ದೇಶದ ಉತ್ಪಾದನಾ ಕ್ಷೇತ್ರ 8 ತಿಂಗಳಿಗೆ ಹೋಲಿಕೆ ಮಾಡಿದರೆ ಅತ್ಯುತ್ತಮ ಸಾಧನೆ
Team Udayavani, Aug 1, 2022, 8:39 PM IST
ನವದೆಹಲಿ: ದೇಶದ ಉತ್ಪಾದನಾ ಕ್ಷೇತ್ರ ಕಳೆದ ತಿಂಗಳು ಅತ್ಯಂತ ಗರಿಷ್ಠ ಸಾಧನೆ ಮಾಡಿದೆ. ಅದು ಹಿಂದಿನ ಎಂಟು ತಿಂಗಳಿಗೆ ಹೋಲಿಕೆ ಮಾಡಿದರೆ ಅತ್ಯುತ್ತಮ ಸಾಧನೆ ಎಂದು ಸ್ಟಾಂಡರ್ಡ್ ಆ್ಯಂಡ್ ಪೂರ್ (ಎಸ್ ಆ್ಯಂಡ್ಪಿ) ಗ್ಲೋಬಲ್ ಇಂಡಿಯಾ ಮಾನ್ಯುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ನಲ್ಲಿ ಅಭಿಪ್ರಾಯಪಡಲಾಗಿದೆ.
ಉತ್ಪಾದಕ ಕ್ಷೇತ್ರದಲ್ಲಿನ ಸೂಚ್ಯಂಕ ಜೂನ್ನಲ್ಲಿ 53.9 ಇದ್ದದ್ದು ಜುಲೈನಲ್ಲಿ 56.4ಕ್ಕೆ ಏರಿಕೆಯಾಗಿತ್ತು. ಆರೋಗ್ಯ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಸುಧಾರಣೆ ಕಂಡಿರುವ ಹಿನ್ನೆಲೆಯಲ್ಲಿ ಈ ಏರಿಕೆಯಾಗಿದೆ. ಇದರ ಹೊರತಾಗಿಯೂ ಉದ್ಯೋಗ ಸೃಷ್ಟಿಯ ವಿಚಾರಕ್ಕೆ ಸಂಬಂಧಿಸಿದಂತೆ ನಿರೀಕ್ಷಿತ ಚೇತರಿಕೆ ಕಂಡುಬಂದಿಲ್ಲ.