ಏಷ್ಯಾಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಮತ್ತೆ ಅಗ್ರ ಸಿರಿವಂತ
Team Udayavani, Feb 10, 2022, 6:10 AM IST
ಹೊಸದಿಲ್ಲಿ: ಮಂಗಳವಾರವಷ್ಟೇ ಏಷ್ಯಾದ ಅಗ್ರ ಶ್ರೀಮಂತ ಸ್ಥಾನಕ್ಕೆ ಏರಿದ್ದ ಉದ್ಯಮಿ ಗೌತಮ್ ಅದಾನಿ ಅವರನ್ನು ಬುಧವಾರ ಮತ್ತೆ ಮುಕೇಶ್ ಅಂಬಾನಿ ಹಿಂದಿಕ್ಕಿದ್ದಾರೆ.
ಮಂಗಳವಾರ 88.5 ಬಿಲಿಯನ್ ಡಾಲರ್ ಇದ್ದ ಅದಾನಿ ಆಸ್ತಿ ಮೌಲ್ಯ ಬುಧವಾರ ಷೇರುಪೇಟೆಯಲ್ಲಿನ ವ್ಯತ್ಯಯದಿಂದಾಗಿ 2.16 ಬಿಲಿಯನ್ ಡಾಲರ್ ಕುಸಿದಿದೆ.
87.9 ಬಿಲಿಯನ್ ಡಾಲರ್ ಇದ್ದ ಮುಕೇಶ್ ಅಂಬಾನಿ ಆಸ್ತಿ ಮೌಲ್ಯದಲ್ಲಿ ಬುಧವಾರ 1.33 ಬಿಲಿಯನ್ ಡಾಲರ್ ಏರಿಕೆಯಾಗಿದೆ.
ಹಾಗಾಗಿ ಇದೀಗ ಮತ್ತೆ ಮುಕೇಶ್ ಅಂಬಾನಿಯೇ ಏಷ್ಯಾದ ಮೊದಲ ಹಾಗೂ ವಿಶ್ವದ 10ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಗೌತಮ್ ಅದಾನಿ ಏಷ್ಯಾದ ಎರಡನೇ ಹಾಗೂ ವಿಶ್ವದ 11ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.