ ಯಾಳಗಿ, ರಾಘವೇಂದ್ರ ಕವಲ್ದಾರ, ರಾಮಕೃಷ್ಣ, ರಾಜು ಬಾಂಬೆ, ನಾನಾಗೌಡ ಪಾಟೀಲ, ಮುಖಂಡರಾದ ಸಂಗಣ್ಣ ತುಂಬಗಿ, ಡಾ| ರವಿ ಅಂಗಡಿ, ಮುದೆಪ್ಪ ಪರಸನಹಳ್ಳಿ, ಭೀಮು ಮಲ್ಕಾಪುರ, ಅನ್ವರ ನಾಶಿ, ಶಿವಪ್ಪ ಕಂಬಾರ, ಚಂದ್ರು ಕುಳಗೇರಿ, ಶಂಕರ ಕರಣಗಿ, ರಮೇಶ ಜಾಧವ, ಶಿವು ಮಲ್ಲಿಭಾವಿ, ರಾಜು ಮುತ್ಯಾ, ಬಸವಣ್ಣೆಪ್ಪ ಮಾಳಳ್ಳಿಕರ್‌, ಮಲ್ಲು ಸೊನ್ನದ, ಹಳ್ಳೆಪ್ಪ ಕವಲ್ದಾರ, ದೇವು ಯಾಳಗಿ ಹಾಗೂ ಸಿದ್ದು ಬೈಚಬಾಳ ಸೇರಿದಂತೆ ಅನೇಕರಿದ್ದರು.

ಆರು ತಿಂಗಳ ಹಿಂದೆಯೇ ವಾಹನ ವಿತರಿಸಬೇಕಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಪ್ರಯುಕ್ತ ವಾಹನಗಳ ವಿತರಣೆ ವಿಳಂಬವಾಗಿದೆ. ಇತ್ತೀಚೆಗೆ ಶಹಾಪುರದಲ್ಲಿ ನಡೆದ ಸಭೆಯಲ್ಲಿ ಶಾಸಕರು, 17 ಜನ ಫಲಾನುಭವಿಗಳ ಪಟ್ಟಿಯಲ್ಲಿ ಮೂರು ಜನ ಫಲಾನುಭವಿಗಳ ಹೆಸರನ್ನು ಅಂತಿಮಗೊಳಿಸಿ ಅವರಿಗೆ ತ್ರಿಚಕ್ರ ವಾಹನ ವಿತರಿಸುವಂತೆ ಸೂಚನೆ ನೀಡಿದ್ದರು. ಈಗ ಶಾಸಕರ ಆದೇಶದ ಮೇರೆಗೆ ಶುಕ್ರವಾರ ಸಂಜೆ 3 ವಾಹನಗಳನ್ನು ವಿತರಿಸಲಾಗಿದೆ. -ಮಂಜುನಾಥ ಗುಂಡೂರ, ಮುಖ್ಯಾಧಿಕಾರಿ

ಟಾಪ್ ನ್ಯೂಸ್

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yadagiri

SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

MOdi (3)

Hate speech ಪ್ರಚಾರ: ಮೋದಿ ವಿರುದ್ಧ ಕ್ರಮಕ್ಕೆ ಸುಪ್ರೀಂನಲ್ಲಿ ರಿಟ್‌ ಅರ್ಜಿ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Himanth-Bisw

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್‌ ಬಿಸ್ವಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.