30ವರ್ಷ ಶಿಕ್ಷಕ ವೃತ್ತಿ…60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಆರೋಪಿ ಸೆರೆ

ಠಾಣೆಯಲ್ಲಿ ಶಶಿಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆ

Team Udayavani, May 14, 2022, 1:17 PM IST

30 ವರ್ಷ ಶಿಕ್ಷಕ ವೃತ್ತಿ…60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ;ಆರೋಪಿ ಸೆರೆ

ತಿರುವನಂತಪುರಂ: 30 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ನಿವೃತ್ತ ಶಿಕ್ಷಕನೊಬ್ಬನನ್ನು ಬಂಧಿಸಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ವರ್ಷಾಂತ್ಯಕ್ಕೆ ‘ಕೆಜಿಎಫ್ 3’ ಶೂಟಿಂಗ್ ಆರಂಭ; ಮಹತ್ವದ ಮಾಹಿತಿ ನೀಡಿದ ವಿಜಯ್ ಕಿರಗಂದೂರು

ಮಲಪ್ಪುರಂನ ಸೈಂಟ್ ಜೆಮ್ಮಾಸ್ ಹುಡುಗಿಯರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ, ಮಲಪ್ಪುರಂ ಪುರಸಭೆ ಸದಸ್ಯ ಕೆವಿ ಶಶಿಕುಮಾರ್ ನನ್ನು ಪೊಲೀಸರು ಶುಕ್ರವಾರ ಬಂಧಿಸಿರುವುದಾಗಿ ವರದಿ ವಿವರಿಸಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹಾಗೂ ಶಾಲಾ ಆಡಳಿತ ಮಂಡಲಿಯ ವೈಫಲ್ಯದ ಕುರಿತು ಶೀಘ್ರವೇ ವರದಿ ನೀಡುವಂತೆ ಕೇರಳ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ(ಐಎಎಸ್) ಬಾಬು ಕೆ ಅವರಿಗೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

ಮಪಲ್ಲುರಂನ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಶಿಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದು, ಒಂದು ವಾರದ ನಂತರ ಶಿಕ್ಷಕ ಶಶಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು.

ಶಶಿಕುಮಾರ್ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದಾರೆ. ಕೆವಿ ಶಶಿಕುಮಾರ್ ಸಿಪಿಎಂ ಮುಖಂಡನಾಗಿದ್ದು, ಮಲಪ್ಪುರಂ ಪುರಸಭೆಗೆ ಮೂರು ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದ.

ಶಶಿಕುಮಾರ್ 2022ರ ಮಾರ್ಚ್ ನಲ್ಲಿ ಸೈಂಟ್ ಜೆಮ್ಮಾಸ್ ಹುಡುಗಿಯರ ಹೈಸ್ಕೂಲ್ ನಿಂದ ನಿವೃತ್ತಿಯಾಗಿದ್ದ. ತಾನು ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿರುವುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ ನಂತರ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಈ ಆರೋಪ ಮಾಡಿರುವುದಾಗಿ ವರದಿ ವಿವರಿಸಿದೆ.

ಪೊಲೀಸ್ ಠಾಣೆಯಲ್ಲಿ ಹಲವಾರು ದೂರು ದಾಖಲಾದ ನಂತರ ಶಶಿಕುಮಾರ್ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ. ಹಳೆ ವಿದ್ಯಾರ್ಥಿಗಳ ಸಂಘದ ಪ್ರಕಾರ, 2019ರಲ್ಲಿಯೇ ಶಶಿಕುಮಾರ್ ವಿರುದ್ಧ ಕೆಲವು ವಿದ್ಯಾರ್ಥಿನಿಯರು ದೂರು ನೀಡಿದ್ದರು ಕೂಡಾ ಶಾಲಾ ಆಡಳಿತ ಮಂಡಳಿ ಯಾವ ಕ್ರಮ ತೆಗೆದುಕೊಂಡಿರಲಿಲ್ಲವಾಗಿತ್ತು.

ನಂತರ ಹಳೆ ವಿದ್ಯಾರ್ಥಿಗಳ ಸಂಘದ ಮೂಲಕ  ಲೈಂಗಿಕ ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿಯರು ಮಲಪ್ಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಿಪಿಎಂ(ಎಂ) ಶಶಿಕುಮಾರ್ ನನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

police crime

Deepfake ವೀಡಿಯೋ ಸೃಷ್ಟಿಕರ್ತರನ್ನು ಬಂಧಿಸಿ: ಮಹಾ ಸರಕಾರ ಆದೇಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.