ಬಿಹಾರ, ಬುದ್ಧ ಪಹಾಡ್ ಈಗ ಸಂಪೂರ್ಣ ನಕ್ಸಲ್ ಮುಕ್ತ!
Team Udayavani, Sep 21, 2022, 7:43 AM IST
ಹೊಸದಿಲ್ಲಿ: ಸಿಆರ್ಪಿಎಫ್ ಮತ್ತು ಭಾರತ ಸರಕಾರವು ಮಾವೋವಾದಿಗಳ ವಿರುದ್ಧ ದೊಡ್ಡ ಮಟ್ಟಿನ ಗೆಲುವು ಸಾಧಿಸಿದೆ. ಬಿಹಾರವು ಈಗ ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಿದ್ದರೆ, ಝಾರ್ಖಂಡ್ನ ಬುದ್ಧ ಪಹಾಡ್ ಪ್ರದೇಶವು ಬರೋಬ್ಬರಿ 30 ವರ್ಷಗಳ ಬಳಿಕ ಮಾವೋವಾದಿಗಳಿಂದ ಮುಕ್ತಿ ಪಡೆದಿದೆ.
ಸಿಆರ್ಪಿಎಫ್ ಪ್ರಧಾನ ನಿರ್ದೇಶಕ ಕುಲದೀಪ್ ಸಿಂಗ್ ಬುಧವಾರ ಈ ಮಾಹಿತಿ ನೀಡಿದ್ದಾರೆ. ನಕ್ಸಲ್ ಬಾಹುಳ್ಯದ ಪ್ರದೇಶವಾಗಿದ್ದ ಬುದ್ಧ ಪಹಾಡ್ನಲ್ಲಿ ಇತ್ತೀಚೆಗೆ ಮೂರು ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ಈಗ ಈ ವಲಯವು ನಕ್ಸಲ್ ಮುಕ್ತವಾಗಿದೆ. ಜತೆಗೆ, ಎಂಐ-17 ಹೆಲಿಕಾಪ್ಟರ್ ಕೂಡ ಸುರಕ್ಷಿತವಾಗಿ ಇಲ್ಲಿ ಲ್ಯಾಂಡ್ ಆಗಿದೆ. ಒಂದು ಶಾಶ್ವತ ಶಿಬಿರವನ್ನೂ ನಾವು ಸ್ಥಾಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಬಿಹಾರ ಕೂಡ ನಕ್ಸಲರ ಕಾಟದಿಂದ ಬಿಡುಗಡೆ ಹೊಂದಿದೆ. ಇಡೀ ರಾಜ್ಯದಲ್ಲಿ ಯಾವ ಪ್ರದೇಶವೂ ನಕ್ಸಲರ ವಶದಲ್ಲಿಲ್ಲ. ನಮ್ಮ ಪಡೆಗಳು ಯಾವಾಗ ಬೇಕಿದ್ದರೂ ಯಾವ ಪ್ರದೇಶಕ್ಕಾದರೂ ಸರಾಗವಾಗಿ ಸಾಗಬಹುದಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ