ಯುವಕನಿಂದ ಉಪಗ್ರಹ ಉಡಾವಣೆ  

ಅಮೆರಿಕದ ಸ್ಪೆಸೆಕ್ಸ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ ಆಲ್ದೂರು ಯುವಕ

Team Udayavani, Apr 4, 2022, 2:58 PM IST

satellite

ಆಲ್ದೂರು: ತನ್ನದೇ ಸ್ವಂತ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾರಂಭಿಸಿ ಉಪಗ್ರಹವನ್ನು ತಯಾರಿಸಿ ಅಮೆರಿಕದ ಸ್ಪೆಸೆಕ್ಸ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೇಶವೇ ಹೆಮ್ಮೆಪಡುವಂತ ಸಾಧನೆಯನ್ನು ಆಲ್ದೂರಿನ ಯುವಕ ಅವೇಜ್‌ ಅಹಮದ್‌ ಮಾಡಿದ್ದಾರೆ. ಆಲ್ದೂರು ಜನತೆ ತಮ್ಮ ಊರಿನ ಯುವಕನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಅವೇಜ್‌ ಅಹಮದ್‌ ಅವರ ಸಂಶೋಧನೆಯ ಉಪಗ್ರಹ ಬೇರೆ ಎಲ್ಲಾ ಉಪಗ್ರಹಗಳಿಗಿಂತ ಶೇ.50ಹೆಚ್ಚು ಡೇಟಾವನ್ನು ಬಿಡುಗಡೆಗೊಳಿಸುತ್ತದೆ. ಈ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತದೆ.

ಇಸ್ರೋದಿಂದಲೇ ತಮ್ಮ ಪ್ರಥಮ ಉಪಗ್ರಹ ಆನಂದ್‌ ಅನ್ನು ಉಡಾವಣೆ ಮಾಡುವ ಮಹತ್ವಕಾಂಕ್ಷೆ ಅವೇಜ್‌ ಅವರದಾಗಿತ್ತು. ಆದರೆ ಇಸ್ರೋದಲ್ಲಿ ಉಡಾವಣೆಗೆ ಡೇಟ್‌ ಸಿಗದ ಕಾರಣ ತಮ್ಮದೇ ನಿರ್ಮಾಣದ ಮತ್ತೂಂದು ಉಪಗ್ರಹ ಶಕುಂತಲಾವನ್ನು ಅಮೆರಿಕಾದ ಸ್ಪೆಸೆಕ್ಸ್ ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ಶೀಘ್ರದಲ್ಲೇ ಇಸ್ರೋದಿಂದ ತಮ್ಮ ಮೊದಲ ನಿರ್ಮಾಣದ ಉಪಗ್ರಹವನ್ನು ಉಡಾವಣೆ ಮಾಡುವ ಕನಸು ಶೀಘ್ರದಲ್ಲೇ ನನಸಾಗಲಿದೆ.

ಅವೇಜ್‌ ಅಹಮದ್‌ ಆಲ್ದೂರಿನ ರಾಯಲ್‌ ಮೆಡಿಕಲ್ಸ್‌ ಮಾಲೀಕ ನದೀಮ್‌ ಅಹಮದ್‌ ಅವರ ಪುತ್ರ. ಆಲ್ದೂರಿನ ರೋಸ್‌ ಬಡ್‌, ಅಕ್ಷರ ಪಬ್ಲಿಕ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಪಡೆದು ಪ್ರೌಡಶಿಕ್ಷಣವನ್ನು ಆಲ್ದೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಮುಗಿಸಿದರು. ಸಿಇಟಿಯಲ್ಲಿ 477ನೇ ರ್‍ಯಾಂಕ್‌ ಪಡೆದು ಆರ್‌.ವಿ. ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಜೆಇಇ ಪರೀಕ್ಷೆಯಲ್ಲಿ 2000 ರ್‍ಯಾಂಕ್‌ ಪಡೆದು ಭಾರತದ ನಂ.1 ನಿಟ್‌ ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಭಾರತದ ನಂ.1 ಖಾಸಗಿ ಕಾಲೇಜು ಬಿಟ್ಸ್‌-ಪಿಲಾನಿ(ಬಿರ್ಲಾ ಇನ್ಸ್‌ಟಿಟ್ಯೂಟ್‌ ಆಫ್‌ಟೆಕ್ನಾಲಜಿ ಆ್ಯಂಡ್‌ ಸೈನ್ಸ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಮುಂದುವರಿಸಿದರು. ಎಂಎಸ್ಸಿ ಮ್ಯಾಥಮೆಟಿಕ್ಸ್‌ ಡಿಗ್ರಿ ಪಡೆದು ಹೊರಬಂದ ಪಿಕ್ಸೆಲ್‌ ಎಂಬ ತನ್ನದೇ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ.

ಬಾಲ್ಯದಿಂದಲೂ ಬ್ಯಾಹ್ಯಾಕಾಶದ ಬಗ್ಗೆ ಕುತೂಹಲ, ಆಸಕ್ತಿ ಬೆಳೆಸಿಕೊಂಡಿದ್ದು ಎಲನ್‌ ಮಾಸ್ಕ್ನ ಎರೋಸ್ಪೇಸ್‌ ಕಂಪೆನಿ ‘ಸ್ಪೆಸೆಕ್ಸ್‌’ ನಿಂದ ಪ್ರಭಾವಿತರಾದ ಅವೇಜ್‌ ಭಾರತದಲ್ಲಿಯೂ ಇದೇ ರೀತಿಯ ಕಂಪೆನಿ ಪ್ರಾರಂಭಿಸಬೇಕೆಂಬ ಹೆಬ್ಬಯಕೆ ಇಟ್ಟಿಕೊಂಡು ಇಂದು ತನ್ನದೇ ಏರೋಸ್ಪೇಸ್‌ ಕಂಪೆನಿಯನ್ನು ಪ್ರಾಂರಭಿಸುವ ಮೂಲಕ ತಮ್ಮ ಕನಸಿಗೆ ರೆಕ್ಕೆ ಕಟ್ಟಿದ್ದಾರೆ. ತಾವು ನಿರ್ಮಿಸಿದ ಖಾಸಗಿ ಉಪಗ್ರಹವನ್ನು ಅಮೆರಿಕದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ.

ನನ್ನ ಮಗ ತಯಾರಿಸಿದ ಪ್ರಥಮ ಖಾಸಗಿ ಉಪಗ್ರಹ ಆನಂದ್‌ ಅನ್ನು ಇಸ್ರೋದಿಂದಲೇ ಉಡಾವಣೆ ಮಾಡಬೇಕಿತ್ತು. ಆದರೆ ಉಡಾವಣೆಗೆ ಡೇಟ್‌ ದೊರೆತಿಲ್ಲ. ಖ್ಯಾತ ಉದ್ಯಮಿಯೊಬ್ಬರ ಪ್ರಾಯೋಜಕತ್ವದಲ್ಲಿ ಶಕುಂತಲಾ ಹೆಸರಿನ ಮತ್ತೂಂದು ಉಪಗ್ರಹವನ್ನು ತಯಾರಿಸಿದ್ದು ಅಮೆರಿಕಾದ ಸ್ಪೆಸೆಕ್ಸ್‌ ನಿಂದ ಅದನ್ನು ಶನಿವಾರ ಅಮೆರಿಕದ ಸ್ಪೆಸೆಕ್ಸ್‌ನಿಂದ ಉಡಾವಣೆ ಮಾಡಿದ್ದು ಯಶಸ್ವಿಯಾಗಿದೆ. ಉಪಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಾಧನೆಗೆ ದೇಶವೇ ಅವನನ್ನು ಕೊಂಡಾಡುತ್ತಿದೆ. ನಮ್ಮ ದೇಶದ ಪ್ರತಿಭೆಗಳಿಗೆ ನಮ್ಮ ದೇಶದಲ್ಲೇ ಪ್ರೋತ್ಸಾಹ ದೊರೆತು ದೇಶದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಬೇಕು. – ನದೀಮ್‌ ಅಹಮದ್‌, ಅವೇಜ್‌ ಅಹಮದ್‌ ತಂದೆ

ಟಾಪ್ ನ್ಯೂಸ್

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wew-e-wqe

Chikkamagaluru: ಸರ್ಕಾರಿ ಜಾಗಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ

1-wewewqe

Kaduru; ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

Good rain continues Chikkamagaluru

Chikkamagaluru; ಮಲೆನಾಡಿಗರಲ್ಲಿ ಮಂದಹಾಸ ಮೂಡಿಸಿದ ಮಳೆರಾಯ

ಶಿವಮೊಗ್ಗದಿಂದ ಮೈಸೂರಿಗೆ ಬರುತ್ತಿದ್ದ ಐರಾವತ ಬಸ್ ಬೆಂಕಿಗಾಹುತಿ… ತಪ್ಪಿದ ಭಾರಿ ದುರಂತ

ಶಿವಮೊಗ್ಗದಿಂದ ಮೈಸೂರಿಗೆ ಬರುತ್ತಿದ್ದ ಐರಾವತ ಬಸ್ ಬೆಂಕಿಗಾಹುತಿ… ತಪ್ಪಿದ ಭಾರಿ ದುರಂತ

Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆಗಳು.. ವಾಹನ ಸವಾರರ ಪರದಾಟ

Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.