ಭಾರತೀಯ ವನಿತಾ ಕ್ರಿಕೆಟಿಗರಿಗೆ ಕೋವಿಡ್ ಸೋಂಕು ದೃಢ
Team Udayavani, Jul 26, 2022, 11:43 PM IST
ಬರ್ಮಿಂಗ್ಹ್ಯಾಮ್: ಭಾರತೀಯ ವನಿತಾ ಕ್ರಿಕೆಟ್ ತಂಡದ ಇನ್ನೋರ್ವ ಸದಸ್ಯೆಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಅವರು ಭಾರತದಲ್ಲಿ ಉಳಿದುಕೊಂಡಿದ್ದಾರೆ.
ಈ ಮೊದಲು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ವನಿತಾ ತಂಡದ ಸದಸ್ಯರೊಬ್ಬರಿಗೆ ಕೋವಿಡ್ ದೃಢಪಟ್ಟಿದೆ ಎಂದು ತಿಳಿಸಿದ್ದರು.
ಇದರಿಂದ ಇಬ್ಬರು ಸದಸ್ಯೆಯರನ್ನು ಬಿಟ್ಟು ಉಳಿದ ಆಟಗಾರ್ತಿಯರು ಬರ್ಮಿಂಗ್ಹ್ಯಾಮ್ಗೆ ತೆರಳಿದ್ದಾರೆ. ಭಾರತೀಯ ವನಿತಾ ತಂಡ ಶುಕ್ರವಾರ ಕಾಮನ್ವೆಲ್ತ್ ಗೇಮ್ಸ್ನ ಕ್ರಿಕೆಟ್ ಸ್ಪರ್ಧೆಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.