ದುರಸ್ತಿಗಾಗಿ ಕಾದಿವೆ 506 ಶಾಲೆಗಳು


Team Udayavani, May 18, 2022, 3:17 PM IST

ದುರಸ್ತಿಗಾಗಿ ಕಾದಿವೆ 506 ಶಾಲೆಗಳು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರದ ಅಭಾವದ ನಡುವೆಯೂ ಮೇ.16 ರಿಂದಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಕಾರ್ಯಾರಂಭವಾಗಿದೆ. ವಿದ್ಯಾರ್ಥಿಗಳುಉತ್ಸಾಹದಿಂದ ಶಾಲೆಗೆ ಬಂದಿದ್ದಾರೆ. ಆದರೆ,ಜಿಲ್ಲೆಯಲ್ಲಿ ಈಗಾಗಲೇ ಸುರಿದ ಮಳೆಯಿಂದಾಗಿ1,560 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಪೈಕಿ 506 ಶಾಲೆಗಳಿಗೆ ಹಾನಿಯಾಗಿದ್ದು ಅದರಲ್ಲಿ 1,114 ಕೊಠಡಿಗಳಿಗೆ ಹಾನಿಯಾಗಿದೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಗಿತ್ತು. ಈ ಅವಧಿಯಲ್ಲಿ ಸುರಿದ ಮಳೆಯಕಾರಣದಿಂದ ಅನೇಕ ಶಾಲೆಯ ಕೊಠಡಿಗಳು ಶಿಥಿಲ ವ್ಯವಸ್ಥೆಗೆ ತಲುಪಿ ನೆಲಕಚ್ಚಿದರೆ, ಇನ್ನು ಬಹುತೇಕ ಶಾಲೆಗಳಕೊಠಡಿಗಳ ಚಾವಣಿ ಮಳೆಯ ಕಾರಣದಿಂದ ಸುರಿ ಯುತ್ತಿರುವ ದೂರುಗಳು ಸಹ ಕೇಳಿಬಂದಿದೆ. ಶಾಲೆಗಳಸ್ಥಿತಿಗತಿ ಸುಧಾರಿಸುವ ಸಲುವಾಗಿ ಶಿಕ್ಷಣ ಇಲಾಖೆಯಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ಸರ್ಕಾರಿ ಶಾಲೆಗಳುಮತ್ತು ಆ ಶಾಲೆಗಳಲ್ಲಿ ಶಿಥಿಲ ಮತ್ತು ನೆಲಕಚ್ಚಿರುವಕೊಠಡಿಗಳ ಸಂಖ್ಯೆಯನ್ನು ಪಟ್ಟಿ ಮಾಡಿದ್ದಾರೆ.ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಭರ್ಜರಿಯಾಗಿಮಳೆಯಾಗಿದ್ದು ಪ್ರಸಕ್ತ ಸಾಲಿನಲ್ಲೂ ಮಳೆಪ್ರಾರಂಭವಾಗಿದೆ. ಇದರಿಂದ ಎಚ್ಚೆತ್ತಿಕೊಂಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ಸಿದ್ಧಪಡಿಸಿರುವ ಪಟ್ಟಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಚಿಂತಾಮಣಿ ತಾಲೂಕಿನಲ್ಲಿ 327 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 63 ಮಳೆಯಿಂದ ಹಾಗೂಇತರೆ ಕಾರಣಗಳಿಂದ ಹಾನಿಯಾಗಿದೆ. 131 ಶಾಲಾಕೊಠಡಿಗಳು ದುರಸ್ತಿಯಾಗಬೇಕಿದೆ. ಒಟ್ಟು 24ಸರ್ಕಾರಿ ಪ್ರೌಢಶಾಲೆಗಳಿದ್ದು, ಅದರಲ್ಲಿ 1 ಶಾಲೆಮಳೆಯಿಂದ, 06 ಪ್ರೌಢಶಾಲಾ ಕೊಠಡಿಗಳುಹಾನಿಯಾಗಿವೆ. ಒಟ್ಟು ಸರ್ಕಾರಿ ಶಾಲೆಗಳ ಸಂಖ್ಯೆ 351ಅದರಲ್ಲಿ 64 ಶಾಲೆಗಳು ಮತ್ತು 137 ಕೊಠಡಿಗಳು ಮಳೆಯಿಂದ ಹಾನಿಯಾಗಿವೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 233 ಸರ್ಕಾರಿಪ್ರಾಥಮಿಕ ಶಾಲೆಗಳಿದ್ದು, 149 ಮಳೆ, ಇತರೆ ಕಾರಣ ದಿಂದ ಹಾನಿಯಾಗಿವೆ. 291 ಶಾಲಾ ಕೊಠಡಿ ದುರಸ್ತಿಯಾಗಬೇಕಿದೆ. ಒಟ್ಟು 14 ಸರ್ಕಾರಿ ಪ್ರೌಢಶಾಲೆಗಳಿದ್ದು, ಅದರಲ್ಲಿ 1 ಶಾಲೆ ಮಳೆಯಿಂದ, 6 ಪ್ರೌಢಶಾಲಾಕೊಠಡಿಗಳು ಹಾನಿಯಾಗಿವೆ. ಒಟ್ಟು ಸರ್ಕಾರಿ ಶಾಲೆಗಳಸಂಖ್ಯೆ 247 ಅದರಲ್ಲಿ 150 ಶಾಲೆಗಳು, 297ಕೊಠಡಿಗಳು ಮಳೆಯಿಂದ ಹಾನಿಯಾಗಿವೆ.

ಗುಡಿಬಂಡೆ ತಾಲೂಕಿನಲ್ಲಿ 97 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 28 ಮಳೆ, ಇತರೆ ಕಾರಣದಿಂದಹಾನಿಯಾಗಿವೆ. 36 ಶಾಲೆ ಕೊಠಡಿದುರಸ್ತಿಯಾಗಬೇಕಿದೆ. ಒಟ್ಟು 12 ಸರ್ಕಾರಿ ಪ್ರೌಢಶಾಲೆಗಳಿದ್ದು, ಅದರಲ್ಲಿ 2 ಶಾಲೆ ಮಳೆಯಿಂದ, 4ಪ್ರೌಢಶಾಲಾ ಕೊಠಡಿಗಳು ಹಾನಿಯಾಗಿವೆ. ಒಟ್ಟು109 ಶಾಲೆಗಳಲ್ಲಿ 30 ಶಾಲೆಗಳು ಹಾಗೂ 40ಕೊಠಡಿಗಳು ಮಳೆಯಿಂದ ಹಾನಿಯಾಗಿವೆ.

ಗೌರಿಬಿದನೂರು ತಾಲೂಕಿನಲ್ಲಿ 286 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 136 ಮಳೆ, ಇತರಕಾರಣದಿಂದ ಹಾನಿಯಾಗಿವೆ. 314 ಶಾಲೆ ಕೊಠಡಿದುರಸ್ತಿಯಾಗಬೇಕಿದೆ. ಒಟ್ಟು 23 ಸರ್ಕಾರಿಪ್ರೌಢಶಾಲೆಗಳಿದ್ದು, ಅದರಲ್ಲಿ 5 ಶಾಲೆ ಮಳೆಯಿಂದ,20 ಪ್ರೌಢಶಾಲಾ ಕೊಠಡಿಗಳು ಹಾನಿಯಾಗಿವೆ. ಒಟ್ಟು 309 ಶಾಲೆಗಳಲ್ಲಿ 141ಶಾಲೆಗಳು ಮತ್ತು 334ಕೊಠಡಿಗಳು ಮಳೆಯಿಂದ ಹಾನಿಯಾಗಿವೆ.

ಬಾಗೇಪಲ್ಲಿ ತಾಲೂಕಿನಲ್ಲಿ 255 ಪ್ರಾಥಮಿಕಶಾಲೆಗಳಿದ್ದು, 44 ಮಳೆ, ಇತರ ಕಾರಣದಿಂದಹಾನಿಯಾಗಿವೆ. 102 ಶಾಲೆ ದುರಸ್ತಿಯಾಗಬೇಕಿದೆ. ಒಟ್ಟು 21 ಪ್ರೌಢಶಾಲೆಗಳಿದ್ದು, ಅದರಲ್ಲಿ 3 ಶಾಲೆ ಮಳೆಯಿಂದ ಹಾಗೂ 9 ಪ್ರೌಢಶಾಲಾ ಕೊಠಡಿಗಳು ಹಾನಿಯಾಗಿವೆ. ಒಟ್ಟು 276 ಶಾಲೆಗಳಲ್ಲಿ 47 ಶಾಲೆಗಳು

ಹಾಗೂ 111 ಕೊಠಡಿಗಳು ಹಾನಿಗೆ ಒಳಗಾಗಿವೆ.ಶಿಡ್ಲಘಟ್ಟ ದಲ್ಲಿ 251 ಪ್ರಾಥಮಿಕ ಶಾಲೆಗಳಿದ್ದು, 70ಮಳೆ, ಇತರ ಕಾರಣದಿಂದ ಹಾನಿಯಾಗಿವೆ. 176ಶಾಲೆ ದುರಸ್ತಿಯಾಗಬೇಕಿದೆ. ಒಟ್ಟು 17 ಸರ್ಕಾರಿಪ್ರೌಢಶಾಲೆಗಳಿದ್ದು, 4 ಶಾಲೆ ಮಳೆಯಿಂದ ಹಾಗೂ 19 ಪ್ರೌಢಶಾಲಾ ಕೊಠಡಿಗಳು ಹಾನಿಯಾಗಿವೆ. ಒಟ್ಟು268 ಶಾಲೆಗಳಲ್ಲಿ 74ಶಾಲೆಗಳು ಮತ್ತು 195 ಕೊಠಡಿಗಳು ಮಳೆಯಿಂದ ಹಾನಿಯಾಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1449 ಪ್ರಾಥಮಿಕ ಶಾಲೆಗಳಿದ್ದು ಸುಮಾರು 490 ಪ್ರಾಥಮಿಕ ಶಾಲೆಗಳ 1050 ಕೊಠಡಿಗಳು ಅಧಿಕ ಮಳೆಯಿಂದ ಹಾನಿಗೊಳಗಾಗಿರುತ್ತದೆ ಅದರಂತೆ ಒಟ್ಟು 111 ಸರ್ಕಾರಿಪ್ರೌಢಶಾಲೆಗಳಿದ್ದು 16 ಶಾಲೆಗಳ ಸುಮಾರು 64 ಕೊಠಡಿಗಳು ಮಳೆಯಿಂದ ಹಾನಿಗೊಳಗಾಗಿರುತ್ತದೆ. ಮಳೆಯಿಂದ ಹಾನಿಗೊಳಗಾದ ಶಾಲಾ ಕೊಠಡಿಗಳುಶಿಥಿಲಗೊಂಡಿದ್ದು, ಗೋಡೆಗಳು ಬಿರುಕು ಬಿಟ್ಟಿವೆ, ಶಾಲೆ ಸೋರುತ್ತಿದ್ದು ಕುಸಿದು ಬೀಳವ ಸ್ಥಿತಿ ತಲುಪಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಆರಂಭವಾಗಿದೆ ಇತ್ತೀಚೆಗೆಸುರಿಯುತ್ತಿರುವ ಮಳೆಯಿಂದ ಈಗಾಗಲೇ ಹಾನಿಯಾಗಿರುವ ಶಾಲೆಗಳು ಮತ್ತುಕೊಠಡಿಗಳ ಪಟ್ಟಿಯನ್ನು ಸಿದ್ಧಪಡಿಸಿ ಹಿರಿಯ ಅಧಿಕಾರಿಗಳ ಮೂಲಕ ದುರಸ್ತಿಗೊಳಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಅನುದಾನ ಬಂದ ತಕ್ಷಣ ಹಾನಿಗೊಳಗಾಗಿರುವ ಶಾಲಾಕೊಠಡಿಗಳನ್ನು ದುರಸ್ತಿ ಮಾಡುವ ಕಾರ್ಯವನ್ನು ನಡೆಸಲಾಗುವುದು. – ಜಯರಾಮರೆಡ್ಡಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕಬಳ್ಳಾಪುರ

 

– ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.