ಪ್ರವಾಸಿಗರನ್ನು ಸೆಳೆಯುವ ಸಾವನದುರ್ಗ ಬೆಟ್ಟ


Team Udayavani, May 16, 2022, 4:37 PM IST

ಪ್ರವಾಸಿಗರನ್ನು  ಸೆಳೆಯುವ ಸಾವನದುರ್ಗ ಬೆಟ್ಟ

ಮಾಗಡಿ: ಪ್ರಸಿದ್ಧ ಪ್ರವಾಸಿ ತಾಣ ಎಂದೇ ಪ್ರಖ್ಯಾತಿ ಹೊಂದಿರುವ ಸಾವನದುರ್ಗದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಮೇ 16ರಸೋಮವಾರ ಮಧ್ಯಾಹ್ನ 12.45ಕ್ಕೆ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ ಎಂದು ಮುಜರಾಯಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಾವನದುರ್ಗ ನಿಸರ್ಗ ಪ್ರಿಯರ ಸ್ವರ್ಗವಾಗಿದೆ. ದುರ್ಗಮದ ಹಾದಿ ಮೈಮರೆತರೆ ಸಾವಿನ ದುರ್ಗವೂಹೌದು. ಮಾಗಡಿ ತಾಲೂಕಿನಲ್ಲಿಯೇ ಸುಪ್ರಸಿದ್ಧ ಪ್ರವಾಸಿತಾಣ ಎಂದೇ ಪ್ರಖ್ಯಾತಗೊಂಡಿದ್ದು, ಪ್ರಕೃತಿ ಮಡಿಲಲ್ಲಿರುವ ಸಾವನದುರ್ಗ ದಿನೇ ದಿನೆಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚಾರಣಿಗರನ್ನುಮತ್ತು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.ಏಷ್ಯಾ ಖಂಡದಲ್ಲೇ ಅತಿ ಎತ್ತರದ ಬೃಹತ್‌ ಏಕಶಿಲಾಎರಡು ಬೆಟ್ಟಗಳಿವೆ. ಕರಿ ಮತ್ತು ಬಿಳಿ ಕಲ್ಲು ಬೆಟ್ಟವೆಂದೇಪ್ರಖ್ಯಾತಿಗೊಂಡಿದೆ. ಇಲ್ಲಿನ ಅವಶೇಷಗಳೇ ಕಥೆಹೇಳುತ್ತವೆ. ಈ ಸಾವನದುರ್ಗವನ್ನುವಶಪಡಿಸಿಕೊಳ್ಳಲು ಲಾರ್ಡ್‌ ಕಾರ್ನ್ ವಾಲಿಸ್‌ಪಟ್ಟಪಾಡನ್ನು ಕಣ್ಣಾರೆ ಕಂಡ ಕರ್ನಲ್‌ ವಿಲ್ಸ್‌ರೋಮಾಂಚಕಾರಿಯೂ ಮೈನವಿರೇಳಿಸುವಂತಹ ಈದುರ್ಗ ಎಚ್ಚರ ತಪ್ಪಿದರೆ ಸಾವಿನ ದುರ್ಗವೆಂದಿದ್ದರು.

ರುದ್ರ ರಮಣೀಯ ದೃಶ್ಯ: ಆಕಾಶದ ಎತ್ತರಕ್ಕೆ ಕಾಣುವ ಈ ಏಕಶಿಲಾ ಬೆಟ್ಟವನ್ನೇರಿ ಇಲ್ಲಿನ ಬೆಟ್ಟದಿಂದಕಣ್ಮನ ತಣಿಸುವಂತ ರುದ್ರ ರಮಣೀಯ ದೃಶ್ಯಕಣ್ತುಂಬಿಕೊಂಡು ಅಲ್ಲಿ ಬೀಸುವ ತಂಗಾಳಿಸವಿಯಲು ಸಾಹಸಿ ಚಾರಣಿಗರು ಬರುತ್ತಾರೆ. ವೀಕೆಂಡ್‌ ದಿನಗಳಲ್ಲಂತೂ ಮೋಜು, ಮಸ್ತಿ ಅನುಭವಿಸಲು ಬರುವವರೇ ಹೆಚ್ಚಾಗಿದ್ದಾರೆ.

7 ಸಾವಿರ ಎಕರೆ ಅರಣ್ಯಪ್ರದೇಶ: ಪ್ರಕೃತಿಯ ಮಡಿಲಲ್ಲಿರುವ ಈ ಸಾವನದುರ್ಗ ಸುಮಾರು ಏಳುಸಾವಿರ ಎಕರೆ ಸಂರಕ್ಷಿತ ಅರಣ್ಯಪ್ರದೇಶ ಹೊಂದಿದ್ದು, ಈ ಅರಣ್ಯ ಪ್ರದೇಶದಲ್ಲಿ ಹಲವಾರು ವರ್ಷಗಳಿಂದಕಾಡಾನೆಗಳು ಬೀಡು ಬಿಟ್ಟಿವೆ. ಹುಲಿ, ಚಿರತೆ, ಕರಡಿ, ನರಿ, ತೋಳ ಸೇರಿದಂತೆ ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳ ಸಂಕುಲಗಳು ಇಲ್ಲಿವೆ. ಈ ದುರ್ಗದಮಡಿಲಲ್ಲಿ ಶ್ರೀಗಂಧ, ಬೀಟೆ, ತೇಗ ಇತರೆ ಜಾತಿಗಳ ಮರಗಳು, ಗಿಡಮೂಲಿಕೆಗಳು ಹೇರಳವಾಗಿದೆ. ನಿರ್ವಹಣೆ ಇಲ್ಲದೆ ವಿನಾಶದ ಹಂಚಿನಲ್ಲಿದೆ.

ನಿರ್ಬಂಧ ಏಕಿಲ್ಲ?: ಪಕ್ಕದಲ್ಲೇ ಮಂಚನಬೆಲೆ ಜಲಾಶಯವಿದೆ. ಅಕ್ರಮವಾಗಿ ರೆಸಾರ್ಟ್‌ಗಳು ಔಟಿಂಗ್‌ ಸಹ ನಡೆಸಲಾಗುತ್ತಿದೆ. ಇಲ್ಲಿಗೂ ಮೋಜು-ಮಸ್ತಿಗೆಂದು ಬರುವವರು ಜಲಾಶಯದಲ್ಲಿಈಜಲು ಹೋಗಿ ಪ್ರಾಣ ಕಳೆದುಕೊಂಡಿರುವ ಅನೇಕ ಉದಾಹರಣೆಗಳಿದ್ದರೂ ಸಹ ಇದಕ್ಕೆಲ್ಲ ಕಡಿವಾಣಕ್ಕೆಯಾರು ಮುಂದಾಗುತ್ತಿಲ್ಲ ಎಂಬ ಆರೋಪ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಹ ಕೇಳಿಬರುತ್ತಿದೆ.

ಚೆಕ್‌ಪೋಸ್ಟ್‌ ಇಲ್ಲ: ಪ್ರವಾಸಿಗರು ಅನುಮತಿ ಇಲ್ಲದೆ ಕಾಡಿನೊಳಗೆ ಪ್ರವೇಶ ನಿಷೇಧಿಸಿದೆ ಎಂಬ ನಿರ್ಬಂಧ ಹೇರಿದರೂ ಸಹ ಕಣ್ತಪ್ಪಿಸಿ ಕಾಡಿನೊಳಗೆ ಪ್ರವೇಶಿಸಿಮೋಜುಮಸ್ತಿ ಮಾಡುವವರೂ ಇದ್ದಾರೆ. ಇವೆಲ್ಲವನ್ನುತಪ್ಪಿಸಲೆಂದೇ ಪೊಲೀಸರು ಸಹ ಸಾವನದುರ್ಗದಲ್ಲಿಪೊಲೀಸರು ಚೆಕ್‌ಪೋಸ್ಟ್‌ ತೆರೆದು ಕೆಲದಿನಗಳ ಕಾಲಎರಡು ಪಾಳಿಯಲ್ಲಿ ಹಗಲುರಾತ್ರಿ ಕಾದರು. ಕೊನೆಗೆಸಿಬ್ಬಂದಿ ಕೊರತೆ ಎಂದು ಟೆಂಟ್‌ ಕಿತ್ತಿಕೊಂಡು ಖಾಲಿಮಾಡಿ ಬಂದಿದ್ದಾರೆ. ಅರಣ್ಯ ಕಾವಲುಗಾರರಿದ್ದಾರೆ. ಚೆಕ್‌ ಪೋಸ್ಟ್‌ ಇಲ್ಲದೆ ಕಾರಣ ಕಾವಲುಗಾರರೇ ಇಲ

ಬೆಟ್ಟದ ತಪ್ಪಲಿನಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ :

ಸಾವನದುರ್ಗದಲ್ಲಿ ಪ್ರಸಿದ್ಧವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮತ್ತು ಸಾವಂದಿ ವೀರ ಭದ್ರಸ್ವಾಮಿ ದೇವಸ್ಥಾನ ಭಕ್ತರನ್ನ ಆಕರ್ಷಿಸಿದೆ. ಈ ದೇವಸ್ಥಾನಗಳು ಮುಜರಾಯಿ ಇಲಾಖೆಗೆಒಳಪಟ್ಟಿವೆ. ನಿತ್ಯ ಭಕ್ತರು

ಆಗಮಿಸುತ್ತಿದ್ದು, ಭಕ್ತರು ನಡೆಸುವ ಸೇವಾಕಾರ್ಯ ಗಳಿಗೆ ಇಲ್ಲಿ ಕಲ್ಯಾಣ ಮಂಟಪದೊರಕುತ್ತವೆ. ಇಲ್ಲಿನ ರುದ್ರ ರಮಣೀಯ ದೃಶ್ಯಕ್ಕೆ ಮನಸೋತವರೇ ಹೆಚ್ಚು.

ಮೋಜು-ಮಸ್ತಿಗೆ ಕಡಿವಾಣ ಅನಿವಾರ್ಯ :  ಸರ್ಕಾರ ಇಲ್ಲಿನ ಅರಣ್ಯ ರಕ್ಷಣೆ ಮತ್ತುಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ. ಇಂತಹ ನಿಸರ್ಗದತ್ತ ಸಂರಕ್ಷಿತಅರಣ್ಯ ಪ್ರದೇಶದ ನಡುವೆ ಚಾರಣದಹೆಸರಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಸುಂದರವಾದ ಪರಿಸರಕ್ಕೆ ಮತ್ತು ಕಾಡುಪ್ರಾಣಿ,ಪಕ್ಷಿಗಳಿಗೆ ಧಕ್ಕೆ ತರುವಂತಹ ಕೆಲಸ ಯಾರೂಮಾಡಬಾರದು ಎಂಬುದೇ ಪರಿಸರ ಪ್ರೇಮಿಗಳ ಆಶಯವಾಗಿದೆ.

ಕಾಡಂಚಿನಲ್ಲಿ ವಾಸಿಸುವ ಸ್ಥಳೀಯರಿಗೆ ಅರಣ್ಯಾಧಿಕಾರಿಗಳು ತೊಂದರೆ ಕೊಡಬಾರದು. ನಗರ ಪ್ರದೇಶದಿಂದಬರುವ ಯುವಕರು ಕಾಡಿನಲ್ಲಿಯೇಕುಳಿತು ಮೋಜು, ಮಸ್ತಿಗೆ ಅವಕಾಶ ಕೊಡಬಾರದು. ಪ್ರಕೃತಿದತ್ತ ಪರಿಸರಉಳಿಸಲು ಸ್ಥಳೀಯರ ಸಂಪೂರ್ಣ ಸಹಕಾರವಿದೆ. – ಶಿವರಾಜು, ಮಂಚನಬೆಲೆ ನಿವಾಸಿ

ಸಾವನದುರ್ಗ ಕಾಯ್ದಿಟ್ಟ ಅರಣ್ಯ ಪ್ರದೇಶ. ಗಿಡಮರಗಳ ಸಂರಕ್ಷಣೆಮಾಡಲಾಗಿದೆ. ಕಾಡಿನೊಳಗೆ ಅನುಮತಿಇಲ್ಲದೆ ಪ್ರವೇಶ ಮಾಡುವಂತಿಲ್ಲ.ಗಮನಕ್ಕೆ ಬಂದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು. – ಜಗದೀಶ್‌, ವಲಯ ಅರಣ್ಯಾಧಿಕಾರಿ, ಮಾಗಡಿ

– ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.