ಸೈಕ್ಲಿಂಗ್‌ನಿಂದ ಆರೋಗ್ಯವಂತ, ಪರಿಸರಸ್ನೇಹಿ ಸಮಾಜ : ಇಂದು ವಿಶ್ವ ಬೈಸಿಕಲ್‌ ದಿನ


Team Udayavani, Jun 3, 2022, 6:05 AM IST

ಸೈಕ್ಲಿಂಗ್‌ನಿಂದ ಆರೋಗ್ಯವಂತ, ಪರಿಸರಸ್ನೇಹಿ ಸಮಾಜ : ಇಂದು ವಿಶ್ವ ಬೈಸಿಕಲ್‌ ದಿನ

ರಸ್ತೆ, ಹೆದ್ದಾರಿಗಳುದ್ದಕ್ಕೂ ಆಕರ್ಷಕ ವಿನ್ಯಾಸ, ಶೈಲಿಯ ಬೈಕ್‌, ಆಟೋ, ಕಾರು, ವಿವಿಧ ತೆರನಾದ ವ್ಯಾನ್‌ಗಳು, ಬಸ್‌ಗಳು, ಲಾರಿ-ಟ್ರಕ್‌ಗಳು ಓಡಾಡುವಾಗ ಬದಿಯಲ್ಲಿ ತನ್ನಷ್ಟಕ್ಕೇ ಪೆಡಲ್‌ ತುಳಿಯುತ್ತಾ ಸಾಗುವ ಬಡಪಾಯಿ ಸೈಕಲ್‌ ಸವಾರ ಯಾರ ಗಮನಕ್ಕೂ ಬರುವುದಿಲ್ಲ. ಕಾರುಗಳಂತೆ ಟ್ರಾಫಿಕ್‌ ಜಾಮ್‌ಗೆ ಕಾರಣವಾಗದೆ, ಹೊಗೆಯುಗುಳದೆ, ಲೀಟರ್‌ಗಟ್ಟಲೆ ಪೆಟ್ರೋಲ್‌ ಕುಡಿಯದೆ ಸವಾರನ ಕಾಲಿನ ಬಲದಲ್ಲಿ ಚಲಿಸುವ ಸೈಕಲ್‌ ಇಂದಿಗೂ ಹಲವು ಕುಟುಂಬಗಳಿಗೆ ಆಧಾರ, ನಗರಗಳಲ್ಲಿ ಫಿಟ್‌ನೆಸ್‌ ಪ್ರಿಯರ ಮೆಚ್ಚಿನ ಸಾಧನ. ಪೇಪರ್‌, ಹಾಲು ಹಾಕುವವರಿಗೆ, ಕಾರ್ಮಿಕರೇ ಮುಂತಾದ ಸರಳಜೀವಿಗಳಿಗೆ ಇದು ಅಗ್ಗದ ಸಂಚಾರ ಸಾಧನ.

ಹಿಂದೆ ವಿದೇಶ ಗಳಲ್ಲಷ್ಟೇ ಫಿಟ್‌ನೆಸ್‌, ಕ್ರೀಡಾ ಉಪಯೋಗಕ್ಕೆ ಸೈಕಲ್‌ ಬಳಕೆಯಾಗುತ್ತಾ ಬಂದಿದ್ದರೆ ಕಳೆದೆರಡು ದಶಕಗಳಲ್ಲಿ ಭಾರತ ದಲ್ಲೂ ಈ ಕ್ಷೇತ್ರಗಳಲ್ಲಿ ಸೈಕಲ್‌ ಬಹಳಷ್ಟು ಬೆಳವಣಿಗೆ
ಸಾಧಿಸಿದೆ. ಈಗ ಭಾರತದ ನಗರ, ಪಟ್ಟಣಗಳಲ್ಲೂ ಬೆಳಗ್ಗೆ ಎದ್ದು ಆರೋಗ್ಯಕ್ಕಾಗಿ ಸೈಕಲ್‌ ತುಳಿದರೆ ಇನ್ನು ಕೆಲವು ಮೆಟ್ರೋ ನಗರಗಳಲ್ಲಿ ಸಪೂರ ಟಯರ್‌ ರೋಡ್‌ ಸೈಕಲ್‌ಗ‌ಳಲ್ಲಿ ರೇಸ್‌ಗಳಲ್ಲಿ ಪಾಲ್ಗೊಳ್ಳಲು ಅಭ್ಯಾಸ ನಡೆಸುವುದನ್ನೂ ಗಮನಿಸಬಹುದು.

ಬೈಸಿಕಲ್‌ಗೆ ಸುಮಾರು 200 ವರ್ಷ ಗಳ ಇತಿಹಾಸವಿದೆ. ಕಾರ್ಲ್ ವಾನ್‌ ಡ್ರಯಸ್‌ ಎಂಬ ಜರ್ಮನ್‌ ಪ್ರಜೆ 1817ರಲ್ಲಿ ಬೈಸಿಕಲ್‌ ತಯಾರಿಸಿ ಸಾರಿಗೆ ವಾಹನಕ್ಕೆ ನಾಂದಿ ಹಾಡಿದರು. ಆಗ ಇದ್ದ ಸೈಕಲ್‌ಗೆ ಪೆಡಲ್‌ ಇರಲಿಲ್ಲ, ಅದರ ಮೇಲೆ ಕುಳಿತು ನಡೆಯುತ್ತಾ, ಓಡುತ್ತಾ ಹೋದರೆ ಬೇಗ ತಲಪಬಹುದಿತ್ತು! ಅನಂತರದ ದಿನಗಳಲ್ಲಿ ವಿವಿಧ ರೂಪ ತಳೆದ ಬೈಸಿಕಲ್‌ 20ನೇ ಶತಮಾನದಲ್ಲಿ ಅತ್ಯಂತ ಜನಪ್ರಿಯ ಸಾರಿಗೆ ಸಾಧನವಾಯಿತು. ಪ್ರಪಂಚದೆಲ್ಲೆಡೆ ಸೈಕಲ್‌ ಬಳಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಯಿತು. 20ನೇ ಶತಮಾನದ ಪೂರ್ವಾರ್ಧದಲ್ಲಿ ಯುರೋಪಿನ ದೇಶಗಳು ಅನಂತರ ಏಷ್ಯಾ ಹಾಗೂ ಇನ್ನಿತರ ದೇಶಗಳಲ್ಲಿ ಸೈಕಲ್‌ ಬಹಳ ಜನಪ್ರಿಯ ಸಾರಿಗೆ ಸಾಧನವಾಗಿ ಗುರುತಿಸಿಕೊಂಡಿತು. 20ನೇ ಶತಮಾನದ ಅಂತ್ಯ ಹಾಗೂ 21ನೇ ಶತಮಾನದ ಆದಿಯಲ್ಲಿ ಮೋಟಾರು ವಾಹನಗಳು ಸಾರಿಗೆ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿಗೆ ಸಾಕ್ಷಿಯಾದವು.

ಸೈಕಲ್‌ ಬಹಳ ಸರಳ, ಕೈಗೆಟಕುವ, ವಿಶ್ವಾಸಾರ್ಹ, ಪರಿಸರ ಸ್ನೇಹಿ ಸಾರಿಗೆ ಸಾಧನ. ಮೋಟಾರು ವಾಹನಗಳ ಪೈಪೋಟಿಯಲ್ಲಿ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡು ಮೂಲೆ ಗುಂಪಾಗುವ ಸಂದರ್ಭ ದಲ್ಲಿ ಪೋಲೆಂಡ್‌ನ‌ ಪ್ರೊ| ಲೆಸಝೆಕ್‌ ಸಿಬಿಲ್‌ಸ್ಕಿ ಎಂಬ ಸಮಾಜಶಾಸ್ತ್ರಜ್ಞರ ಅವಿರತ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್‌ 3ನ್ನು ವಿಶ್ವ ಬೈಸಿಕಲ್‌ ದಿನವನ್ನಾಗಿ ಆಚರಿಸುವ ಕುರಿತು 2018ರಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು. ಪ್ರಪಂಚಾದ್ಯಂತ ಬೈಸಿಕಲ್‌ ಅನ್ನು ಸಾರಿಗೆ ಸಾಧನವಾಗಿ, ಮನೋರಂಜನೆಗೆ, ಕ್ರೀಡಾಚಟುವಟಿಕೆಗಳಿಗಾಗಿ ಬಳಸುವ ನಿಟ್ಟಿನಲ್ಲಿ ಉತ್ತೇಜನ ನೀಡುವ ಈ ಕಾರ್ಯಕ್ರಮಗಳನ್ನು ಪ್ರತೀ ವರ್ಷ ವಿಶ್ವ ಬೈಸಿಕಲ್‌ ದಿನದಂದು ವಿವಿಧ ಸಂಘಸಂಸ್ಥೆಗಳು ಆಯೋಜಿಸುತ್ತವೆ.

ಬೈಸಿಕಲ್‌ ಬಳಕೆ ಜನರ ಆರೋಗ್ಯದ ಮೇಲೆ ಹಲವಾರು ಉತ್ತಮ ಪರಿಣಾಮ ಗಳನ್ನು ಬೀರುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ನಿರಂತರವಾಗಿ ಸೈಕ್ಲಿಂಗ್‌ ಮಾಡು ವುದರಿಂದ  ಹೃದಯ ಬಲಗೊಳ್ಳುವುದು, ಸ್ನಾಯುಗಳ ಶಕ್ತಿವರ್ಧನೆ, ಸಂದುಗಳ ನಮ್ಯತೆ ಹೆಚ್ಚುವುದು, ಮೂಳೆ ಬಲಗೊಳ್ಳುವುದು, ಪಚನ ಕ್ರಿಯೆ ಉತ್ತಮ ಗೊಳ್ಳುವುದು, ಮಾನಸಿಕ ಒತ್ತಡ ಕಡಿಮೆಯಾಗಿ ಆತ್ಮ ಸಂತೋಷ ಹೀಗೆ ಹತ್ತು ಹಲವು ಆರೋಗ್ಯ ಸಂಬಂಧಿ ಪ್ರಯೋಜನಗಳಿವೆ. ಸೈಕ್ಲಿಂಗ್‌ನಿಂದ ಮಾರಕ ರೋಗಗಳಾದ ಪಾರ್ಶ್ವವಾಯು, ಹೃದಯಾ ಘಾತ, ಖನ್ನತೆ, ಡಯಾಬಿಟಿಸ್‌, ಬೊಜ್ಜು, ಸಂಧಿವಾತ ಮುಂತಾದ ರೋಗಗಳನ್ನು ಬರದಂತೆ ತಡೆಯಬಹುದು. ಸೈಕ್ಲಿಂಗ್‌ನ್ನು ಸಾಮಾನ್ಯವಾಗಿ ಹೊರಾಂಗಣದಲ್ಲಿ ಮಾಡುವಾಗ ಉತ್ತಮ ಗಾಳಿ, ಸೂರ್ಯಕಿರಣ, ಪರಿಸರದಲ್ಲಿನ ಮನಮುದಗೊಳಿಸುವ ದೃಶ್ಯಗಳಾದ ನದಿ, ಕೊಳ್ಳ, ಕಾಡು ಮೇಡು ಮನಸ್ಸಿಗೆ ಆಹ್ಲಾದಕರ ಅನುಭವನ್ನು ನೀಡುತ್ತವೆ.

ಸೈಕ್ಲಿಂಗ್‌ ಎನ್ನುವುದು ಪರಿಸರಸ್ನೇಹಿ. ಸೈಕ್ಲಿಂಗ್‌ನಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದು. ಹೊಗೆ ಸಮಸ್ಯೆ, ಶಬ್ದ ಮಾಲಿನ್ಯದ ಹಂಗಿಲ್ಲ. ಕಿಸೆಗೆ ಹೊರೆಯಲ್ಲ. ಪುಟ್ಟಮಕ್ಕಳಿಗೆ ಶಾಲೆಗೆ ಹೋಗಲು, ಆ ಮೂಲಕ ರಸ್ತೆ ಸಂಚಾರದ ಕನಿಷ್ಠ ನಿಯಮ ಅರಿತುಕೊಳ್ಳುವುದಕ್ಕೆ ಸೈಕಲ್‌ ಸಹಕಾರಿ.

ಏರುತಗ್ಗುಗಳಿಲ್ಲದ ಹಾದಿಯಾದರೆ ಗೇರ್‌ಲೆಸ್‌ ಸೈಕಲ್‌ನಲ್ಲೂ 8-10 ಕಿ.ಮೀ. ಗಳಷ್ಟು ಪೆಡಲ್‌ ತುಳಿದೇ ಕೆಲಸಕ್ಕೆ ಹೋಗಬಹುದು. ಇದರಿಂದ ನಗರಗಳ ಲ್ಲಿನ ಸಂಚಾರ ದಟ್ಟಣೆಯನ್ನು ತಪ್ಪಿಸ ಬಹುದು. ಕರಾವಳಿಯಂತಹ ಏರುತಗ್ಗಿನ ಪ್ರದೇಶದಲ್ಲಿ ಗೇರ್‌ ಲೆಸ್‌ ಸೈಕಲ್‌ ತುಸು ಕಷ್ಟ. ಇಂತಹ ಪ್ರದೇಶಗಳಲ್ಲಿ ಗೇರ್‌ ಸೈಕಲ್‌ ಪ್ರಯೋಜನಕಾರಿ.

ಇತ್ತೀಚೆಗಿನ ದಿನಗಳಲ್ಲಿ ಸೈಕಲ್‌ಗ‌ಳಲ್ಲೂ ಹಲವು ವಿಧ ಮತ್ತು ಮಾದರಿಗಳು ಲಭ್ಯ. ಚಿಕ್ಕಮಕ್ಕಳಿಂದ ತೊಡಗಿ ಹಿರಿಯ ನಾಗರಿಕರ ವರೆಗೂ ಅಗತ್ಯಕ್ಕೆ ತಕ್ಕಂತಹ ಸೈಕಲ್‌ಗ‌ಳಿವೆ. ಸೈಕಲ್‌ನ್ನು ಖರೀದಿಸುವವರು ತಮ್ಮ ಉದ್ದೇಶ ಏನು? ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಫಿಟ್‌ನೆಸ್‌ಗಾದರೆ ಅಗಲ ಟಯರ್‌ಗಳ ಎಂಟಿಬಿ ಅಥವಾ ಮೌಂಟೇನ್‌ ಟೆರೇನ್‌ ಬೈಕ್‌ ಉತ್ತಮ, ಇದರಲ್ಲಿ ಕೆಟ್ಟುಹೋದ ರಸ್ತೆಯಲ್ಲೂ ಸಂಚರಿಸಬಹುದು. ಇದರಲ್ಲೇ ಟಯರಿನ ಅಗಲ ಕಡಿಮೆ ಮಾಡಿರುವ ಹೈಬ್ರಿಡ್‌ಗಳು ಇಂದಿನ ನಗರ ಕೇಂದ್ರಿತ ಫಿಟ್‌ನೆಸ್‌ ಪ್ರಿಯರಿಗೆ ಹೆಚ್ಚು ಪ್ರಿಯ, ಇವುಗಳ ವೇಗವೂ ಹೆಚ್ಚು. ಇನ್ನು ಕ್ರೀಡಾ ಉಪಯೋಗಕ್ಕೆ ಬಾಗಿದ ಹ್ಯಾಂಡಲ್‌ನ ರೋಡ್‌ ಬೈಕ್‌ ಉತ್ತಮ.

ಸೈಕ್ಲಿಂಗ್‌ ಅನ್ನು ಫಿಟ್‌ನೆಸ್‌ಗಾಗಿ ಬಳಸುವ ಮುನ್ನ ಈ ಕೆಲವು ಅಂಶ ಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಸೈಕಲನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು. ಈಗಿನ ಗೇರ್‌ಯುತವಾದ ಸೈಕಲ್‌ಗ‌ಳ ವೇಗ ಹೆಚ್ಚಿರುವುದರಿಂದ ಹೆಲ್ಮೆಟ್‌ ಕಡ್ಡಾಯ. ಕತ್ತಲಲ್ಲಿ ಸೈಕಲ್‌ ಸವಾರರನ್ನು ಗುರುತಿಸುವುದು ಕಷ್ಟ, ಹಾಗಾಗಿ ಹಿಂಬದಿಯ ಕೆಂಪು ಬ್ಲಿಂಕರ್‌ ಲೈಟ್‌ಗಳು ಮುಂಭಾಗ ಶಕ್ತಿಶಾಲಿ ರಿಚಾರ್ಜಬಲ್‌ ಹೆಡ್‌ಲೈಟ್‌ ಬಳಸಬಹುದು.

ಆರೋಗ್ಯವಂತ, ಪರಿಸರ ಸ್ನೇಹಿ ಸಮಾಜಕ್ಕೆ ಸೈಕ್ಲಿಂಗ್‌ನ ಕೊಡುಗೆ ಅಪೂರ್ವ. ನಮ್ಮ ಸೈಕ್ಲಿಂಗ್‌ ಹವ್ಯಾಸವನ್ನು ಕೇವಲ ವಿಶ್ವ ಬೈಸಿಕಲ್‌ ದಿನಕ್ಕಷ್ಟೇ ಸೀಮಿತಗೊಳಿಸದೆ ನಿರಂತರ ಸೈಕಲ್‌ ಬಳಸುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯವಂತ ಸಮಾಜ ಹಾಗೂ ಮಾಲಿನ್ಯ ಮುಕ್ತ ಪರಿಸರಕ್ಕೆ ನಮ್ಮದೂ ಅಳಿಲ ಸೇವೆ ಸಲ್ಲಿಸಿದ ಸಾರ್ಥಕತೆ ನಮ್ಮದಾಗಬಹುದು.

ಪ್ರಯೋಜನಗಳು ಹಲವು
ಬೈಸಿಕಲ್‌ ಬಳಕೆ ಜನರ ಆರೋಗ್ಯದ ಮೇಲೆ ಹಲವಾರು ಉತ್ತಮ ಪರಿಣಾಮಗಳನ್ನು ಬೀರುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ನಿರಂತರವಾಗಿ ಸೈಕ್ಲಿಂಗ್‌ ಮಾಡುವುದರಿಂದ ಹೃದಯ ಬಲಗೊಳ್ಳುವುದು, ಸ್ನಾಯುಗಳ ಶಕ್ತಿವರ್ಧನೆ, ಸಂದುಗಳ ನಮ್ಯತೆ ಹೆಚ್ಚುವುದು, ಮೂಳೆ ಬಲಗೊಳ್ಳುವುದು, ಪಚನ ಕ್ರಿಯೆ ಉತ್ತಮಗೊಳ್ಳುವುದು, ಮಾನಸಿಕ ಒತ್ತಡ ಕಡಿಮೆಯಾಗಿ ಆತ್ಮ ಸಂತೋಷ ಹೀಗೆ ಹತ್ತು ಹಲವು ಆರೋಗ್ಯ ಸಂಬಂಧಿ ಪ್ರಯೋಜನಗಳಿವೆ.

– ಡಾ| ರಂಗನಾಥ ಉಡುಪ, ಸುರತ್ಕಲ್‌

ಟಾಪ್ ನ್ಯೂಸ್

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

Rahul Gandhi ಭೇಟಿ ಯಾವುದೇ ಪರಿಣಾಮ ಬೀರದು: ಬಿಎಸ್‌ವೈ

Rahul Gandhi ಭೇಟಿ ಯಾವುದೇ ಪರಿಣಾಮ ಬೀರದು: ಬಿಎಸ್‌ವೈ

MOdi (3)

Varanasi; ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ದಿನಾಂಕ ನಿಗದಿ

jairam ramesh

By-election ಮೂಲಕವೂ ಪ್ರಿಯಾಂಕಾ ಸಂಸತ್‌ ಪ್ರವೇಶ: ಜೈರಾಮ್‌ ರಮೇಶ್‌

ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ: ಜಿಲ್ಲಾಧಿಕಾರಿ

ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ: ಜಿಲ್ಲಾಧಿಕಾರಿ

Manjeshwar ಹಟ್ಟಿ ಬೆಂಕಿಗಾಹುತಿ: ಹಸುಗಳು ಪಾರು

Manjeshwar ಹಟ್ಟಿ ಬೆಂಕಿಗಾಹುತಿ: ಹಸುಗಳು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

hemanth-soren

E.D. ಬಂಧನ ಪ್ರಶ್ನಿಸಿದ್ದ ಸೊರೇನ್‌ ಅರ್ಜಿ ತಿರಸ್ಕಾರ

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

Rahul Gandhi ಭೇಟಿ ಯಾವುದೇ ಪರಿಣಾಮ ಬೀರದು: ಬಿಎಸ್‌ವೈ

Rahul Gandhi ಭೇಟಿ ಯಾವುದೇ ಪರಿಣಾಮ ಬೀರದು: ಬಿಎಸ್‌ವೈ

MOdi (3)

Varanasi; ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ ದಿನಾಂಕ ನಿಗದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.