ಉಕ್ರೇನ್ ವಿದ್ಯಾರ್ಥಿಗಳಿಗೆ ಫೆಡರರ್ ಆರ್ಥಿಕ ನೆರವು
Team Udayavani, Mar 20, 2022, 6:50 AM IST
ಬರ್ನ್ (ಸ್ವಿಜರ್ಲ್ಯಾಂಡ್): ರಷ್ಯಾ ದಾಳಿಯಿಂದ ಸಂಕಟಕ್ಕೀಡಾಗಿರುವ ಉಕ್ರೇನ್ ವಿದ್ಯಾರ್ಥಿಗಳಿಗೆ ಖ್ಯಾತ ಟೆನಿಸಿಗ ರೋಜರ್ ಫೆಡರರ್ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ತಮ್ಮ ಫೌಂಡೇಶನ್ ಮೂಲಕ 500,000 ಡಾಲರ್ ಮೊತ್ತ ನೀಡುವುದಾಗಿ ಘೋಷಿಸಿದ್ದಾರೆ.
“ಉಕ್ರೇನಿನ ಯುದ್ಧಪೀಡಿತ ದೃಶ್ಯಗಳು ನಿಜಕ್ಕೂ ಭಯಾನಕ. ಹೃದಯ ಬಿರಿಯುವಂತಿವೆ. ಅಲ್ಲಿ ಮುಗ್ಧ ಜನರ ಹತ್ಯೆಯಾಗುತ್ತಿದೆ. ಉಕ್ರೇನಿನ ಸುಮಾರು 6 ಮಿಲಿಯನ್ ಮಕ್ಕಳೀಗ ವಿದ್ಯಾಭ್ಯಾಸ ವಂಚಿತರಾಗಿದ್ದಾರೆ. ಮೊದಲು ಇವರ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ’ ಎಂದು ರೋಜರ್ ಫೆಡರರ್ ಹೇಳಿದ್ದಾರೆ.
ಮತ್ತೋರ್ವ ಟೆನಿಸಿಗ, ಬ್ರಿಟನ್ನಿನ ಆ್ಯಂಡಿನ ಮರ್ರೆ ಕೂಡ ಉಕ್ರೇನಿನ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ.