ಚಂದ್ರನಲ್ಲಿ ನೀರಿನ ಗುರುತು ಪತ್ತೆ ಹಚ್ಚಿದ ಚೀನದ ವಿಜ್ಞಾನಿಗಳು !
Team Udayavani, Jun 19, 2022, 7:05 AM IST
ಬೀಜಿಂಗ್: ಚೀನದ ವಿಜ್ಞಾನಿಗಳು ಚಂದ್ರನಲ್ಲಿ ನೀರಿರುವ ಗುರುತನ್ನು ಪತ್ತೆ ಹಚ್ಚಿದ್ದಾರೆ. ಚೀನದ “ಓಶನ್ ಆಫ್ ಸ್ಟಾಮ್ಸ್’ ಮಿಷನ್ನಲ್ಲಿ ಚಂದ್ರನಿಂದ ಭೂಮಿಗೆ ಲಾವಾ ತರಲಾಗಿದೆ. ಅದರಲ್ಲಿ ನೀರಿನ ಅಂಶ ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ.
ಹೈಡ್ರಾಕ್ಸಿಲ್ ರೂಪದಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನೀರಿನಲ್ಲಿ ಎರಡು ಹೈಡ್ರೋಜನ್ ಪರಮಾಣುವಿನೊಂದಿಗೆ ಒಂದು ಆಮ್ಲಜನಕದ ಪರಮಾಣು ಇರುತ್ತದೆ.
ಅದೇ ರೀತಿಯಲ್ಲಿ ಹೈಡ್ರಾಕ್ಸಿಲ್ನಲ್ಲಿ ಒಂದು ಹೈಡ್ರೋಜನ್ ಪರಮಾಣುವಿನೊಂದಿಗೆ ಒಂದು ಆಮ್ಲಜನಕದ ಪರಮಾಣು ಇರುತ್ತದೆ.
ಈ ಹಿಂದೆ ಅಮೆರಿಕದ ನಾಸಾ ಕೂಡ ಚಂದ್ರನಿಂದ ತಂದ ಲಾವಾದಲ್ಲಿ ಹೈಡ್ರಾಕ್ಸಿಲ್ ಪತ್ತೆಯಾಗಿರುವುದಾಗಿ ವರದಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ