ಚೀನದಲ್ಲಿ ವಿಚ್ಛೇದನ ಪ್ರಮಾಣ ಇಳಿಕೆ
Team Udayavani, Mar 24, 2022, 8:05 AM IST
ಬೀಜಿಂಗ್: ಅತಿ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರವಾದ ಚೀನದಲ್ಲಿ ವಿಚ್ಛೇದನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
2021ರಲ್ಲಿ ದೇಶದಲ್ಲಿ ಒಟ್ಟು 21 ಲಕ್ಷ ದಂಪತಿ ವಿಚ್ಛೇದನ ಪಡೆದಿದ್ದಾರೆ. 2020ರಲ್ಲಿ 37 ಲಕ್ಷ ದಂಪತಿ ವಿಚ್ಛೇದನ ಪಡೆದಿದ್ದು, ಆ ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ವಿಚ್ಛೇದನ ಶೇ.43 ಇಳಿಕೆ ಕಂಡಿದೆ.
ಈ ರೀತಿ ಒಮ್ಮೆಲೆ ಇಳಿಕೆ ದಾಖಲಾಗುವುದಕ್ಕೆ ಕಾರಣ ಸರ್ಕಾರದ ಹೊಸ ನಿಯಮ. ದೇಶದಲ್ಲಿ ಜನನ ಪ್ರಮಾಣ ಅತ್ಯಂತ ಕಡಿಮೆಯಾಗಿರುವ ಹಿನ್ನೆಲೆ, ಸರ್ಕಾರವು ಜನನ ಪ್ರಮಾಣ ಹೆಚ್ಚಿಸಲು ಸಕಲ ರೀತಿಯ ಪ್ರಯತ್ನ ಮಾಡುತ್ತಿದೆ. ಅದೇ ನಿಟ್ಟಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ದಂಪತಿಗೆ ಹೆಚ್ಚುವರಿ ಒಂದು ತಿಂಗಳ ಕಾಲಾವಕಾಶ ಕೊಟ್ಟು ದಾಂಪತ್ಯದಲ್ಲಿರುವ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆ ಕಾರಣದಿಂದಾಗಿಯೇ ವಿಚ್ಛೇದನ ಸಂಖ್ಯೆಯೂ ಇಳಿಕೆಯಾಗಿದೆ.
ಇದೇ ವೇಳೆ, ಆ ದೇಶದಲ್ಲಿ ಮದುವೆ ನೋಂದಣಿ ಪ್ರಮಾಣದಲ್ಲೂ ಭಾರೀ ಇಳಿಕೆಯಾಗಿದೆ. ಕಳೆದ 36 ವರ್ಷಗಳಲ್ಲೇ ಅತ್ಯಂತ ಕಡಿಮೆ ಮದುವೆ ನೋಂದಣಿಯು 2021ರಲ್ಲಾಗಿದೆ ಎಂದು ಚೀನ ಸರ್ಕಾರದ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್
China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು
Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!
UAE Rains: ಭಾರೀ ಗಾಳಿ-ಮಳೆಗೆ ನಲುಗಿದ ಯುಎಇ; ಹಲವು ವಿಮಾನ ಸಂಚಾರ ರದ್ದು
Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು