15ನೇ ಹಣಕಾಸು ಯೋಜನೆ: ಗ್ರಾ.ಪಂ. ಅನುದಾನಕ್ಕೆ ಕತ್ತರಿ


Team Udayavani, Feb 25, 2022, 6:18 AM IST

15ನೇ ಹಣಕಾಸು ಯೋಜನೆ: ಗ್ರಾ.ಪಂ. ಅನುದಾನಕ್ಕೆ ಕತ್ತರಿ

ಕುಂದಾಪುರ: ಸ್ಥಳೀಯ ಸರಕಾರವೆಂಬ ಉಪಾಧಿ ಹೊಂದಿರುವ ಗ್ರಾ.ಪಂ.ಗಳಿಗೆ 15ನೇ ಹಣಕಾಸು ಯೋಜನೆಯಡಿ ನೀಡುವ ಅನುದಾನಕ್ಕೆ 2021-22ನೇ ಸಾಲಿನಲ್ಲಿ ಕತ್ತರಿ ಬಿದ್ದಿದೆ. 2020-21ನೇ ಸಾಲಿಗಿಂತ ಈ ವರ್ಷ ರಾಜ್ಯದ ಪಂಚಾಯತ್‌ಗಳಿಗೆ ನೀಡುವ ಅನುದಾನ ಇಳಿಕೆಯಾಗಿದೆ.

ಉಡುಪಿ ಜಿಲ್ಲೆಯ 158 ಗ್ರಾ.ಪಂ.ಗಳು, ದಕ್ಷಿಣ ಕನ್ನಡ ಜಿಲ್ಲೆಯ 218 ಗ್ರಾ.ಪಂ.ಗಳ ಸಹಿತ ರಾಜ್ಯದ ಒಟ್ಟು 6,011 ಗ್ರಾ.ಪಂ.ಗಳಿಗೆ 2021-22ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆಯು ಅನುದಾನವನ್ನು ಈಗಾಗಲೇ ಹಂಚಿಕೆ ಮಾಡಿದೆ. ಉಡುಪಿಯ 7 ತಾಲೂಕುಗಳ 158 ಗ್ರಾ.ಪಂ.ಗಳಿಗೆ 50.17 ಕೋ.ರೂ., ದ.ಕ.ದ 7 ತಾಲೂಕುಗಳ 218 ಗ್ರಾ.ಪಂ.ಗಳಿಗೆ 67.85 ಕೋ.ರೂ. ಸಹಿತ ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ 2,020.45 ಕೋ.ರೂ. ಹಂಚಿಕೆ ಆಗಿದೆ.

ಎಷ್ಟು ಕಡಿತ? :

15ನೇ ಹಣಕಾಸು ಯೋಜನೆಯಡಿ ಜನಸಂಖ್ಯೆಗೆ ಅನುಗುಣವಾಗಿ ಆಯಾಯ ಪಂಚಾಯತ್‌ಗೆ ಕನಿಷ್ಠ 10ರಿಂದ ಗರಿಷ್ಠ 40 ಲಕ್ಷ ರೂ.ವರೆಗೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಅದರಲ್ಲಿ ಶೇ. 60ನ್ನು ಜಲಜೀವನ್‌ ಮಿಶನ್‌ಗೆ ಮೀಸಲಿಡಬೇಕು, ಉಳಿದ ಶೇ. 40ರಲ್ಲಿ ಶೇ. 15ರಷ್ಟು ಪ.ಜಾತಿ, ಪಂಗಡದವರಿಗೆ, ತಲಾ ಶೇ. 10ರಷ್ಟು ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಕಡ್ಡಾಯವಾಗಿ ವಿನಿಯೋಗಿಸಬೇಕು. ಉಳಿದ ಶೇ. 5 ಅನುದಾನವನ್ನು ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಗ್ರಾ.ಪಂ.ಗಳಿಗೆ ಇಂತಿಷ್ಟೇ ಕಡಿತ ಮಾಡಿದ್ದಾರೆ ಎನ್ನುವ ಸ್ಪಷ್ಟತೆಯಿಲ್ಲ. ಉದಾಹರಣೆಗೆ, ಕಳೆದ ಸಾಲಿನಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾ.ಪಂ.ಗೆ 28,68,282 ರೂ. ನೀಡಿದ್ದರೆ ಈ ಸಾಲಿನಲ್ಲಿ 21,52,832 ರೂ. ಅಷ್ಟೇ ನೀಡಲಾಗಿದೆ. ಅಂದರೆ 7,15,450 ರೂ. ಕಡಿಮೆ ನೀಡಲಾಗಿದೆ. ಇದು ಒಂದು ಗ್ರಾ.ಪಂ.ನ ಉದಾಹರಣೆ.

ಅಭಿವೃದ್ಧಿಗೆ ಅಡ್ಡಿ :

ಗ್ರಾ.ಪಂ.ಗಳು ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬೇರೆಲ್ಲ ಅನುದಾನಕ್ಕಿಂತ 15ನೇ ಹಣಕಾಸು ಯೋಜನೆಯ ಅನುದಾನವನ್ನೇ ಹೆಚ್ಚಾಗಿ ನಂಬಿವೆ. ಆದರೆ ನಿರೀಕ್ಷಿತ ಅನುದಾನ ಬಾರದ ಕಾರಣ ವರ್ಷದ ಹಿಂದಷ್ಟೇ ಆಯ್ಕೆಯಾದ ನೂತನ ಗ್ರಾ. ಪಂ. ಸದಸ್ಯರು ಜನರ ನಿರೀಕ್ಷೆಗಳಿಗೆ ಸ್ಪಂದಿಸಲಾಗದೆ ಟೀಕೆ ಎದುರಿಸುವಂತಾಗಿದೆ. ಪಂಚಾಯತ್‌ಗಳಿಗೆ ಸಿಗುವುದೇ ಅಲ್ಪ ಮೊತ್ತ. ಅದರಲ್ಲೂ ಈ ರೀತಿ ಕಡಿತ ಮಾಡಿದರೆ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕಾರ್ಯ ಅಥವಾ ತುರ್ತು ಕಾಮಗಾರಿ ಕೈಗೊಳ್ಳಲು ಸಾಧ್ಯ ಎನ್ನುವುದು ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಯು. ಸತ್ಯನಾರಾಯಣ ರಾವ್‌ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲೆ :

ತಾಲೂಕು           ಗ್ರಾ.ಪಂ.              ಅನುದಾನ

(ಲಕ್ಷ ರೂ.ಗಳಲ್ಲಿ)

ಬಂಟ್ವಾಳ           58           1,703.37

ಬೆಳ್ತಂಗಡಿ           48           1,388.19

ಕಡಬ   21           598.16

ಮಂಗಳೂರು     42           1,400.45

ಮೂಡಬಿದಿರೆ    12           391.95

ಪುತ್ತೂರು            22           669.28

ಸುಳ್ಯ    25           613.80

ಒಟ್ಟು   218         6,765.21

ಉಡುಪಿ ಜಿಲ್ಲೆ :

ತಾಲೂಕು           ಗ್ರಾ.ಪಂ.              ಅನುದಾನ

(ಲಕ್ಷ ರೂ.ಗಳಲ್ಲಿ)

ಬ್ರಹ್ಮಾವರ         27           813.25

ಬೈಂದೂರು        19           730.94

ಹೆಬ್ರಿ     8              239.43

ಕಾಪು    16           567.40

ಕಾರ್ಕಳ               27           824.06

ಕುಂದಾಪುರ      45           1,197.89

ಉಡುಪಿ               16           644.46

ಒಟ್ಟು   158         5,017.43

ಕೇಂದ್ರದಿಂದ ಎಷ್ಟು ಅನುದಾನ ಬಂದಿದೆಯೋ ಅದೆಲ್ಲವನ್ನೂ ರಾಜ್ಯದ ಗ್ರಾ.ಪಂ.ಗಳಿಗೆ ಇಂತಿಷ್ಟು ಎಂದು ಹಂಚಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಯಾದರೆ ಎಲ್ಲ ಗ್ರಾ.ಪಂ.ಗಳಿಗೆ ಒದಗಿಸಲಾಗುವುದು. ಶಿಲ್ಪಾ ಶರ್ಮ, ಆಯುಕ್ತರು, ಪಂ. ರಾಜ್‌ ಇಲಾಖೆ, ಬೆಂಗಳೂರು

 

ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.