ಪ್ರಾಜೆಕ್ಟ್ ಚೀತಾ… ಹುಲಿ ಮುಖದ ವಿಮಾನದ ಅಸಲಿ ಹಿನ್ನೆಲೆಯೇನು?

ಚೀತಾ ಬದಲು ಹುಲಿಮುಖದ ಚಿತ್ರ ಬಿಡಿಸಿದ್ದೇಕೆ…

Team Udayavani, Sep 20, 2022, 4:45 PM IST

7-cheeta

ಚೀತಾ ಭಾರತದಲ್ಲಿ ಸಂಪೂರ್ಣವಾಗಿ ನಾಶಗೊಂಡಿರುವ ಏಕೈಕ ದೊಡ್ಡ ಮಾಂಸಹಾರಿ ಪ್ರಾಣಿ. ಮಾನವ – ವನ್ಯ ಜೀವಿಗಳ ಸಂಘರ್ಷ, ಬೇಟೆ, ಆವಾಸಸ್ಥಾನದ ನಾಶದಿಂದಾಗಿ ಈ ಸಂತತಿ ದೇಶದಿಂದ ಮರೆಯಾಗಿತ್ತು. ಭಾರತ ಸರ್ಕಾರವು ದೇಶದಲ್ಲಿ ಚೀತಾ ಸಂತತಿ ಸಂಪೂರ್ಣವಾಗಿ ನಾಶವಾಗಿದೆ ಎಂದು 1952ರಲ್ಲಿ ಅಧಿಕೃತವಾಗಿ ಘೋಷಣೆ ಮಾಡಿತ್ತು.

ಭಾರತದ ನೆಲದಿಂದ ಕಣ್ಮರೆಯಾಗಿದ್ದ ಚೀತಾಗಳು ಸುಮಾರು 70 ವರ್ಷಗಳ ಬಳಿಕ ಭಾರತದಲ್ಲಿ ಚೀತಾಗಳು ಹೆಜ್ಜೆಯಿಟ್ಟಿವೆ. ಮಧ್ಯ ಪ್ರದೇಶದ ಕುನೋ ಅರಣ್ಯ ಪ್ರದೇಶದಲ್ಲಿ ಈ ಚೀತಾಗಳ ಸಾಮ್ರಾಜ್ಯ ಆರಂಭವಾಗಿದೆ. ಸೆ. 17 ನೈಜೀರಿಯಾದಿಂದ ಎಂಟು ಚೀತಾಗಳನ್ನು ವಿಶೇಷ ವಿಮಾನ ಮೂಲಕ ತಂದು, ಕುನೋ ಅರಣ್ಯದಲ್ಲಿ ಬಿಡಲಾಗಿದೆ.

ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಸ್ಥಳಾಂತರ ಮಾಡಿದ ವಿಧಾನವನ್ನು ಕೊಂಡಾಡಿದ್ದಾರೆ. ಹಲವು ಮಾಧ್ಯಮಗಳು ಈ ಯೋಜನೆಗಾಗಿ ಬಳಸಿದ ವಿಶೇಷ ವಿಮಾನವೆಂದು ಹುಲಿಯ ಮುಖದ ಚಿತ್ರ ಬಿಡಿಸಿರುವ ವಿಮಾನದ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಈ ಯೋಜನೆಗಾಗಿ ಭಾರತೀಯ ವಿಮಾನಕ್ಕೆ ಚಿರತೆಯ ಚಿತ್ರವನ್ನು ಬಿಡಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಚಿರತೆಗಳನ್ನು ಭಾರತಕ್ಕೆ ಸ್ಥಳಾಂತರಿಸಲು ಬಳಸಲಾಗುತ್ತಿರುವ ವಿಮಾನದ ಮೂಗಿನ ಮೇಲಿನ ಚಿತ್ರದಲ್ಲಿ ಕಾಣುವುದು ಹುಲಿ ಹೊರತು ಚಿರತೆಯಲ್ಲ. ವಿಮಾನವು ಭಾರತೀಯ ಒಡೆತನ ಹೊಂದಿಲ್ಲ ಮತ್ತು ಈ ಸಂದರ್ಭಕ್ಕಾಗಿ ವಿಶೇಷವಾಗಿ ಬಣ್ಣ ಬಳಿಯಲಾಗಿಲ್ಲ ಎಂದು newschecker.in ಸತ್ಯ ಪರಿಶೋಧನೆ ವೇಳೆ ಕಂಡು ಬಂದಿದೆ.

ಚಿರತೆ ತರಲು ಹುಲಿಯ ಚಿತ್ರವನ್ನು ಏಕೆ ಚಿತ್ರಿಸಿದ್ದಾರೆ ಎಂಬ ಅನುಮಾನವು ಈ ಚಿತ್ರದ ಹಿಂದಿರುವ ಸತ್ಯಾಂಶವನ್ನು ಬಹಿರಂಗಪಡಿಸಿದೆ. ಅಲ್ಲದೇ ಈ ವಿಮಾನದ ಚಿತ್ರವು 2015 ರಲ್ಲೇ ಸೈಬೀರಿಯನ್ ಟೈಮ್ಸ್ , ದಿ ಡೈಲಿ ಮೇಲ್ ಮೊದಲಾದ ಮಾಧ್ಯಮಗಳು 2015 ರಲ್ಲಿ ಮಾಡಿರುವ ವರದಿಯಲ್ಲಿ ಈಗ ವೈರಲ್ ಆಗುತ್ತಿರುವ ( ಹುಲಿ ಮೂತಿಯ ) ವಿಮಾನದ ಚಿತ್ರವು ಕಂಡುಬಂದಿದೆ.

ರಷ್ಯಾದ ವಾಹಕ ಟ್ರಾನ್ಸರೋ ಜೂನ್ 2015 ರಲ್ಲಿ ತನ್ನ ದೀರ್ಘ ಪ್ರಯಾಣದ ಬೋಯಿಂಗ್ 747-400 ವಿಮಾನಗಳಲ್ಲಿ ಹುಲಿ ಮುಖವನ್ನು ಒಳಗೊಂಡ ವಿಶಿಷ್ಟ ವಿನ್ಯಾಸವನ್ನು ಅನಾವರಣಗೊಳಿಸಿದೆ ಎಂದು ವರದಿ ಹೇಳಿದೆ. ಅಮುರ್ ಟೈಗರ್ ಕೇಂದ್ರದ ಸಂರಕ್ಷಣಾ ಕಾರ್ಯವನ್ನು ಉತ್ತೇಜಿಸಲು ಇದನ್ನು ವಿನ್ಯಾಸಗೊಳಿಸಲಾಗಿದ್ದು, ಕೇರಿಂಗ್ ದಿ ಟೈಗರ್ಸ್ ಟುಗೆದರ್‌ಗಾಗಿ ಜೂನ್ 2015 ರಲ್ಲಿ ವಿಮಾನವನ್ನು ವಿಶೇಷ ಬಣ್ಣಗಳಿಂದ ಚಿತ್ರಿಸಲಾಗಿದೆ ಎಂದು ಟೆರಾ ಏವಿಯಾ ವೆಬ್‌ಸೈಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗಾಗಿ , ಈ ವಿಮಾನವನ್ನು ಚೀತಾಗಳನ್ನು ಕರೆತರಲು ಭಾರತ ಸರ್ಕಾರ ತಯಾರಿಸಿಲ್ಲವೆಂದು ಸಾಬೀತಾಗಿದೆ ಎಂದು newschecker.in ನಡೆಸಿದ ಸತ್ಯ ಪರಿಶೋಧನೆಯಲ್ಲಿ ತಿಳಿದುಬಂದಿದೆ.

ಟಾಪ್ ನ್ಯೂಸ್

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

1-wewqewewq

H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

1-qwweqwewq

Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್‌ ದಾಖಲು

Priyanka Gandhi Slams PM Modi in Banaskantha Rally

ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ

Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ

Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

Why Modi doesn’t talk about ladies now: Priyanka Gandhi

Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.