ತ್ರಿವಳಿ ತಲಾಖ್ ಮತ್ತು ತಲಾಖ್-ಎ-ಹಸನ್ ಒಂದೇ ಅಲ್ಲ: ಸುಪ್ರೀಂ ಕೋರ್ಟ್
ಎಲ್ಲ ಪದ್ಧತಿಗಳನ್ನೂ ಅಸಾಂವಿಧಾನಿಕವೆಂದು ಘೋಷಿಸಬೇಕೆಂಬ ಅರ್ಜಿ ವಿಚಾರಣೆ
Team Udayavani, Aug 16, 2022, 7:23 PM IST
ನವದೆಹಲಿ: ಮುಸ್ಲಿಮರಲ್ಲಿ ಜಾರಿಯಲ್ಲಿರುವ “ತಲಾಖ್-ಎ-ಹಸನ್’ ಪದ್ಧತಿ ಹಾಗೂ ಏಕಕಾಲಕ್ಕೆ 3 ಬಾರಿ ತಲಾಖ್ ಹೇಳುವ ತ್ರಿವಳಿ ತಲಾಖ್ ಪದ್ಧತಿ ಒಂದೇ ಅಲ್ಲ. ಅಲ್ಲದೇ, ಇಲ್ಲಿ ಮಹಿಳೆಯರಿಗೂ “ಖುಲಾ” ಪದ್ಧತಿಯಡಿ ವಿಚ್ಛೇದನ ಪಡೆಯಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತ್ರಿವಳಿ ತಲಾಖ್ನಂತೆಯೇ ತಲಾಖ್-ಎ-ಹಸನ್ ಹಾಗೂ ಇತರೆ ಎಲ್ಲ ಏಕಪಕ್ಷೀಯ ವಿಚ್ಛೇದನ ಪದ್ಧತಿಯನ್ನು ಅಸಿಂಧು ಹಾಗೂ ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾ. ಎಸ್.ಕೆ.ಕೌಲ್ ಮತ್ತು ನ್ಯಾ.ಎಂ.ಎಂ.ಸುಂದರೇಶ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಲಾಖ್-ಎ-ಹಸನ್ ಮತ್ತು ತ್ರಿವಳಿ ತಲಾಖ್ ಎರಡೂ ಭಿನ್ನವಾದದ್ದು. ಅಲ್ಲದೇ, ಇಲ್ಲಿ ಪತ್ನಿಗೂ ಸ್ವಇಚ್ಛೆಯಿಂದ ಪತಿಗೆ ವಿಚ್ಛೇದನ ನೀಡುವ(ಖುಲಾ) ಅವಕಾಶ ನೀಡಲಾಗಿದೆ. ಪತಿ ಮತ್ತು ಪತ್ನಿ ಒಟ್ಟಿಗೆ ಜೀವಿಸಲು ಸಾಧ್ಯವಿಲ್ಲ ಎಂದಾದರೆ, ಸಂವಿಧಾನದ 142ನೇ ವಿಧಿಯ ಅನ್ವಯ ನ್ಯಾಯಾಲಯವೇ ವಿಚ್ಛೇದನಕ್ಕೆ ಅವಕಾಶ ನೀಡಬಹುದು ಎಂದು ನ್ಯಾಯಪೀಠ ಹೇಳಿದ್ದು, ಮುಂದಿನ ವಿಚಾರಣೆ ಆ.29ರಂದು ನಡೆಯಲಿದೆ.
ಪತಿಯು ಪ್ರತಿ ತಿಂಗಳಿಗೆ ಒಂದು ಬಾರಿಯಂತೆ ಮೂರು ತಿಂಗಳ ಅವಧಿಯಲ್ಲಿ 3 ಬಾರಿ “ತಲಾಖ್’ ಎಂದು ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡುವ ಪದ್ಧತಿಯನ್ನು ತಲಾಖ್-ಎ-ಹಸನ್ ಪದ್ಧತಿ ಎನ್ನುತ್ತಾರೆ. ತ್ರಿವಳಿ ತಲಾಖ್ ಎಂದರೆ ಏಕಕಾಲಕ್ಕೆ “ತಲಾಖ್, ತಲಾಖ್, ತಲಾಖ್’ ಎಂದು ಹೇಳಿ ವಿಚ್ಛೇದನ ನೀಡುವುದು. ಇದೇ ವೇಳೆ, ಇಸ್ಲಾಂನಲ್ಲಿರುವ “ಖುಲಾ’ ಪದ್ಧತಿ ಎಂದರೆ, ತನ್ನ ಪತಿಯ ಒಪ್ಪಿಗೆಯನ್ನು ಪಡೆಯದೆಯೇ ಪತ್ನಿಯು ನೇರವಾಗಿ ಶರಿಯಾ ಮಂಡಳಿಯನ್ನು ಸಂಪರ್ಕಿಸಿ, ಪತಿಗೆ ವಿಚ್ಛೇದನ ನೀಡುವುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್