ಅಂಕೋಲಾ: ರೆಸ್ಟೋರೆಂಟ್ ಗೆ ನುಗ್ಗಿ ಮುಸುಕುಧಾರಿಗಳಿಂದ ಲಕ್ಷಾಂತರ ನಗದು,ಮದ್ಯದ ಬಾಟಲಿ ಕಳ್ಳತನ
Team Udayavani, Mar 1, 2022, 4:14 PM IST
ಅಂಕೋಲಾ : ಲಕ್ಷಾಂತರ ರೂಪಾಯಿ ನಗದು ಮತ್ತು ಮದ್ಯದ ಬಾಟಲಿ ಕಳುವು ಮಾಡಿದ ಘಟನೆ ಪಟ್ಟಣದ ರಾ.ಹೆ 66 ಕ್ಕೆ ಹೊಂದಿರುವ ಪೀಕಾಕ್ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ನಡೆದಿದೆ.
ರಾತ್ರಿ ವ್ಯಾಪಾರ ಮುಗಿಸಿಕೊಂಡು ಬಾರ್ ಬಂದ ಮಾಡಿ ಸಿಬ್ಬಂದಿಗಳು ಅಲ್ಲಿಯೇ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ್ದರು. ರೆಸ್ಟೋರೆಂಟ್ ನ ಹಿಂದೆ ಇರುವ ಬಾಗಿಲಿನ ಜಾಳಿಗೆಯನ್ನು ಸರಿಸಿ, ಇನ್ನೊಂದು ಬಾಗಿಲನ್ನು ಒಡೆದು ಮುರಿದು ಕಳ್ಳರು ಒಳ ಪ್ರವೇಶಿಸಿದಂತೆ ಕಂಡು ಬರುತ್ತಿದ್ದು ಕ್ಯಾಶ್ ಕೌಂಟರ್ ಬಳಿ ಬಂದು ಪೆಟ್ಟಿಗೆ ಒಡೆದು ಅಲ್ಲಿನ ನಗದು ಕಳ್ಳತನ ಮಾಡಿದ್ದಾರೆ ನಂತರ ಮದ್ಯದ ಬಾಕ್ಸುಗಳನ್ನು ಸಂಗ್ರಹಿಸಿಟ್ಟ ಕೋಣೆಗೆ ನುಗ್ಗಿ ಕೆಲವು ಬಾಕ್ಸುಗಳನ್ನು ಕದ್ದೊಯ್ದಿರುವುದಾಗಿ ತಿಳಿದು ಬಂದಿದೆ.
ಇಬ್ಬರು ಮುಸುಕುಧಾರಿಗಳು ಮಾರಕಾಶ್ತ್ರ ಹಿಡಿದು ಒಳ ಪ್ರವೇಶಿಸಿರುವುದು ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅಂಕೋಲಾ ಪಿಎಸ್ಐ ಪ್ರೇಮನಗೌಡ ಪಾಟೀಲ ತಂಡ ಜೊತೆಗೆ ಶ್ವಾನದಳ ಬೆರಳಚ್ಚು ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ