ನ್ಯಾಶನಲ್ ಗೇಮ್ಸ್ ಲಾಂಗ್ಜಂಪ್: ಶ್ರೀಶಂಕರ್ಗೆ ಸೋಲು
Team Udayavani, Oct 1, 2022, 11:15 PM IST
ಗಾಂಧಿನಗರ್: ನ್ಯಾಶನಲ್ ಗೇಮ್ಸ್ ಲಾಂಗ್ಜಂಪ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ವಿಜೇತ ಮುರಳಿ ಶ್ರೀಶಂಕರ್ ಸೋಲನುಭವಿಸಿದ್ದಾರೆ.
ಚಿನ್ನದ ನಿರೀಕ್ಷೆಯಲ್ಲಿದ್ದ ಅವರು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಚಿನ್ನವನ್ನು ತಮಿಳುನಾಡಿನ ಜೆಸ್ವಿನ್ ಅಲ್ಡಿ†ನ್ ಗೆದ್ದರು.
ಅಲ್ಡಿನ್ 8.26 ಮೀ. ದೂರಕ್ಕೆ ನೆಗೆದರು. 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಅವರಿಂದ ಈ ಸಾಧನೆ ದಾಖಲಾಯಿತು. ಇದರೊಂದಿಗೆ ವಿಶ್ವ ಚಾಂಪಿಯನ್ಶಿಪ್ ಅರ್ಹತೆಯಲ್ಲೂ ತೇರ್ಗಡೆಯಾದರು (8.25 ಮೀ.). ಇದರ ಜತೆಗೆ ಎರಡು ಸಲ 8 ಮೀ. ದೂರಕ್ಕೆ ನೆಗೆದರು (8.07 ಮೀ. ಹಾಗೂ 8.21 ಮೀ.).
8.36 ಮೀಟರ್ಗಳ ರಾಷ್ಟ್ರೀಯ ದಾಖಲೆ ಹೊಂದಿರುವ ಮುರಳಿ ಶ್ರೀಶಂಕರ್ ಅವರ ಇಲ್ಲಿನ ಗರಿಷ್ಠ ನೆಗೆತ 7.93 ಮೀ. ಆಗಿತ್ತು. ಇದು ಮೊದಲ ನೆಗೆತದಲ್ಲಿ ದಾಖಲಾಯಿತು. ಕೇರಳದ ಮುಹಮ್ಮದ್ ಅನೀಸ್ ಯಾಹಿಯಾ ಕಂಚು ಗೆದ್ದರು (7.92 ಮೀ.).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ