ವಿಸಿಟರ್ ವೀಸಾ ವಿಳಂಬ
Team Udayavani, Aug 19, 2022, 8:12 AM IST
ಹೊಸದಿಲ್ಲಿ: ಅಮೆರಿಕಕ್ಕೆ ಪ್ರವಾಸ ಹೋಗಲಿದೆಯೇ? ಹಾಗಿದ್ದರೆ 2024ರ ಮಾರ್ಚ್ ನಲ್ಲಷ್ಟೇ ವೀಸಾಕ್ಕೆ ಅಪಾಯಿಂಟ್ಮೆಂಟ್ ಸಿಗಲಿದೆ. ಕೆನಡಾ, ಬ್ರಿಟನ್ ಮತ್ತು ಇತರ ಐರೋಪ್ಯ ದೇಶಗಳಿಗೆ ವಿಸಿಟರ್ ವೀಸಾ ಮೂಲಕ ಹೋಗಬೇಕಿದ್ದರೂ ವೀಸಾಕ್ಕಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಸಚಿವಾಲಯವು ರಾಯಭಾರ ಕಚೇರಿ, ದೂತಾವಾಸ ಕಚೇರಿಗಳಲ್ಲಿ ಇದ್ದ ಹೆಚ್ಚುವರಿ ಸಿಬಂದಿಯನ್ನು ವಾಪಸ್ ಕರೆಸಿಕೊಂಡಿತ್ತು. ಸದ್ಯ ಪ್ರಯಾಣಕ್ಕೆ ಇರುವ ನಿರ್ಬಂಧಗಳನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಅಮೆರಿಕ, ಬ್ರಿಟನ್, ಕೆನಡಾಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.
ಅಮೆರಿಕದ ವಿದೇಶಾಂಗ ಇಲಾಖೆಯ ವೆಬ್ಸೈಟ್ನಲ್ಲಿ ಉಲ್ಲೇಖೀಸಿರುವಂತೆ 2024ರ ಮಾರ್ಚ್ -ಎಪ್ರಿಲ್ ವೇಳೆಗಷ್ಟೇ ವಿಸಿಟರ್ ವೀಸಾ ಪಡೆಯಲು ಅಪಾಯಿಂಟ್ಮೆಂಟ್ ಸಿಗಬಹುದು. ಕೆಲವು ವಿಧದ ವೀಸಾಗಳಿಗೆ ಶೀಘ್ರವೇ ಅನುಮತಿ ನೀಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ತೊಂದರೆಗೆ ವಿಷಾದಿಸುತ್ತೇನೆ ಎಂದು ಬ್ರಿಟನ್ ಹೈಕಮಿಷನರ್ ಅಲೆಕ್ಸ್ ಎಲ್ಲಿ ಕೂಡ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್