ಬಜೆಟ್‌ ಮೇಲೆ ಜನತೆ ನಿರೀಕ್ಷೆ ನೂರಾರು

Team Udayavani, Mar 2, 2022, 2:08 PM IST

ಬಜೆಟ್‌ ಮೇಲೆ ಜನತೆ ನಿರೀಕ್ಷೆ ನೂರಾರು

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಸಭೆಯಲ್ಲಿ ಮಾ.4ರಂದುಮಂಡಿಸಲಿರುವ 2022-23ನೇ ಸಾಲಿನ ಬಜೆಟ್‌ ನಲ್ಲಿಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂಮೂಲ ಸೌಕರ್ಯಗ ಳಿಗೆ ಈ ಬಾರಿ ಬಜೆಟ್‌ನಲ್ಲಿ ಒತ್ತು ಸಿಗಬಹುದೆಂದು ಜಿಲ್ಲೆಯ ಜನರು ನಿರೀಕ್ಷಿಸಿದ್ದಾರೆ.

ವಿಶ್ವ ವಿಖ್ಯಾತ ಬೇಲೂರು, ಹಳೆಬೀಡು, ಶ್ರವಣಬೆಳಗೊಳದ ಶಿಲ್ಪಕಲಾ ವೈಭವದ ಜೊತೆಗೆಕೋರಮಂಗಲ, ಜಾವಗಲ್‌, ಮೊಸಳೆ ಗ್ರಾಮ, ರಾಮನಾಥಪುರ ಮತ್ತಿತರ ಗ್ರಾಮಗಳಲ್ಲಿ ಅದ್ಭುತ ಶಿಲ್ಪಕಲೆಯ ಸಿರಿಯ ದೇಗುಲಗಳಿವೆ. ಜೊತೆಗೆ ಬೇಲೂರಿನ ಯಗಚಿಹಾಗೂ ಹಾಸನ ತಾಲೂಕಿನ ಹೇಮಾವತಿ ಡ್ಯಾಂ ಬಳಿ ಉದ್ಯಾನವನ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ವಿಫ‌ುಲ ಅವಕಾಶಗಳಿವೆ. ಆದರೆ, ಆ ನಿಟ್ಟಿನಲ್ಲಿ ಯೋಜನೆಗಳು ರೂಪಗೊಂಡರೂ ಅನುದಾನದಕೊತೆಯಿಂದ ಅನುಷ್ಠಾನಗೊಂಡಿಲ್ಲ. ಮಾ.4ರಂದು ಸಿಎಂ ಬೊಮ್ಮಾಯಿ ಮಂಡಿಸಲಿರುವ ಬಜೆಟ್‌ನಲ್ಲಿ ಈಯೋಜನೆಗಳು ಘೋಷಣೆ ಆಗಬಹುದೆಂಬ ನಿರೀಕ್ಷೆ ಗರಿಗೆದರಿದೆ.

 ಹಳ್ಳ ಹಿಡಿದ 400 ಕೋಟಿ ರೂ.ಯೋಜನೆ: ಬೇಲೂರು ಪಟ್ಟಣದಲ್ಲಿ ಚನ್ನಕೇಶವ ದೇವಾಲಯದಮುಖ್ಯ ರಸ್ತೆ ಅಗಲೀಕರಣ, ದೇವಾಲಯದಸುತ್ತಲಿರುವ ಪ್ರದೇಶದ ಅಭಿವೃದ್ಧಿ ಯೋಜನೆಗಳಾಗಬೇಕು. ಹಳೆಬೀಡಿನಲ್ಲಿ ದೇವಾಲಯದಪರಿಸರದ ಅಭಿವೃದ್ಧಿಯ ಜೊತೆಗೆ ದ್ವಾರಸಮುದ್ರಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಸೇರಿದಂತೆ ಹಲವುಅಭಿವೃದ್ಧಿ ಯೋಜನೆಗಳ ನಿರೀಕ್ಷೆಯಿದೆ. ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಸುಮಾರು400 ಕೋಟಿ ರೂ.ಅಭಿವೃದ್ಧಿ ಯೋಜನೆಯ ಪ್ರಸ್ತಾವನೆ ಸಿದ್ಧಗೊಂಡಿತ್ತು. ಆದರೆ, ಆ ಪ್ರಸ್ತಾವನೆಗೆ ಚಾಲನೆ ಸಿಗಲೇ ಇಲ್ಲ.

ಪಾಳು ಭೂಮಿ ಆಗುತ್ತಾ ಬೃಂದಾವನ: ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಡ್ಯಾಂಮುಂಭಾಗ ಸುಮಾರು 200 ಎಕರೆಗೂ ಹೆಚ್ಚುಪ್ರದೇಶ ಪಾಳು ಬಿದ್ದಿದೆ. ಕೆಆರ್‌ಎಸ್‌ನ ಬೃಂದಾವನಮಾದರಿಯಲ್ಲಿ ಹೇಮಾವತಿ ಡ್ಯಾಂನ ಮುಂಭಾಗವೂ ಉದ್ಯಾನವನ ನಿರ್ಮಾಣ ಮಾಡಿದರೆ,ಪ್ರವಾಸೋದ್ಯಮಕ್ಕೆ ಒತ್ತು ಸಿಗಲಿದೆ. ಹಾಗೆಯೇ,ಬೇಲೂರಿನ ಯಗಚಿ ಡ್ಯಾಂ ಮುಂಭಾಗವೂ ಸುಂದರ ಉದ್ಯಾನವನ ಹಾಗೂ ಯಗಚಿ ಜಲಾಶಯದಲ್ಲಿಬೋಟಿಂಗ್‌ ವ್ಯವಸ್ಥೆ ಮಾಡಿದರೆ, ಬೇಲೂರುದೇವಾಲಯದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆಹೆಚ್ಚು ಆಕರ್ಷಿಸುತ್ತದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಯೋಜನೆ ಘೋಷಣೆ ಆಗಬಹುದೆಂದು ನಿರೀಕ್ಷಿಸಲಾಗಿದೆ.

ರಸ್ತೆ ಅಭಿವೃದ್ಧಿ ನಿರೀಕ್ಷೆ: ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಗಡಿ -ಸೋಮವಾರ ಪೇಟೆ ರಸ್ತೆಯನ್ನು ಕೆಶಿಪ್‌-3ನಲ್ಲಿಅಭಿವೃದ್ಧಿಪಡಿಸುವ ಯೋಜನೆ ಮಂಜೂರಾಗಿತ್ತು.ಹಾಸನ ಜಿಲ್ಲೆಯಲ್ಲಿ ಈ ರಸ್ತೆ ಸುಮಾರು 33 ಕಿ.ಮೀ.ಹಾದು ಹೋಗುತ್ತದೆ. ಹೊಳೆನರಸೀಪುರ ಮತ್ತುಅರಕಲಗೂಡು ತಾಲೂಕಿನಲ್ಲಿ ಹಾದು ಹೋಗುವ ಈರಸ್ತೆಯ ಕಾಮಗಾರಿ ಈಗ ನಡೆಯುತ್ತಿದೆ. ಈರಸ್ತೆಯನ್ನು ಬಿಟ್ಟರೆ ಕಳೆದ ಮೂರು ವರ್ಷಗಳಲ್ಲಿರಾಜ್ಯ ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ ಯಾವುದೇಯೋಜನೆ ಹಾಸನ ಜಿಲ್ಲೆಗೆ ಮಂಜೂರಾಗಿಲ್ಲ. ಕೆಶಿಪ್‌-4 ಯೋಜನೆಯಡಿ 2943 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು ರಾಜ್ಯ ಲೋಕೋಪಯೋಗಿ ಇಲಾಖೆ ಡಿಪಿಆರ್‌ ಸಿದ್ಧಪಡಿಸಿದೆ. ಆ ಪೈಕಿ ಹಾಸನ ಜಿಲ್ಲೆಯನ್ನು ಸಂರ್ಪಕಿಸುವ 3 ರಸ್ತೆ ಅಭಿವೃದ್ಧಿ ಯೋಜನೆಗಳಿವೆ.

 ಮೂಲ ಸೌಕರ್ಯಕ್ಕೆ ರಸ್ತೆ ಪೂರಕ: ಸಕಲೇಶಪುರ (ದೋಣಿಗಾಲ್‌) – ಮಡಿಕೇರಿ ನಡುವಿನ 95 ಕಿ.ಮೀ.

ರಸ್ತೆ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧಗೊಂಡಿದೆ.

ಹಾಸನ-ದುದ್ದ-ತಿಪಟೂರು ನಡುವಿನ 101 ಕಿ.ಮೀ.ಹಾಗೂ ಶ್ರೀ ರಂಗಪಟ್ಟಣ – ಕೆ.ಆರ್‌.ಪೇಟೆ -ಚನ್ನರಾಯಪಟ್ಟಣ ನಡುವಿನ 64 ಕಿ.ಮೀ. ರಸ್ತೆಅಭಿವೃದ್ಧಿಯ ಡಿಪಿಆರ್‌ ಸಿದ್ಧ ವಾಗುತ್ತಿದೆ. ಈ ರಸ್ತೆಗಳು ಹಾಸನ ಜಿಲ್ಲೆಯ ಮೂಲಸೌಕರ್ಯಅಭಿವೃದ್ಧಿಗೆ ಪೂರಕವಾಗಿವೆ. ಬಜೆಟ್‌ನಲ್ಲಿ ಕೆಶಿಪ್‌-4ಯೋಜನೆ ಅನುಷ್ಠಾನದ ಘೋಷ ಣೆಯಾದರೆಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ಮೂರುರಸ್ತೆಗಳ ಅಭಿವೃದ್ಧಿಯೂ ಸೇರಲಿದೆ. ಬಜೆಟ್‌ನಲ್ಲಿ ಈ ಘೋಷಣೆ ಆಗಬಹುದೆಂಬ ನಿರೀಕ್ಷೆಯಿದೆ.

ಕರಡಿ ಧಾಮ: ಅರಸೀಕೆರೆ ತಾಲೂಕಿನ ನಾಗಪುರಿಅರಣ್ಯ ವ್ಯಾಪ್ತಿಯ ಹಿರೇಕಲ್ಲು ಡ್ಡದಲ್ಲಿ ಕರಡಿಧಾಮನಿರ್ಮಾಣಕ್ಕೆ ರಾಜ್ಯ ವನ್ಯಜೀವಿ ಮಂಡಳಿಯು ಮೂರು ವರ್ಷಗಳ ಹಿಂದೆಯೇ ಅನುಮೋದನೆ ನೀಡಿದೆ. ಆನಂತರ ಅರಣ್ಯ ಇಲಾಖೆ ಸುಮಾರು 100 ಕರಡಿಗಳಿರುವ ಈ ಪ್ರದೇಶವನ್ನ ಒಳಗೊಂಡ 10,088 ಹೆಕ್ಟೇರ್‌ ಪ್ರದೇಶದಲ್ಲಿ ಕರಡಿಧಾಮ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ಸಲ್ಲಿಸಿಎರಡು ವರ್ಷಗಳಾಗಿವೆ. ಯೋಜ ನೆ ಮಂಜೂರಾದರೆರಾಜ್ಯದ ಎರಡನೇ ಕರಡಿ ಧಾಮವಾಗಿ ರೂಪುಗೊಳ್ಳಲಿದೆ. ಕರಡಿಧಾಮ ನಿರ್ಮಾಣವಾದರೆ ಅರಸೀಕೆರೆ ತಾಲೂಕಿನ ಜನರಿಗೆ ಕರಡಿ ಗಳ ಉಪಟಳ ತಪ್ಪುತ್ತದೆ. ಜೊತೆಗೆ ನಾಗಪುರಿ ಅರಣ್ಯ ಪ್ರವಾಸಿ ತಾಣವಾಗಿಯೂಗುರ್ತಿಸಿಕೊಳ್ಳಲಿದೆ. ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಬಗ್ಗೆ ಜನತೆ ನಿರೀಕ್ಷೆ ಅಪಾರವಾಗಿದೆ.

ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.