ಕಾಟನ್ ಪೇಟೆಯ ಕೇಸ್ ತನಿಖೆ ಮಾಡಿದರೆ ಕಾಂಗ್ರೆಸ್ ನವರೆಲ್ಲ ಜೈಲಿಗೆ ಹೋಗುತ್ತಿದ್ದರು: ಬಿಜೆಪಿ

ಹೊಲಸನ್ನ ತಿಂದು ಬೇರೆಯವರ ಮುಖಕ್ಕೆ ಒರೆಸುವ ಕಾಂಗ್ರೆಸ್

Team Udayavani, May 4, 2022, 5:54 PM IST

1-dsfsfsd

ಬೆಂಗಳೂರು : ಕಾಂಗ್ರೆಸ್ ನ ಅನೇಕ ನಾಯಕರು ಹೊಲಸನ್ನ ತಿಂದು, ಬೇರೆಯವರ ಮುಖಕ್ಕೆ ಒರೆಸುವುದನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಪಿ. ರಾಜೀವ್ ಹಾಗೂ ವಕ್ತಾರ ಛಲವಾದಿ ನಾರಾಯಣ ಸ್ವಾಮಿ ಜಂಟಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಕಿಡಿ ಕಾರಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ವಿಪಕ್ಷ ನಾಯಕರು, ಪ್ರತಿಪಕ್ಷವನ್ನ ಶಾಡೋ ಗವರ್ನಮೆಂಟ್ ಅಂತ ಕರೆಯುತ್ತೇವೆ. ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ಮಾಡಿ ನಮ್ಮ ನಾಯಕರಾದ ಮೋದಿ ಹಾಗೂ ಅಮಿತ್ ಶಾ ಅವರ ಬಗ್ಗೆ ಮಾತಾಡಿದ್ದಾರೆ.ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 350 ಹಾಗೂ ತ್ರಿವಳಿ ತಲಾಖ್ ಬಗ್ಗೆ ಮತ್ತೆ ಪರಿಶೀಲನೆ ಮಾಡೋದಾಗಿ ಹೇಳಿರುವ ಪಕ್ಷದವರು. ಅವರು ಅನುಕೂಲಕ್ಕೆ ತಕ್ಕಂತೆ ರಾಜಕೀಯ ಬಳಕೆ ಮಾಡಿಕೊಳ್ಳುತ್ತಾರೆ ಎಂದರು.

ಸುಳ್ಳು ಸುದ್ದಿ ಹರಡುತ್ತಿದ್ದಾರೆ ಅನ್ನೋದು ಜನತೆಗೆ ಗೊತ್ತಿದೆ.ಕರ್ನಾಟಕವನ್ನ ಮಾಯಾಬಜಾರ್ ಮಾಡಿಕೊಂಡಿರೋರಿಂದ ಬುದ್ದಿಕಲಿಯಬೇಕಿಲ್ಲ.ಅಕ್ರಮ ನಡೆಯುವಾಗ ಅದಕ್ಕೆ ನೀರೆರೆದವರು ಕಾಂಗ್ರೆಸ್ ಪಕ್ಷದವರು.ಅಂದು ಕ್ರಮ ಕೈಗೊಂಡಿದ್ದರೆ ಇಂದು ಇವೆಲ್ಲವೂ ಆಗುತ್ತಲೇ ಇರಲಿಲ್ಲ.ಅಂದು ಆದ ಎಲ್ಲಾ ಅಕ್ರಮ ಹಗರಣವನ್ನ ಬಿಜೆಪಿ ಇಂದು ತನಿಖೆ ನಡೆಸುತ್ತಿದೆ. ಯಾವುದೇ ಅಕ್ರಮ, ಭ್ರಷ್ಟಾಚಾರಕ್ಕೂ ಅವಕಾಶ ನೀಡದೆ ತನಿಖೆ ನಡೆಸುತ್ತಿದ್ದೇವೆ ಎಂದರು.

ಎಲ್ಲರೂ ಜೈಲಿಗೆ ಹೋಗುತ್ತಿದ್ದರು

ಕಾಟನ್ ಪೇಟೆಯಲ್ಲಿ ಒಂದು ಕೇಸ್ ದಾಖಲಾಗಿತ್ತು.ಹಿಂದಿನ ಸರ್ಕಾರದಲ್ಲಿ ನಡೆದಿದ್ದ ಕೇಸ್ ಇದು. ಅದರ ಸಾರಾಂಶ, ಲೋಕೇಶ್ ಎಂಬಾತ 2013ರಿಂದ 2017ರ ವರೆಗೂ ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿದ್ದು, ಅದರ ದೂರನ್ನ ಡಿವೈಎಸ್‌ಪಿ ರ‍್ಯಾಂಕ್ ನ ಅಧಿಕಾರಿ ದೂರನ್ನ ನೀಡಿದರು. ಇದಾದ ಬಳಿಕ ಸೀರಿಸ್ ಕಂಪ್ಲೆಂಟ್‌ಗಳು ದಾಖಲಾಗಿವೆ. ಇಂತ ಸೀರಿಸ್ ಕಂಪ್ಲೆಂಟ್‌ ಆದರೂ ಮಾಧ್ಯಮದಲ್ಲಿ ಸುದ್ದಿಯಾಗದಂತೆ ಮುಚ್ಚಿಹಾಕಿದರು. ತಮ್ಮ ಸರ್ಕಾರದ ಅವಧಿಯಲ್ಲಿ ತನಿಖೆ ಮಾಡಿದರೆ, ಎಲ್ಲರೂ ಜೈಲಿಗೆ ಹೋಗುತ್ತಿದ್ದರು. ಆದರೆ , ಇಂದು ಬಿಜೆಪಿ ಯಾರನ್ನೂ ಬಿಡದೆ ತನಿಖೆ ಮಾಡುತ್ತದೆ. ಸಿದ್ದರಾಮಯ್ಯ ಅವರು ತನಿಖೆಗೆ ನೀಡಿದರೆ ನಮ್ಮ ಮುಖಕ್ಕೆ ರಾಡಿಯಾಗಲಿದೆ ಅಂತ ಸುಮ್ಮನೆ ಕುಳಿತರು. ವಿದ್ಯಾರ್ಥಿಗಳ ಭವಿಷ್ಯದ ಸಮಾಧಿ ಕಟ್ಟಿದರು. ಈಗ ಯಾವುದೇ ಪ್ರಕರಣ ಆದರೂ , ಯಾವುದೇ ವ್ಯಕ್ತಿ, ಯಾವುದೇ ಪಕ್ಷದವರಾದರೂ ಬಿಡುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರ ಕುರುಡು ಸರ್ಕಾರ ಆಗಿತ್ತು. ಬಿಟ್ ಕಾಯಿನ್ ಹಗರಣ ಹೊರಗೆ ತಂದಿದ್ದು ಯಾರು.? ಸಿದ್ದರಾಮಯ್ಯ ಅವರು ನಿದ್ರಾಮಯ್ಯ ಆಗಿ ಮಲಗಿದ್ದರು. ಕೆಪಿಸಿಸಿ ಕಚೇರಿಯಲ್ಲಿ ನಿಮ್ಮವರೇ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದರು. ನಮ್ಮವರೇ ಹಣ ಪೀಕುತ್ತಿದ್ದಾರೆ ಅಂತ, ಇದಕ್ಕೆ ನಿಮ್ಮ ಉತ್ತರ ಏನು.? ನಿಮ್ಮ ಸರ್ಕಾರದ ಅವಧಿಯಲ್ಲಿ ಆದ ಅಕ್ರಮಗಳನ್ನ, ನಾವು ಈಗ ತನಿಖೆ ಮಾಡುತ್ತಿದ್ದೇವೆ. ಅದು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದೆ, ಯಾರೂ ಅಕ್ರಮದಲ್ಲಿ ಭಾಗಿಯಾಗಬೇಡಿ, ಯಾರನ್ನೂ ಭಾಗಿಯಾಗಲು ಬಿಡಬೇಡಿ ಅಂತ. ಬಿಜೆಪಿ ಇಂದಲೇ ಸುಮೋಟೋ ದಾಖಲಿಸಿದ್ದೇವೆ. ಅರ್ಕಾವತಿ ಡಿ ನೋಟಿಫಿಕೇಷನ್, ಪಿಎಸ್ಐ ನೇಮಕಾತಿ ಎಲ್ಲದರ ಬಗ್ಗೆ ನಿಮ್ಮ ಪಕ್ಷ, ಶಾಸಕರು ಪ್ರಶ್ನೆ ಮಾಡಿದ್ರಾ.? ಈಗ ಯಾವುದೇ ಪಕ್ಷದವರಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ದೇಶದ ನಾಗರಿಕ ಅಲ್ಲ

2013ರಿಂದ ಬೇರು ಬಿಟ್ಟವರು ಇವರು. ನೀವು ಕ್ರಮ ಕೈಗೊಳ್ಳದೆ,ಬೇರೂರಲು ಅವಕಾಶ ನೀಡಿದಿರಿ. ಪ್ರಿಯಾಂಕ್ ಖರ್ಗೆ ಅವರು ಪ್ರಚಾರ ಪ್ರಿಯರು. ಅವರಿಗೆ ಪೊಲೀಸ್ ನೋಟೀಸ್ ನೀಡಿದ್ದಾರೆ. ದಂಡ ಸಂಹಿತಾ ಪ್ರಕ್ರಿಯೆ ಹೇಳುವಂತೆ, ಎಲ್ಲಾ ರೀತಿಯ ಮಾಹಿತಿ ನೀಡಬೇಕು ಅಂತ. ಅದು ಈ ದೇಶದ ನಾಗರಿಕನ ಕೆಲಸ.ಅವರು ಯಾವುದೇ ದಾಖಲೆ ನೀಡದೆ, ಈ ದೇಶದ ನಾಗರಿಕ ಅಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಬೇರೆಯವರ ಹೆಗಲಿಗೆ ಕಟ್ಟಿ, ತಮ ಜವಾಬ್ದಾರಿ ಇಂದ ನುಣುಚಿಕೊಂಡಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ರಾಷ್ಟ್ರದ ನಾಯಕರ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಿಮ್ಮ ಬಳಿ ಯಾವುದೇ ಸಾಕ್ಷಿ ಇದ್ದರೂ, ಅದನ್ನ ಯಾವುದೇ ಸ್ಟೇಷನಿಗೆ ತೆರಳಿ ದೂರು ನೀಡಬಹುದು. ಇಲ್ಲ ಮಾಧ್ಯಮದಲ್ಲಿ ಬಿಡುಗಡೆ ಮಾಡಿ. ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ದಾರೆ. ತಮ್ಮ ಸರ್ಕಾರದಲ್ಲಿ ನಡೆದ 30 ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಯ್ತು.ಲೋಕಾಯುಕ್ತವನ್ನ ಮುಚ್ಚಿಹಾಕಿ, ಎಸಿಬಿ ಸ್ಥಾಪನೆ ಮಾಡಿಕೊಂಡರು. ಎಸಿಬಿ ಮೂಲಕ ಎಲ್ಲಾ ಹಗರಣಗಳ ಬಗ್ಗೆ ಕ್ಲೀನ್ ಚಿಟ್ ಪಡೆದುಕೊಂಡರು. ಈ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ ಅಂತ ಕರೆಸಿಕೊಂಡವರು. ಈಗ ದ್ವೇಷಕ್ಕಾಗಿ, ವಯಕ್ತಿಕ ಹಿತಾಸಕ್ತಿಗಾಗಿ ರಾಜೀನಾಮೆ ಕೇಳುತ್ತಿದ್ದೀರಿ. ಡಿ.ಕೆ ಶಿವಕುಮಾರ್ ಅವರು ಎಲ್ಲರ ಲೆಕ್ಕ ಚುಕ್ತಾ ಮಾಡುತ್ತೇನೆ, ಅಕೌಂಟ್ ಕ್ಲಿಯರ್ ಮಾಡುತ್ತೇನೆ ಅಂತ ಹೇಳಿದ್ದರು. ಈ ಹೇಳಿಕೆ ಮೊದಲ ಬಾರಿ ನೀಡಿಲ್ಲ.ಇದು ಬೆಳಗಾವಿಯಲ್ಲಿ ಶುರುವಾಗಿದ್ದು.ಈಶ್ವರಪ್ಪ ಅವರ ಜತೆ ಸದನದಲ್ಲಿ ಹೇಳಿದ್ದರು. ಕೆಂಪೇಗೌಡ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ವಿರುದ್ಧ ಹೇಳಿದರು. ಇದು ಕಾಂಗ್ರೆಸ್ ನ ಟೂಲ್ ಕಿಟ್ ಆಗಿದೆ ಎಂದರು.

ಎರಡು ರೀತಿಯ ಕೆಲಸ

ಕಾಂಗ್ರೆಸ್ ಎರಡು ರೀತಿಯ ಕೆಲಸ ಮಾಡುತ್ತಿದೆ. ಒಂದು ಅಧಿಕಾರದಲ್ಲಿ‌ ಇದ್ದಾಗ ಹಗರಣ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವುದು. ಅಧಿಕಾರ ಇಲ್ಲದಿರುವಾಗ ಜನರಿಗೆ ಸುಳ್ಳು ಹೇಳಿ, ಅರಾಜಕತೆ ಸೃಷ್ಟಿ ಮಾಡುವುದು. ಎಲ್ಲಾ ಹಗರಣದ ಬಗ್ಗೆ ತನಿಖೆಗೆ ನೀಡಲಾಗಿದೆ. ಪರೀಕ್ಷೆಗಳು ಪಾರದರ್ಶಕತೆ ಇಂದ ನಡೆಸಲು ನಮ್ಮ ಸರ್ಕಾರ ಮುಂದಾಗಿದೆ. ಯುವ ಜನರ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.