ಟಾಯ್ಲೆಟ್ ಇಲ್ಲದ್ದಕ್ಕೆ ನವ ವಿವಾಹಿತೆ ಆತ್ಮಹತ್ಯೆ
Team Udayavani, May 11, 2022, 12:41 AM IST
ಚೆನ್ನೈ: 2017ರಲ್ಲಿ ಉತ್ತರ ಪ್ರದೇಶದಲ್ಲಿ ತಾನು ಮದುವೆಯಾಗಿ ಹೋದ ಮನೆಯಲ್ಲಿ ತನ್ನ ಅತ್ತೆಗೆ ಶೌಚಾಲಯ ಇಲ್ಲದ್ದನ್ನು ಗಮನಿಸಿದ್ದ ಸೊಸೆಯೊಬ್ಬಳು, ತಾನೇ ಹಣ ಕೊಟ್ಟು ಶೌಚಾಲಯ ನಿರ್ಮಿಸಿದ್ದಳು!
ಇದೇ ವರ್ಷ ಮಾರ್ಚ್ನಲ್ಲಿ ನವ ವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಸಿಡಿಮಿಡಿ ಗೊಂಡು ತವರು ಮನೆಗೆ ವಾಪಸ್ ಹೋಗಿದ್ದ ಘಟನೆಯೂ ಉತ್ತರ ಪ್ರದೇಶದಲ್ಲೇ ನಡೆದಿತ್ತು.
ಆದರೆ ತಮಿಳುನಾಡಿನ ಕಡಲೂರಿನಲ್ಲಿ ರಮ್ಯಾ (27) ನವ ವಿವಾ ಹಿತೆಯೊಬ್ಬಳು ತನ್ನ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾಳೆ!
ಈಕೆ ಖಾಸಗಿ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎ.6ರಂದು ಕಾರ್ತಿಕೇಯನ್ರನ್ನು ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಿದ್ದಳು. ಇದೇ ವಿಚಾರಕ್ಕೆ ಜಗಳವಾಗಿದ್ದು, ಇತ್ತೀಚೆಗೆ ಆಕೆ ತವರಿಗೆ ಮರಳಿದ್ದಳು. ಸೋಮವಾರ ಮತ್ತೆ ಗಂಡ ಹೆಂಡತಿ ಇದೇ ವಿಚಾರವಾಗಿ ಫೋನ್ ಕರೆಯಲ್ಲೇ ಜಗಳ ಆಡಿಕೊಂಡಿದ್ದು, ಮನನೊಂದರಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !