ಮಂಗಳೂರು: ಚಲಾವಣೆಯಾಗದ 10 ರೂ. ನಾಣ್ಯ; ಹೊಸ ನೋಟೂ ಇಲ್ಲ

Team Udayavani, May 11, 2022, 7:35 AM IST

ಚಲಾವಣೆಯಾಗದ 10 ರೂ. ನಾಣ್ಯ; ಹೊಸ ನೋಟೂ ಇಲ್ಲ

ಮಂಗಳೂರು: ರಾಜ್ಯದಲ್ಲಿ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಾಗದೆ ಮೂಟೆಗಟ್ಟಲೆ ಉಳಿದುಕೊಂಡ ಪರಿಣಾಮ ಕರಾವಳಿಯ ಬ್ಯಾಂಕ್‌ಗಳಿಗೆ 10 ರೂ. ಹೊಸ ನೋಟುಗಳು ಬರುತ್ತಿಲ್ಲ.

ಮೂರು ವರ್ಷಗಳಿಂದ 10 ರೂ. ಹೊಸ ನೋಟುಗಳು ಬರುತ್ತಿಲ್ಲ. ಇತರೆಲ್ಲ ರಾಜ್ಯ ಗಳಲ್ಲಿ 10 ರೂ. ನಾಣ್ಯಗಳ ಮೇಲೆ ಜನರಿಗೆ ಸಂಶಯ ಇಲ್ಲ, ಅಲ್ಲೆಲ್ಲ ಚಲಾವಣೆಯಾಗುತ್ತಿದೆ. ಹಾಗಾಗಿ ಅಲ್ಲಿಗೆ 10 ರೂ.ನ ಹೊಸ ನೋಟುಗಳ ಬಂಡಲುಗಳೂ ಹೋಗುತ್ತಿವೆ. ನಮ್ಮಲ್ಲಿ ಮಾತ್ರ ಕೊರತೆಯಾಗಿದೆ ಎಂದು ಭಾರತೀಯ ಸ್ಟೇಟ್‌ಬ್ಯಾಂಕ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸಮಸ್ಯೆ ಕರಾವಳಿ ಜಿಲ್ಲೆಗಳಲ್ಲೂ ಇದೆ. ಹೊಸದಾಗಿ ನೋಟು ಕೇಳಿಕೊಂಡು ಬರುವವರಿಗೆ ನೀಡಲು ನಮ್ಮಲ್ಲಿ ನೋಟುಗಳು ಇರುವುದಿಲ್ಲ. 10 ರೂ. ನಾಣ್ಯಗಳು ದೊಡ್ಡ ಪ್ರಮಾಣದಲ್ಲಿ ಶಾಖೆಗಳಲ್ಲಿಉಳಿದುಕೊಂಡಿರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟುಗಳನ್ನು ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಬರುತ್ತಿಲ್ಲ ಹೊಸ ನೋಟು
ಬ್ಯಾಂಕ್‌ನವರ ಪ್ರಕಾರ ಮೂರು ವರ್ಷಗಳಿಂದ 10ರ ಹೊಸ ನೋಟು ಬರುತ್ತಿಲ್ಲ. ಇರುವ ನೋಟುಗಳೇ ಚಲಾವಣೆಯಾಗುತ್ತಿವೆ. ಸಮಾರಂಭಗಳಲ್ಲಿ ದಕ್ಷಿಣೆ ರೂಪದಲ್ಲಿ ನೀಡುವುದಕ್ಕೆ, ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ಜನರಿಗೆ ಹೊಸ ನೋಟುಗಳು ನೇರವಾಗಿ ಉಪಯೋಗಕ್ಕೆ ಬರುವುದು ಒಂದೆಡೆಯಾದರೆ ಸತತ ಚಲಾವಣೆಯಲ್ಲಿರುವ ನೋಟುಗಳು ಹಾಳಾಗುವುದರಿಂದ ನಿಯಮಿತವಾಗಿ ನೋಟುಗಳು ಪ್ರಸರಣದಲ್ಲಿ ಇರುವ ಅಗತ್ಯವಿರುತ್ತದೆ. ಪೇಮೆಂಟ್‌ ಆ್ಯಪ್‌ಗ್ಳಿಂದಾಗಿ ಚಿಲ್ಲರೆ ಸಮಸ್ಯೆ ಸ್ವಲ್ಪ ಕಡಿಮೆಯಾಗಿದ್ದರೂ ಹಾಲು, ತರಕಾರಿ, ಮತ್ತಿತರ ದೈನಂದಿನ ಅಗತ್ಯಗಳಿಗೆ ಅತ್ಯಧಿಕವಾಗಿ ಬಳಕೆಯಾಗುವುದು 10ರ ನೋಟು. ಹಾಗಾಗಿ ಸದ್ಯ ಹಳೆಯ, ಮಾಸಿದ, ಹರಕಲು ನೋಟುಗಳೇ ಕರಾವಳಿಯಲ್ಲಿ ಚಲಾವಣೆಯಲ್ಲಿವೆ ಎನ್ನುತ್ತಾರೆ ಅಧಿಕಾರಿಗಳು.

ಬೇಡಿಕೆ ಇಲ್ಲದಿದ್ದರೂ
ಬರುತ್ತಿದೆ 10ರ ನಾಣ್ಯ!
ಹಲವು ಶಾಖೆಗಳಲ್ಲಿ 10 ರೂ. ನಾಣ್ಯ ಮೂಟೆಗಟ್ಟಲೆ ಉಳಿದುಕೊಂಡಿವೆ. ಹಾಗಿದ್ದರೂ ಹೊಸ ನಾಣ್ಯಗಳು ಮತ್ತೆ ಬರುತ್ತಿವೆ. ಬೇಕಾದವರು ಮಾತ್ರ ಬಂದು ಪಡೆದುಕೊಂಡು ಹೋಗುತ್ತಿದ್ದಾರೆ. ಆದರೆ 10ರ ನೋಟು ಬರುವುದು ನಿಂತೇ ಹೋಗಿದೆ ಎಂದು ಯೂನಿಯನ್‌ ಬ್ಯಾಂಕ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನೇಕ ಬಾರಿ ಕಾಯಿನ್‌ ಮೇಳ ನಡೆಸಿ 10 ರೂ. ನಾಣ್ಯ ವಿತರಣೆಗೆ ಯತ್ನ ಮಾಡಲಾಗಿದೆ. ಆದರೂ ಜನರಿಗೆ 10ರ ನಾಣ್ಯದ ಮೇಲೆ ಅದೇಕೋ ಸಂಶಯ ನಿವಾರಣೆಯಾಗುತ್ತಿಲ್ಲ. ಈಗ 1, 2 ರೂ. ನಾಣ್ಯಗಳ ಚಲಾವಣೆ ನಿಧಾನಕ್ಕೆ ಕಡಿಮೆಯಾಗುತ್ತಿದೆ, ಅವುಗಳ ಸ್ಥಾನವನ್ನು 10 ರೂ. ನಾಣ್ಯಗಳು ಆಕ್ರಮಿಸಲಿವೆ, ಮುಂದೆ ಅದರ ಚಲಾವಣೆ ಅನಿವಾರ್ಯ ಎನ್ನುತ್ತಾರೆ ಅವರು.

2,000 ರೂ.
ನೋಟು ಕೂಡ ಇಲ್ಲ
2,000 ರೂ. ಮುಖಬೆಲೆಯ ನೋಟಿನ ಮುದ್ರಣವನ್ನೂ ಆರ್‌ಬಿಐ ನಿಲ್ಲಿಸಿರುವುದರಿಂದ ಹೊಸ ನೋಟುಗಳು ಬರುತ್ತಿಲ್ಲ. ಬಹುತೇಕ ಮೂರ್‍ನಾಲ್ಕು ವರ್ಷಗಳ ಹಿಂದಿನ ನೋಟುಗಳಾದ್ದರಿಂದ ಹಾಳಾಗಿವೆ. ಹಾಗಾಗಿ ಎಟಿಎಂಗಳಲ್ಲಿ ಈಗ ನಾವು ಕೇವಲ 500 ರೂ., 200 ರೂ. ಮತ್ತು 100 ರೂ. ನೋಟು ಮಾತ್ರವೇ ಹಾಕುತ್ತಿದ್ದೇವೆ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಗಳು.

ಯಾಕೆ ಈ ತಿರಸ್ಕಾರ?
ಕೆಲವು ವರ್ಷಗಳ ಹಿಂದೆ ಹೊಸ 10 ರೂ. ನಾಣ್ಯ (ಚಿನ್ನ ಹಾಗೂ ಸ್ಟೀಲ್‌ ಬಣ್ಣವೆರಡೂ ಇರುವ) ಬಿಡುಗಡೆಯಾದ ಸಂದರ್ಭ ಕೆಲವು ಕಡೆಗಳಲ್ಲಿ ಈ ನಾಣ್ಯದ ನಕಲಿಗಳು ಮಾರುಕಟ್ಟೆಗೆ ಬಂದಿತ್ತು ಎಂಬ ಗಾಳಿಸುದ್ದಿ ಹರಡಿತ್ತು. ಆ ಬಳಿಕ ಜನ 10 ರೂ. ನಾಣ್ಯ ತಿರಸ್ಕರಿಸಲು ಆರಂಭಿಸಿದ್ದರು. ಅಲ್ಲದೆ ಈ ನಾಣ್ಯ ಭಾರ ಇದ್ದು ಇರಿಸಿಕೊಳ್ಳುವುದಕ್ಕೆ ರಗಳೆ ಎಂಬ ಅಭಿಪ್ರಾಯವೂ ಇದೆ.

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.