ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ : ಪ್ರಶಸ್ತಿ ಸುತ್ತಿಗೆ ಲಕ್ಷ್ಯ ಸೇನ್ ಓಟ
Team Udayavani, Mar 20, 2022, 6:45 AM IST
ಬರ್ಮಿಂಗ್ಹ್ಯಾಮ್: ಭಾರತದ ಭರವಸೆಯ ಶಟ್ಲರ್ ಲಕ್ಷ್ಯ ಸೇನ್ ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಅವರು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆ ಇರಿಸಿದ್ದಾರೆ.
ಶನಿವಾರ ನಡೆದ ತೀವ್ರ ಪೈಪೋಟಿಯ ಸೆಮಿಫೈನಲ್ನಲ್ಲಿ ಲಕ್ಷ್ಯ ಸೇನ್ ಹಾಲಿ ಚಾಂಪಿಯನ್, ಮಲೇಶ್ಯಾದ ಲೀ ಜೀ ಜಿಯಾ ಅವರನ್ನು 21-13, 12-21, 21-19 ಅಂತರದಿಂದ ಮಣಿಸಿದರು. ಲೀ ಕ್ವಾರ್ಟರ್ ಫೈನಲ್ನಲ್ಲಿ ಜಪಾನಿನ ಬಲಿಷ್ಠ ಆಟಗಾರ ಕೆಂಟೊ ಮೊಮೊಟ ಅವರನ್ನು 3 ಗೇಮ್ಗಳಲ್ಲಿ ಸೋಲಿಸಿ ಉಪಾಂತ್ಯ ತಲುಪಿದ್ದರು. ಆದರೆ ಇಲ್ಲಿ ಭಾರತೀಯನೆದುರು ಲೀ ಆಟ ನಡೆಯಲಿಲ್ಲ.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಈವರೆಗೆ ಕೇವಲ ಇಬ್ಬರು ಭಾರತೀಯರಷ್ಟೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇವರೆಂದರೆ ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್. ಇವರ ಸಾಲನ್ನು ಅಲಂಕರಿಸಿಸುವ ಚಿನ್ನದಂಥ ಅವಕಾಶವೊಂದು ಲಕ್ಷ್ಯ ಸೇನ್ ಮುಂದಿದೆ.
ಸೇನ್ ಮೊದಲ ಗೇಮ್ ಸುಲಭದಲ್ಲಿ ವಶಪಡಿಸಿಕೊಂಡರು. ದ್ವಿತೀಯ ಗೇಮ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ನಿರ್ಣಾಯಕ ಗೇಮ್ನಲ್ಲಿ ಹಿನ್ನಡೆಯಿಂದ ಪಾರಾಗಿ ಗೆಲುವಿನ ಬಾವುಟ ಹಾರಿಸುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ