ನಾಲಗೆಗೆ ಕಹಿ ಆರೋಗ್ಯಕ್ಕೆ ಸಿಹಿ ಹಾಗಲಕಾಯಿ: ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ

ಖನಿಜಾಂಶ , ವಿಟಮಿನ್‌ ಮತ್ತು ಆ್ಯಂಟಿಆಕ್ಸಿಡೆಂಟ್‌ ಅಪಾರ ಪ್ರಮಾಣದಲ್ಲಿ ಲಭ್ಯವಿದೆ.

Team Udayavani, Jul 23, 2022, 10:52 AM IST

ನಾಲಗೆಗೆ ಕಹಿ ಆರೋಗ್ಯಕ್ಕೆ ಸಿಹಿ ಹಾಗಲಕಾಯಿ: ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ

ಹಾಗಲಕಾಯಿ ಈ ತರಕಾರಿಯ ಹೆಸರು ಕೇಳಿದರೆ ಸಾಕು. ಇಷ್ಟಪಡುವವರಿಗಿಂತ ಮುಖ ತಿರುಗಿಸುವವರೇ ಹೆಚ್ಚು .ಅದಕ್ಕೆ ಕಾರಣವೂ ಇದೆ. ಈ ತರಕಾರಿಯಲ್ಲಿನ ಕಹಿ ಅಂಶ. ಆದರೆ ಸತ್ಯದ ಸಂಗತಿಯೆಂದರೆ ಇದು ನಾಲಿಗೆಗೆ ಕಹಿಯಾಗಿರಬಹುದು ಆದರೆ ಉದರಕ್ಕಲ್ಲ, ಅಂದರೆ ಆರೋಗ್ಯಕ್ಕಲ್ಲ ! ಈ ತರಕಾರಿಯಲ್ಲಿರುವ ಫೈಟೋಕೆಮಿಕಲ್‌ ಕಂಪೌಂಡ್‌ ಎನ್ನುವ ಅಂಶ ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತದೆ.

ಆದ ಕಾರಣವೇ ಹಲವು ರೋಗ ರುಜಿನಗಳಿಗೆ ಮದ್ದಾಗಿ ಬಳಸಲಾಗುತ್ತದೆ ಹಾಗಲಕಾಯಿ. ಕುಕುರ್ಬಿಟಿ ಏಸಿಯಾ ಎನ್ನುವ ಬೊಟಾನಿಕಲ್‌ ಕುಟುಂಬಕ್ಕೆ ಸೇರಿದ ಈ ತರಕಾರಿ ಕಲ್ಲಂಗಡಿ ಹಣ್ಣಿನ ಜಾತಿಗೆ ಸೇರುವಂಥದ್ದು. ಇದರ ವೈಜ್ಞಾನಿಕ ಹೆಸರು ಮೊಮರ್ಡಿಕಾ ಚರಂಟಿಯ . ಕಲ್ಲಂಗಡಿ ಎಷ್ಟು ಸಿಹಿಯಲ್ಲವೇ, ಅಷ್ಟೇ ಕಹಿ ಈ ಹಾಗಲಕಾಯಿ. ಒಂದೇ ಕುಟುಂಬದವರಾಗಿದ್ದರೂ ತದ್ವಿರುದ್ಧವಾದ ಗುಣ. ಇದರ ಆರೋಗ್ಯಕರ ಗುಣಗಳು ಹಾಗಲಕಾಯಿಯಲ್ಲಿ ಕ್ಯಾಲರಿ ಅಂಶ ಕಡಿಮೆ ಪ್ರಮಾಣದಲ್ಲಿದ್ದು, ನಾರಿನಂಶ , ಖನಿಜಾಂಶ , ವಿಟಮಿನ್‌ ಮತ್ತು ಆ್ಯಂಟಿಆಕ್ಸಿಡೆಂಟ್‌ ಅಪಾರ ಪ್ರಮಾಣದಲ್ಲಿ ಲಭ್ಯವಿದೆ.

ಇದರಲ್ಲಿರುವ ಪೊಲಿಪೆಪ್ಟಿಟೈಡ್‌ ಪಿ ಎನ್ನುವಂತಹ ಫೈಟೋ ನ್ಯೂಟ್ರಿಯಂಟ್‌ ಒಂದು ಪ್ಲ್ರಾಂಟ್‌ ಇನ್ಸುಲಿನ್‌ ಆಗಿದ್ದು ದೇಹದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಪೊಲೇಟ್‌ ಅಂಶ ಹೇರಳವಾಗಿ ದೊರೆಯುತ್ತದೆ. ಇದನ್ನು ಗರ್ಭಿಣಿಯರು ಬಳಸುವುದರಿಂದ ಭ್ರೂಣದಲ್ಲಿ ನ್ಯೂರಲ್‌ ಟ್ಯೂಬ್‌ ದೋಷ ತೋರಿಬರುವ ಸಾಧ್ಯತೆ ಬಹಳ ಕಡಿಮೆ ಎಂದು ಸಂಶೋಧನೆಯಲ್ಲಿ ದೃಢ ಪಟ್ಟಿದೆ . ಆದರೆ ಇದನ್ನೂ ಮನಸ್ಸಿಗೆ ಬಂದಷ್ಟು ತೆಗೆದುಕೊಳ್ಳುವುದಲ್ಲ ಹಾಗೂ ಸೇವಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ. ಪ್ರತಿ 100ಗ್ರಾಂ ನಲ್ಲಿ 84 ಮಿಲಿಗ್ರಾಂ ನಷ್ಟು ವಿಟಮಿನ್‌ ಸಿ ಇದರಲ್ಲಿ ಸಿಗುತ್ತದೆ.

ಆರೋಗ್ಯಕ್ಕೆ ಉಪಯುಕ್ತವಾದ ಕ್ಯಾಲೋಟಿನ್‌, ಲುಟೀನ್‌ ಮತ್ತು ಝಿಯ-ಕ್ಷಂತಿನ್‌ ಜೊತೆಗೆ ವಿಟಮಿನ್‌ ಎ ಯನ್ನೂ ಇದು ಒದಗಿಸುತ್ತದೆ. ಹಾಗಲಕಾಯಿಯನ್ನು ದಿನನಿತ್ಯದ ಆಹಾರಕ್ರಮದಲ್ಲಿ ಬಳಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಸ್ಥಿತಿಯಲ್ಲಿರುವುದಲ್ಲದೇ, ಮಲಬದ್ದತೆ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಹೊಟ್ಟೆಯಲ್ಲಿ ಹುಳಗಳ ಸಂಖ್ಯೆ ಜಾಸ್ತಿಯಾದಾಗ ಗುದದ್ವಾರದಲ್ಲಿ ನೋವಿರುತ್ತದೆ.

ಇಂಥ ಸಂದರ್ಭದಲ್ಲಿ ಹಾಗಲಕಾಯಿಯ ಎಲೆಗಳನ್ನು ಸ್ವಲ್ಪ ಹಸಿಮೆಣಸಿನೊಂದಿಗೆ ಅರೆದು ಬೆಟ್ಟದ ನೆಲ್ಲಿಕಾಯಿಯಷ್ಟು ಉಂಡೆ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿರುವ ಹುಳುಗಳೆಲ್ಲ ಸಾಯುತ್ತವೆ. ಇತ್ತೀಚೆಗೆ ನಡೆದ ಇದರ ಬಗೆಗಿನ ಪ್ರಾಥಮಿಕ ಸಂಶೋಧನೆಯಲ್ಲಿ ಇದರಲ್ಲಿರುವ ಪೈಟೋ ಕೆಮಿಕಲ್‌ ಕಂಪೌಂಡ್‌ ಎನ್ನವ ಅಂಶ ಎಚ್‌. ಐ. ವಿ. ಕಾಯಿಲೆಗೂ ಮದ್ದಾಗುತ್ತದೆ ಎಂದು ತಿಳಿದು ಬಂದಿದೆ. ಹಾಗಲಕಾಯಿ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಗೊಂಡು ತುರಿಕೆಯಂಥ ತೊಂದರೆ ನಿವಾರಣೆಯಾಗುತ್ತದೆ.

ಇದರಲ್ಲಿರುವ ಕಿಣ್ವಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದರಿಂದ, ಕ್ಯಾನ್ಸರ್‌ ಸೆಲ್‌ ಗಳ ಬೆಳವಣಿಗೆಯನ್ನು ತಡೆಯಬಲ್ಲದು. ಕಾಲರಾ ಆರಂಭದ ಹಂತದಲ್ಲಿದ್ದರೆ, ಹಾಗಲಕಾಯಿ ಎಲೆಯ ರಸವನ್ನು (ಎರಡು ಚಮಚ) ಎರಡು ಚಮಚ ಬಿಳಿ ಈರುಳ್ಳಿ ರಸ ಹಾಗೂ ಒಂದು ಚಮಚ ನಿಂಬೆ ರಸದೊಂದಿಗೆ ಸೇವಿಸುವ ಪದ್ಧತಿ ಇದೆ. ನಿತ್ಯವೂ ಹಾಗಲಕಾಯಿ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಲಿದೆ. ಕಣ್ಣಿನ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳಿಗೂ ಇದು ಔಷಧವಾಗಬಲ್ಲದು. ಇದಲ್ಲದೇ, ಇನ್ನೂ ಹತ್ತು ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ. ಅದರ ಎಲೆಯಿಂದ ಹಿಡಿದು ಕಾಯಿಯವರೆಗೂ ಬಳಕೆಗೆ ಬರುವಂಥದ್ದು.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.