ಉಡುಪಿ-ಮಣಿಪಾಲ: ಬೀದಿ ದೀಪ ಸಮಸ್ಯೆಗಿಲ್ಲ ಮುಕ್ತಿ


Team Udayavani, Aug 4, 2022, 4:20 PM IST

11

ಉಡುಪಿ: ಆರೋಗ್ಯ, ಶಿಕ್ಷಣ ಸಂಸ್ಥೆ, ಕೈಗಾರಿಕೆ ಮೂಲಕ ಜಾಗತಿಕ ಗಮನ ಸೆಳೆದಿರುವ ಮಣಿಪಾಲ-ಉಡುಪಿ ನಗರದ ಹೃದಯ ಭಾಗದಲ್ಲಿನ ಪ್ರಮುಖ ರಸ್ತೆಯ ಬೀದಿದೀಪಗಳು ಕೆಟ್ಟುಹೋಗಿ ವರ್ಷಗಳೇ ಕಳೆದರೂ ಸರಿಪಡಿಸುವ ಕಾರ್ಯ ಆಗಿಲ್ಲ.

ಟೆಂಡರ್‌ ಹಂತ, ಸರಕಾರದ ಅನು ಮೋದನೆಗೆ ಸಾಕಷ್ಟು ವಿಳಂಬವಾಗು ತ್ತಿರುವುದರಿಂದ ಸಾರ್ವಜನಿಕರಿಗೆ ಕತ್ತಲೆ ಭಾಗ್ಯ ಸಿಕ್ಕಂತಾಗಿದೆ.

ನಗರದ ಹೆದ್ದಾರಿ ಮತ್ತು ಜಂಕ್ಷನ್‌ ಒಳಭಾಗದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆಯಿಲ್ಲದೆ ಸಂಜೆ ವೇಳೆ ಮಕ್ಕಳು, ಮಹಿಳೆಯರು ಆತಂಕದಿಂದ ಓಡಾಡಬೇಕಾದ ಪರಿಸ್ಥಿತಿ ಇದೆ. ಎಂಜೆಸಿ, ಮಾಧವ ಕೃಪಾ ಶಾಲೆಯ ಜಂಕ್ಷನ್‌, ಮಣಿಪಾಲ-ಅಲೆವೂರು ರಸ್ತೆ, ಇಂಡಸ್ಟ್ರಿಯಲ್‌ ಪ್ರದೇಶದ ಕಡೆಗೆ ಸಾಗುವ ರಸ್ತೆಯಲ್ಲಿ ಕೆಲವೆಡೆ ಬೀದಿದೀಪ ಬೆಳಗುತ್ತಿಲ್ಲ. ಅಂಚೆ ಕಚೇರಿ ಸಮೀಪ ಒಂದು ಬೀದಿದೀಪವೂ ಪ್ರಕಾಶಮಾನವಾಗಿ ಬೆಳಕು ನೀಡುತ್ತಿಲ್ಲ ನಾಗರಿಕರು ದೂರಿದ್ದಾರೆ.

ಮಣಿಪಾಲ ಬಸ್‌ ನಿಲ್ದಾಣ, ಲಕ್ಷ್ಮೀಂದ್ರ ನಗರ, ಇಂದ್ರಾಳಿ, ಎಂಜಿಎಂ, ಕುಂಜಿಬೆಟ್ಟು ಬಸ್‌ ನಿಲ್ದಾಣಗಳಿದ್ದು, ಸಂಜೆ 7ರ ಬಳಿಕ ಇಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಬಸ್‌ಗೆ ಕಾಯಲು ತೊಂದರೆಯಾಗುತ್ತಿದೆ. ಅಂಬಾಗಿಲು- ಜಂಕ್ಷನ್‌ನಿಂದ ಪೆರಂಪಳ್ಳಿ-ಮಣಿಪಾಲ ಕಾಯಿನ್‌ ಸರ್ಕಲ್‌ವರೆಗೂ ಬೀದಿದೀಪದ ವ್ಯವಸ್ಥೆ ಇಲ್ಲದೆ ರಾತ್ರಿ 7ರ ಅನಂತರ ಕತ್ತಲೆಯಲ್ಲಿ ಸಾರ್ವಜನಿಕರು ಆತಂಕ ದಿಂದ ಓಡಾಡಬೇಕಿದೆ. ರಾತ್ರಿ ಪಾಳಿ ಕೆಲಸಕ್ಕೆ ಹೋಗಿಬರುವ ಮಹಿಳೆಯರು, ಯುವತಿಯರು, ಕೋಚಿಂಗ್‌ ತೆರಳುವ ವಿದ್ಯಾರ್ಥಿಗಳಿಗೆ ಅಭದ್ರತೆ ವಾತಾವರಣವಿದೆ. ಪಾದಚಾರಿ ಮತ್ತು ವಾಹನ ಸವಾರರಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಲು ಕಟ್ಟಡ ಮತ್ತು ವಾಹನಗಳ ಬೆಳಕೇ ಆಶ್ರಯವಾಗಿದೆ.

690 ಬೀದಿ ದೀಪ ಕಂಬಗಳು ಅಳವಡಿಕೆ

ಹಂತಹಂತವಾಗಿ ನಗರದ ಬೀದಿ ದೀಪ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಇದೀಗ ನಗರದ ಮುಖ್ಯರಸ್ಥೆಗಳಲ್ಲಿ ಒಟ್ಟು 18 ಕಿ. ಮೀ. ಬೀದಿ ದೀಪ ಯೋಜನೆ ಟೆಂಡರ್‌ ಹಂತದಲ್ಲಿದೆ. ಒಟ್ಟು 690 ದೀಪ ವ್ಯವಸ್ಥೆ ಕಂಬಗಳನ್ನು ಅಳವಡಿಸಲಾಗುತ್ತದೆ. ಅಂಬಾಗಿಲು-ಪೆರಂಪಳ್ಳಿ ರಸ್ತೆ, ಮಣಿಪಾಲ ಜೂನಿಯರ್‌ ಕಾಲೇಜು- ಇಂಡಸ್ಟ್ರಿಯಲ್‌ ಏರಿಯ, ಪರ್ಕಳ-ಮಲ್ಪೆಯವರೆಗೆ ದೀಪಗಳನ್ನು ಅಳವಡಿಸಲಾಗುವುದು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ, ಜಿಲ್ಲಾಧಿಕಾರಿಗಳು ಅನುಮೋದನೆಗೆ ಬಾಕಿ ಇದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರ ವ್ಯವಸ್ಥೆ: ಕೆಲವು ತಾಂತ್ರಿಕ ಕಾರಣಗಳಿಂದ ಟೆಂಡರ್‌ ಮೂರು ಸಲ ರದ್ದು ಆಗಿರುವ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆಯಲ್ಲಿ ಸಮಸ್ಯೆಯಾಗಿತ್ತು. ಇದೀಗ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ನಗರದ ಮುಖ್ಯರಸ್ತೆಗಳಲ್ಲಿ ಬೀದಿ ದೀಪದ ವ್ಯವಸ್ಥೆ ಶೀಘ್ರದಲ್ಲೆ ಆಗಲಿದೆ. – ಸುಮಿತ್ರಾ ಎಸ್‌. ನಾಯಕ್‌, ಅಧ್ಯಕ್ಷೆ, ಉಡುಪಿ ನಗರಸಭೆ

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.