ಸೌತೆ ಬೆಳೆಗೆ ರೋಗ-ಕೀಟ ಬಾಧೆ; ವಿಜ್ಞಾನಿಗಳ ಸಲಹೆ


Team Udayavani, Apr 12, 2022, 2:58 PM IST

13crop

ಆಳಂದ: ಜಿಲ್ಲೆಯ ಆಳಂದ ತಾಲೂಕಿನ ಜಮಗಾ, ಬೆಳಮಗಿ, ಮಾದನಹಿಪ್ಪರಗಾ, ನಿಂಬಾಳ ಅಫಜಲಪೂರ ತಾಲೂಕಿನ ಬೈರಮಡಗಿ, ಕಲಬುರಗಿ ವಲಯದ ಮೆಳಕುಂದ ಕೆ. ಮೇಳಕುಂದ ಬಿ. ಹುಣಸಿ ಹಡಗಿಲ್‌. ಸಾವಳಗಿ, ಪಟ್ನೆ, ಗಣಜಲಖೇಡ, ಭೋಸಗಾ ಹೀಗೆ ಇನ್ನಿತರ ಗ್ರಾಮಗಳಲ್ಲಿ ಹೆಚ್ಚಾಗಿ ಸೌತೆ ಬೆಳೆಯನ್ನು ವರ್ಷವಿಡಿ ವಿಶೇಷವಾಗಿ ಬೇಸಿಗೆ ಹಂಗಾಮಿಗೆ ಸೌತೆ ಬೆಳೆ ಹೆಚ್ಚಿದೆ.

ಸೌತೆಯ ಬೀಜದ ಆಯ್ಕೆ, ಗೊಬ್ಬರ ಸಮಯಕ್ಕೆ ಯಾವುದ್ಯಾವುದು ಔಷಧ ಎಷ್ಟು ಪ್ರಮಾಣ ಸಿಂಪರಣೆಯಂತ ಸಲಹೆ ಪಡೆದು ಯಶಸ್ವಿಯಾಗಿ ಬೆಳೆ ಬೆಳೆಯುತ್ತಿರುವುದು ಆಶಾದಾಯಕವಾಗಿ ಕಂಡಿದೆ. ಸೌತೆ ಬೆಳೆಗೆ ಬರುವ ರೋಗ ಮತ್ತು ಇದರ ಹತೋಟಿಗೆ ಸೂಕ್ತ ಕ್ರಮದ ನಡುವೆ ಬೆಳೆಯ ಲಾಭ ತಟ್ಟುವಂತೆ ಮಾಡಲು ಮುಂದಾಗಿರುವ ಕಲಬುರಗಿ ಕೃಷಿ ಸಂಶೋಧನ ಕೇಂದ್ರದ ಕಾರ್ಯಕ್ರಮ ಸಂಯೋಜಕ, ಹಿರಿಯ ವಿಜ್ಞಾನಿ ಡಾ| ರಾಜು ತೆಗ್ಗಳಿ ಅವರ ಮಾರ್ಗದರ್ಶನದಲ್ಲಿ ವಿಜ್ಞಾನಿ ಡಾ| ಜಹೀರ್‌ ಅಹ್ಮದ್‌, ಅಮರೇಶ ವೈ.ಎಸ್‌. ಮತ್ತು ಕ್ಷೇತ್ರ ಸಹಾಯಕ ತಂಡವು ಬೆಳೆಯ ಯಶಸ್ವಿಗೆ ಒತ್ತು ನೀಡಿದ್ದು, ಅಲ್ಲದೆ ರೈತರೊಬ್ಬರ ಹೊಲವನ್ನು ಆಯ್ಕೆ ಮಾಡಿ ಬಿತ್ತನೆಯಿಂದ ಕೋಯ್ಲಿನವರೆಗೆ ಸಂಪೂರ್ಣ ಅಧ್ಯಯನ ನಡೆಸಲಾಗುತ್ತಿದೆ. ಬೆಳೆಗೆ ಕಂಟಕವಾಗುವ ರೋಗಗಳು ಮತ್ತು ಅದಕ್ಕೆ ಉಪಚರಿಸುವ ಔಷಧಿ ಸಿಂಪರಣೆ ಕ್ರಮದ ಬಗ್ಗೆ ರೈತರಿಗೆ ಸಲಹೆ ನೀಡಿದ್ದಾರೆ.

ಪ್ಯುಸಾರಿಯಂ ಬಾಡು: ಈ ರೋಗವು ಬೆಳೆಯ ಯಾವ ಹಂತದಲ್ಲು ಹರಡುತ್ತದೆ. ಎಲೆಗಳ ತುದಿ ಭಾಗವು ಒಣಗಿ ಕ್ರಮೇಣ ಗಿಡವು ಪೂರ್ತಿ ಒಣಗುತ್ತವೆ. ತೀವ್ರ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗ ಹರಡುವಿಕೆ ತಡೆಗಟ್ಟಲು ಕಾರ್ಬಂಡೈಜೆಮ್‌ ಶಿಲೀಂದ್ರನಾಶಕ 1 ಗ್ರಾಮ ಪ್ರತಿಲೀಟರ್‌ ನೀರಿಗೆ ಬೆರೆಸಿ ಗಿಡಿಗಳ ಬುಡ ತೊಯ್ಯುವಂತೆ ಸುರಿಯಬೇಕು ಚಿಬ್ಬು ರೋಗ:.

ಮೊದಲಿಗೆ ಸಣ್ಣನೆಯ ತೇವಾಂಶಯುಕ್ತ ಚುಕ್ಕೆಗಳು ಕಾಣಿಸುತ್ತವೆ. ನಂತರ ಕಪ್ಪನೆ ಬಣ್ಣಕ್ಕೆ ತಿರುಗುತ್ತವೆ. ಅರ್ಕಾಮಾಣಿಕ ತಳಿಯು ಚಿಬ್ಬು ರೋಗಕ್ಕೆ ನಿರೋಧಕ ಶಕ್ತಿ ಹೊಂದಿರುವುದರಿಂದ ಈ ತಳಿಯನ್ನು ಬೆಳೆಯಬೇಕು.

ಬೂಜು ತುಪ್ಪಟರೋಗ: ಮೊದಲಿಗೆ ಕೋನಾಕಾರದ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಒಂದಕ್ಕೊಂಡು ಸೇರಿಕೊಂಡು ಎಲೆಗಳು ಒಣಗುತ್ತವೆ. ಇದಕ್ಕೆ ಪ್ರತಿ ನೀರಿಗೆ 2 ಗ್ರಾಂ ಮೆಟಲಾಕ್ಸಿಲ್‌ ಸೇರಿಸಿ ಮ್ಯಾಂಕೋಜೆಬ್‌ ಅಅಥವಾ 2 ಗ್ರಾಮ ಮಾಲ ಮ್ಯಾಕೋಜೆಬ್‌ ಬೆರೆಸಿ ಸಂಪಡಿಸಬಹುದಾಗಿದೆ.

ಬೂದಿ ರೋಗ: ಮೊದಲಿಗೆ ಸಣ್ಣನೆಯ ಬಿಳಿ ಬೂದು ಬಣ್ಣದ ಚುಕ್ಕೆಗಳು ಎಲೆ ಮತ್ತು ಕಾಂಡದ ಮೇಲೆ ಕಾಣಿಸುತ್ತವೆ. ರೋಗದ ತೀವ್ರತೆ ಹೆಚ್ಚಾದಾಅಗ ಎಲೆಗಳು ಪೂರ್ತಿ ಒಣಗುತ್ತವೆ. ಪ್ರತಿ ಲೀಟರ್‌ ನೀರಿನಲ್ಲಿ 1 ಮಿ.ಲೀ, ಟೈಡಮಾರ್ಪ್‌ ಅಥವಾ 2 ಗ್ರಾಮ ಕೋರೋ ಕ್ಲೋರೋಫ್ಯಾಲೋನಿಲ್‌ ಬೆರೆಸಿ ಸಿಂಪಡಿಸಬೇಕು. ಎರಡು ವಾರಗಳ ಅಂತರ ಒಟ್ಟು ಮೂರು ಬಾರಿ 0.5 ಗ್ರಾಂ ಕಾರ್ಬನ್‌ ಡೈಜಿಮ್‌ 50 ಡಬ್ಲೂ.ಪಿ. ಅಥವಾ 1.5. ಗ್ರಾಂ ಡೈನೋಕ್ಯಾಪ್‌ (ನೀರಿನಲ್ಲಿ ಕರಗುವ ಮಡಿ) ಲೀಟರ್‌ ನೀರಿಗೆ ಕರಗಿಸಿ ಸಿಂಪಡಿಸಬೇಕು. ಸಮಾರು 450 ಲೀಟರ್‌ ಸಿಂಪಡಣಾ ದ್ರಾವಣ ಪ್ರತಿ ಹೆಕ್ಟೇರಿಗೆ ಬಳಸಬೇಕು.

ಸುಳಿ ನಂಜುರೋಗ: ಇದು ಕಾಣಿಸಿಕೊಂಡಾಗ ಬಳ್ಳಿಗಳ (ಸುಳಿಗಳು) ತುದಿಗಳು ಮೇಲಕ್ಕೆ ಮುಖ ಮಾಡಿರುತ್ತವೆ. ರೋಗ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ರೋಗ ಹರಡದಂತೆ ಪ್ರತಿ ಲೀಟರ್‌ ನೀರಿಗೆ 1 ಮಿ.ಲೀ, ಫೆಟ್ರೋನಿಲ್‌ ಅಥವಾ 10 ಗ್ರಾಪಂ ಅಸಿಫೇಟ್‌ ಬೆರೆಸಿ ಸಿಂಪಡಿಸಬೇಕು.

ಕೋಯ್ಲು ಮತ್ತು ಇಳಿವರಿ: ಬಳಿಯ ಹತ್ತಿರದ ಲತಾತಂತು ಒಣಗಲು ಪ್ರಾರಂಭಿಸಿದಾಗ ಹಾಗೂ ಹಣ್ಣಿನ ತಳಮಟ್ಟದಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ನಂತರ ಕಟಾವು ಮಾಡಬಹುದು. ಈ ಹಂತದಲ್ಲಿ ಕಾಯಿಗೆ ಬೆರಳಿನಿಂದ ಬಾರಿಸಿದರೆ ಮಂದ ಶಬ್ದಬರುವುದು. ಪ್ರತಿ ಹೆಕ್ಟೇರಿಗೆ ಸಾಮಾನ್ಯ ತಳ್ಳಿಗಳಿಂದ ಸರಾಸರಿ 45ರಿಂದ 50 ಟನ್‌ ಇಳುವರಿ ಪಡೆಯಬಹುದು. ಆದರೆ ಹೈಬ್ರಿಡ್‌ ತಳಿಗಳು ಪ್ರತಿ ಹೆಕ್ಟೇರ್‌ಗೆ 75ರಿಂದ 80 ಟನ್‌ ಇಳುವರಿ ಕೊಡುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.

ಟಾಪ್ ನ್ಯೂಸ್

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.