ಪತಿಯಾಗುವವನನ್ನೇ ಬಂಧಿಸಿದ ಲೇಡಿ ಪೊಲೀಸ್
Team Udayavani, May 7, 2022, 7:55 AM IST
ಗುವಾಹಾಟಿ: ಶೀಘ್ರದಲ್ಲಿಯೇ ದಾಂಪತ್ಯ ಜೀವನ ಪ್ರವೇಶಿಸಬೇಕೆಂದಿರುವ ಮಹಿಳಾ ಪೊಲೀಸ್ ಅಧಿಕಾರಿಗೆ ಪತಿಯಾಗುವವನನ್ನೇ ಬಂಧಿಸಬೇಕಾದ ಸ್ಥಿತಿ ಬಂದರೆ ಹೇಗಿರುತ್ತದೆ? ಅಂಥ ಒಂದು ಸಂದಿಗ್ಧ ಸ್ಥಿತಿ ನಾಗೋನ್ ಜಿಲ್ಲೆಯ ಸಬ್-ಇನ್ಸ್ಪೆಕ್ಟರ್ ಜುನ್ಮೋನಿ ರಭಾ ಅವರಿಗೆ ಬಂದಿದೆ. ಕೆಲವು ದಿನಗಳ ಹಿಂದೆ ರಾಣಾ ಪೊಗಾಗ್ ಎಂಬವರ ಜತೆಗೆ ಅವರ ವಿವಾಹ ನಿಶ್ಚಯವಾಗಿತ್ತು.
ಆತ ಒಎನ್ಜಿಸಿ ಅಧಿಕಾರಿಯಂತೆ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬರುತ್ತಿದ್ದಂತೆಯೇ ತನಿಖೆ ಶುರು ಮಾಡಿದಾಗ ಅಚ್ಚರಿಪಡುವ ಸ್ಥಿತಿ ಜುನ್ಮೋನಿ ಅವರದ್ದು. ಆದರೂ ಧೃತಿಗೆಡದ ಅವರು ಪತಿ ಯಾಗುವ ವ್ಯಕ್ತಿಯನ್ನೇ ಬಂಧಿಸಿದ್ದಾರೆ. ಕೋರ್ಟ್ಗೆ ಹಾಜರುಪಡಿಸಿದಾಗ ಆತನನ್ನು 2 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ.