2024ರ ಲೋಕಸಭೆ ಚುನಾವಣೆಗೆ ಟಾರ್ಗೆಟ್‌; ಕಾರ್ಯತಂತ್ರ ಶುರು


Team Udayavani, Apr 26, 2022, 8:20 AM IST

2024ರ ಲೋಕಸಭೆ ಚುನಾವಣೆಗೆ ಟಾರ್ಗೆಟ್‌; ಕಾರ್ಯತಂತ್ರ ಶುರು

ಇನ್ನೆರಡು ವರ್ಷಗಳಲ್ಲೇ ದೇಶವು ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ. 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಕೂಡ ಈಗಿನಿಂದಲೇ ಸಿದ್ಧತೆ ಆರಂಭಿಸಿವೆ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದರೆ, ಈ ಬಾರಿಯಾದರೂ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್‌ ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇನು?

ಸಮಿತಿ ರಚನೆ, ಚಿಂತನ ಶಿಬಿರ ಆಯೋಜನೆ
ಕಾಂಗ್ರೆಸ್‌ನ ಸವಾಲುಗಳ ಅಧ್ಯಯನಕ್ಕೆ ಹೊಸ ಸಮಿತಿ
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಧ್ಯಯನ ನಡೆಸಲು ಹೊಸ ಸಮಿತಿಯೊಂದನ್ನು ರಚಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ನಿರ್ಧರಿಸಿದ್ದಾರೆ.

ಆದರೆ, ಚುನಾವಣ ವ್ಯೂಹ ರಚನೆಕಾರ ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಬಗ್ಗೆ ಇನ್ನೂ ಯಾವುದೇ ಖಚಿತ ನಿರ್ಧಾರ ಪ್ರಕಟವಾಗಿಲ್ಲ.

ಮತ್ತೊಂದು ಮಹತ್ವದ ನಿರ್ಧಾರವೆಂದರೆ, ಮೇ 13, 14 ಮತ್ತು 15ರಂದು ರಾಜಸ್ಥಾನದ ಉದಯಪುರದಲ್ಲಿ “ಚಿಂತನ ಶಿಬಿರ’ ನಡೆಸಲು ತೀರ್ಮಾನಿಸಲಾಗಿದೆ. ದೇಶದ ಪ್ರಮುಖ 400 ಕಾಂಗ್ರೆಸ್‌ ನಾಯಕರು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಆಂತರಿಕ ವಿಚಾರಗಳು, ಮುಂದಿನ ದಿನಗಳಲ್ಲಿ ಬಿಜೆಪಿ ಯನ್ನು ಎದುರಿಸಲು ಬೇಕಾಗಿರುವ ಕಾರ್ಯತಂತ್ರಗಳ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತದೆ ಎಂದು ಪಕ್ಷದ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲಾ ಹೇಳಿದ್ದಾರೆ.

ತಾತ್ವಿಕ ಒಪ್ಪಿಗೆ: ಲೋಕಸಭೆ ಚುನಾವಣೆ ಸಂಬಂಧ ಪ್ರಶಾಂತ್‌ ಕಿಶೋರ್‌ ಸಲ್ಲಿಸಿರುವ ಸಲಹೆಗಳಿಗೆ ತಾತ್ವಿಕವಾಗಿ ಒಪ್ಪಿಗೆ ಸೂಚಿ ಸಲಾಗಿದೆ. ಪ್ರಿಯಾಂಕಾ ವಾದ್ರಾ, ಅಂಬಿಕಾ ಸೋನಿ, ಕೆ.ಸಿ. ವೇಣುಗೋಪಾಲ್‌, ಸುಜೇìವಾಲ, ಮುಕುಲ್‌ ವಾಸ್ನಿಕ್‌, ದಿಗ್ವಿಜಯ ಸಿಂಗ್‌, ಜೈರಾಂ ರಮೇಶ್‌ ಮತ್ತು ಪಿ.ಚಿದಂಬರಂ ಅವರನ್ನೊಳಗೊಂಡ ಹಿರಿಯ ನಾಯಕರ ಸಭೆ ಕಿಶೋರ್‌ ಸಲ್ಲಿಸಿರುವ ಶಿಫಾರಸ್ಸುಗಳನ್ನು ಅಧ್ಯಯನ ಮಾಡಿದೆ.

ಮುಖಂಡರ ಆಕ್ಷೇಪ: ಕಿಶೋರ್‌ ಕಾಂಗ್ರೆಸ್‌ಗೆ ಸೇರುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರೂ, ಅವರ ಮಾಲೀ ಕತ್ವದ ಐ-  ಪ್ಯಾಕ್‌ ಸಂಸ್ಥೆ 2023ರ ತೆಲಂಗಾಣ ವಿಧಾನ ಸಭೆ ಚುನಾವಣೆ  ಗಾಗಿ ತೆಲಂಗಾಣ ರಾಷ್ಟ್ರ ಸಮಿತಿ ಜತೆಗೆ ಒಪ್ಪಂದ ಮಾಡಿಕೊಂಡ ಬಗ್ಗೆಯೂ ಸಭೆ ಯಲ್ಲಿ ಪ್ರಸ್ತಾಪವಾಗಿದೆ. ಈ ವೇಳೆ, ಕಿಶೋರ್‌ ನಿರ್ಧಾರಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

ಖರ್ಗೆಗೆ ಹೊಣೆ: ಮೇ 13-15ರ ವರೆಗೆ ನಡೆ ಯುವ ಚಿಂತನ ಶಿಬಿರದಲ್ಲಿ ರಾಜಕೀಯ ನಿರ್ಣಯ ರಚಿಸುವ ಹೊಣೆಯನ್ನು ರಾಜ್ಯ  Ó ‌ಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯ  ವರಿಗೆ ನೀಡಲಾಗಿದೆ. ಅವರಿಗೆ ಗುಲಾಂ ನಬಿ ಆಜಾದ್‌, ಅಶೋಕ್‌ ಚವಾಣ್‌, ಎನ್‌.ಉತ್ತಮ್‌ ಕುಮಾರ್‌ ರೆಡ್ಡಿ, ಶಶಿ ತರೂರ್‌, ಗೌರವ್‌ ಗೊಗೊಯ್‌, ಸಪ್ತಗಿರಿ ಶಂಕರ್‌ ಉಲಾಕಾ, ರಾಗಿಣಿ ನಾಯಕ್‌ ನೆರವಾಗಲಿದ್ದಾರೆ ಎಂದು ಸುಜೇìವಾಲ ತಿಳಿಸಿದ್ದಾರೆ.

73 ಸಾವಿರ ಬೂತ್‌ಗಳಲ್ಲಿ ಬಲವರ್ಧನೆಗೆ ಕ್ರಮ
ಕಳಪೆ ಸಾಧನೆಗೈದಿರುವ ಕಡೆ ಗಮನ ನೆಟ್ಟ ಬಿಜೆಪಿ
ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ದೇಶಾದ್ಯಂತ ಪಕ್ಷವು ದುರ್ಬಲವಾಗಿರು ವಂಥ 73 ಸಾವಿರ ಬೂತ್‌ಗಳನ್ನು ಗುರುತಿಸಿದ್ದು, ಅಲ್ಲಿ ಪಕ್ಷವನ್ನು ಬಲಪಡಿಸಲೆಂದೇ ವಿಶೇಷ ಸಮಿತಿಯೊಂದನ್ನು ರಚಿಸಿದೆ.

ಈ ಬೂತ್‌ಗಳ ಪೈಕಿ ಅತಿ ಹೆಚ್ಚು ಇರುವುದು ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಎಂದು ಮೂಲಗಳು ತಿಳಿಸಿವೆ. ಇದರ ಜತೆಗೆ, ಕಳೆದ ಲೋಕಸಭೆ ಚುನಾವಣೆಯಲ್ಲಿ 150 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷವು ಕಳಪೆ
ಸಾಧನೆ ಮಾಡಿದ್ದು, ಅಲ್ಲಿಯೂ ಬಿಜೆಪಿ ಪರ ಜನರು ಆಕರ್ಷಿತರಾಗುವಂತೆ ನೀಲನಕ್ಷೆ ರೂಪಿಸಲೂ ಹೈಕಮಾಂಡ್‌ ಸಜ್ಜಾಗಿದೆ.

ಸೋಮವಾರ ಬಿಜೆಪಿ ಉಪಾಧ್ಯಕ್ಷ ಬೈಜಯಂತ್‌ ಪಾಂಡೆ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಮತ್ತು ದಿಲೀಪ್‌ ಘೋಷ್‌, ಎಸ್‌ಸಿ ಘಟಕದ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ ಮತ್ತಿತರರು ಪಾಲ್ಗೊಂಡಿದ್ದರು. 2014 ಮತ್ತು 2019ರ ಫ‌ಲಿತಾಂಶಗಳ ಆಧಾರದಲ್ಲಿ ಈ 73 ಸಾವಿರ ಬೂತ್‌ಗಳನ್ನು ಗುರುತಿಸಲಾಗಿದೆ. 2024ರೊಳಗಾಗಿ ಈ ಬೂತ್‌ಗಳಲ್ಲಿ ನಿಧಾನವಾಗಿ ಬಿಜೆಪಿ ಮತ ಹಂಚಿಕೆಯನ್ನು ಹೆಚ್ಚಳ ಮಾಡುವ ಗುರಿಯನ್ನು ಹಾಕಿಕೊಳ್ಳ ಲಾಗಿದೆ. ಜತೆಗೆ, ಅಲ್ಲಿ ಪಕ್ಷ ವನ್ನು ಬಲಪಡಿಸುವ ಕಾರ್ಯ ತಂತ್ರಗಳನ್ನು ಒಳಗೊಂಡ ವರದಿಯನ್ನೂ ಸಿದ್ಧಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸರಕಾರದ 3ನೇ ವರ್ಷಾಚರಣೆಗೆ ಸಿದ್ಧತೆ
ಕೇಂದ್ರ ಸಚಿವ ಅನುರಾಗ್‌ ಠಾಕೂರ್‌
ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ತಂಡವು ಸೋಮವಾರ ಸಭೆ ನಡೆಸಿ, ಮೋದಿ ನೇತೃತ್ವದ ಕೇಂದ್ರ ಸರಕಾರದ(ಎರಡನೇ ಅವಧಿಯ) 3ನೇ ವರ್ಷಾಚರಣೆ ಏರ್ಪಡಿಸುವ ಕುರಿತು ಚರ್ಚೆ ನಡೆಸಿದೆ. ಸರಕಾರದ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮಗಳು ಸೇರಿದಂತೆ 3ನೇ ವರ್ಷಾಚರಣೆಗೆ ಯಾವ ಯಾವ ಚಟುವಟಿಕೆಗಳನ್ನು ಆಯೋಜಿಸಬೇಕು ಎಂಬ ಬಗ್ಗೆ ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.