ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ನ ಜವಾಬ್ದಾರಿಯುತ ಕೆಲಸವನ್ನು ಶ್ಲಾಘಿಸಿದ ಪ್ರೀತಿ ಜಿಂಟಾ
Team Udayavani, Feb 13, 2022, 12:43 PM IST
ಬೆಂಗಳೂರು: ಶನಿವಾರ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಹರಾಜಿನ ಮೊದಲ ದಿನದಂದು ಮುಂಬೈ ಇಂಡಿಯನ್ಸ್ ತಂಡವನ್ನು ಬಾಲಿವುಡ್ ತಾರೆ ಮತ್ತು ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಜಿಂಟಾ ಹೊಗಳಿದರು.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ, ಪ್ರೀತಿ ಜಿಂಟಾ, ಹರಾಜಿನಲ್ಲಿ ಕೋವಿಡ್-19 ಪ್ರೋಟೋಕಾಲ್ಗಳನ್ನು ಅನುಸರಿಸಿದ್ದಕ್ಕಾಗಿ ಮುಂಬೈ ತಂಡವನ್ನು ಶ್ಲಾಘಿಸಿದರು.
ಇದನ್ನೂ ಓದಿ:20 ಲಕ್ಷದಿಂದ 10 ಕೋಟಿ ರೂ.: ದಾಖಲೆ ಬರೆದ ವೇಗಿ ಆವೇಶ್ ಖಾನ್
ಮುಂಬೈ ಮಾಲಕಿ ನೀತಾ ಅಂಬಾನಿ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. “ಐಪಿಎಲ್ ಹರಾಜು ಟೇಬಲ್ನಲ್ಲಿ ಮುಂಬೈ ಇಂಡಿಯನ್ಸ್ ಕೋವಿಡ್ ನಿಯಮ ಪಾಲಿಸಿರುವುದನ್ನು ನೋಡಲು ಸಂತೋಷವಾಗಿದೆ” ಎಂದು ಜಿಂಟಾ ಶನಿವಾರ ಟ್ವೀಟ್ನಲ್ಲಿ ಬರೆದಿದ್ದಾರೆ. “ನೀತಾ ಅಂಬಾನಿಗೆ ಸುಂದರವಾದ ಕಣ್ಣುಗಳಿವೆ ಎಂದು ಒಪ್ಪಿಕೊಳ್ಳಬೇಕು” ಎಂದೂ ಜಿಂಟಾ ಹೇಳಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಪ್ರೀತಿ ಜಿಂಟಾ ಅವರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ.
Good to see Mumbai Indians are Covid compliant at the IPL auction table? Must confess Nita Ambani has pretty eyes ? #tataipl #iplauction @IPL #ting pic.twitter.com/Y1MLbCkSeg
— Preity G Zinta (@realpreityzinta) February 12, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ