ತಾಲೂಕು ಹೋರಾಟ: ಎತ್ತಿನಗಾಡಿಗಳ ರ್ಯಾಲಿ

ಮುಷ್ಕರದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ನಿರಾಣಿ-ಶಹಾಪುರ ಭಾಗಿ

Team Udayavani, Apr 26, 2022, 3:52 PM IST

19

ಮಹಾಲಿಂಗಪುರ: ಜೀವ ಬಿಟ್ಟೆವು ತಾಲೂಕು ಬಿಡೇವು ನಿಲುವಿನೊಂದಿಗೆ 12 ನೇ ದಿನಕ್ಕೆ ಕಾಲಿಟ್ಟಿರುವ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಕೆಸರುಗೊಪ್ಪ ಗ್ರಾಮದ ರೈತರು ನೂರಾರು ಅಲಂಕೃತ ಎತ್ತಿನ ಗಾಡಿಗಳ ಬೃಹತ್‌ ರ್ಯಾಲಿ ನಡೆಸಿದರು.

ವಿಧಾನ ಪರಿಷತ್‌ ಸದಸ್ಯರಾದ ಹನುಮಂತ ನಿರಾಣಿ ಮತ್ತು ಅರುಣ ಶಹಾಪುರ ಸೋಮವಾರ ಬೆಳಗ್ಗೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎತ್ತಿನ ಗಾಡಿಗಳ ರ್ಯಾಲಿಗೆ ಚಾಲನೆ ನೀಡಿದರು.

ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ, ಜೋಡು ರಸ್ತೆ, ನಡುಚೌಕಿ, ಜವಳಿ ಬಜಾರ, ಗಾಂಧಿ ವೃತ್ತ ಮಾರ್ಗವಾಗಿ ಸಾಗಿ ಚನ್ನಮ್ಮ ವೃತ್ತದಲ್ಲಿ ಎತ್ತಿನ ಗಾಡಿಗಳ ಸರಪಳಿ ರಚಿಸಿ ರಸ್ತೆ ಬಂದ್‌ ಮಾಡಿ, ತಾಲೂಕು ಹೋರಾಟ ಪರ ಘೋಷಣೆ ಮತ್ತು ಜಯಘೋಷಗಳೊಂದಿಗೆ ಮಹಾಲಿಂಗಪುರ ತಾಲೂಕು ಘೋಷಣೆಗೆ ಒತ್ತಾಯಿಸಲಾಯಿತು.

ಮುಷ್ಕರದಲ್ಲಿ ಭಾಗಿಯಾಗಿ ಮಾಜಿ ಸಚಿವ ಆರ್‌. ಬಿ. ತಿಮ್ಮಾಪುರ ಮಾತನಾಡಿ, ಎಲ್ಲ ಅರ್ಹತೆಗಳಿದ್ದರೂ ತಾಲೂಕು ಘೋಷಣೆಗೆ ಸರ್ಕಾರ ಮನಸ್ಸು ಮಾಡದಿರುವುದೇ ಮಹಾಲಿಂಗಪುರ ತಾಲೂಕು ಘೋಷಣೆಯ ಹಿನ್ನಡೆಗೆ ಕಾರಣ. ಈಗ ಸಿದ್ದು ಸವದಿ ಅವರಿಗೆ ಎಲ್ಲ ಅವಕಾಶಗಳಿವೆ. ಹೇಳಿದಂತೆ ಕೇಳುವ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರವಿದ್ದು, ಸವದಿ ಅವರಿಗೆ ಬಹುದೊಡ್ಡ ಅವಕಾಶವಿದೆ. ತಾಲೂಕು ಘೋಷಣೆಯಾದರೆ ಸವದಿಯವರು ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಹೆಸರು ಮಹಾಲಿಂಗಪುರ ಇತಿಹಾಸದಲ್ಲಿ ಅಜರಾಮರವಾಗುತ್ತದೆ ಎಂದರು.

ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಧರೆಪ್ಪ ಸಾಂಗ್ಲಿಕರ, ಯಲ್ಲನಗೌಡ ಪಾಟೀಲ,ಮಲ್ಲಪ್ಪ ಸಿಂಗಾಡಿ, ಬಲವಂತಗೌಡ ಪಾಟೀಲ, ಜಾವೇದ ಭಾಗವಾನ,ಸಂಗಪ್ಪ ಹಲ್ಲಿ, ಮನೋಹರ ಶಿರೋಳ, ಚನ್ನು ದೇಸಾಯಿ ಭೀಮಶೀ ಸಸಾಲಟ್ಟಿ, ಮಾರುತಿ ತೇಜಪ್ಪಗೋಳ, ಮಾರುತಿ ಖರೋಶಿ, ಶ್ರೀಶೈಲ ಸತ್ತಿಗೇರಿ, ಪರಪ್ಪ ಬ್ಯಾಕೋಡ ಇದ್ದರು.

ಒಂದೇ ಮತಕ್ಷೇತ್ರದಲ್ಲಿ ಹುನಗುಂದ ಮತ್ತು ಇಳಕಲ್ಲ ತಾಲೂಕು ವಿಭಜಿಸಿದಂತೆ ತೇರದಾಳ ಮತಕ್ಷೇತ್ರದಲ್ಲೂ ತೇರದಾಳ ಮತ್ತು ಮಹಾಲಿಂಗಪುರ ಎರಡು ತಾಲೂಕು ಘೋಷಿಸಬಹುದು. ದೀರ್ಘ‌ ಹೋರಾಟದ ನಂತರವೂ ಸರಿಯಾದ ಸಮಯದಲ್ಲಿ ತಾಲೂಕು ಘೋಷಣೆಯಾಗದಿರುವುದು ಮತ್ತು ಬೇರೆಲ್ಲ ತಾಲೂಕುಗಳ ಘೋಷಣೆ ಆದರೂ ಮಹಾಲಿಂಗಪುರ ಕಡೆಗಣಿಸುತ್ತಿರುವುದು ಅಚ್ಚರಿ ಮತ್ತು ವಿಷಾದದ ಸಂಗತಿ. -ಆರ್‌. ಬಿ. ತಿಮ್ಮಾಪುರ, ಮಾಜಿ ಸಚಿವ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.