ಬಿಗ್‌ ಬಾಸ್‌: ಒಂದೊಂದು ಎಪಿಸೋಡ್‌ ಗೆ ಲಕ್ಷ-ಕೋಟಿ ರೂ. ಕೇಳಿದ ನಿರೂಪಕರಿವರು.!


Team Udayavani, Oct 2, 2022, 7:09 PM IST

ಬಿಗ್‌ ಬಾಸ್‌: ಒಂದೊಂದು ಎಪಿಸೋಡ್‌ ಗೆ ಲಕ್ಷ- ಕೋಟಿ ರೂ. ಕೇಳಿದ ನಿರೂಪಕರಿವರು.!

ಮುಂಬಯಿ: ಹಿಂದಿಯ ಜನಪ್ರಿಯ ಟಿವಿ ಶೋಗಳಲ್ಲಿ ಒಂದಾಗಿರುವ ”ಬಿಗ್‌ ಬಾಸ್‌” ನ 16ನೇ ಸೀಸನ್  ಸದ್ಯ ಆರಂಭವಾಗಿದೆ. ಕಾರ್ಯಕ್ರಮವನ್ನು ಸಲ್ಮಾನ್‌ ಖಾನ್‌ ನಿರೂಪಿಸುತ್ತಿದ್ದು, ಅದರದ್ದೇ ಆದ ವೀಕ್ಷಕರಿದ್ದಾರೆ.

ಕಾರ್ಯಕ್ರಮದ ಮುಖ್ಯ ಆಕರ್ಷಣೆ ನಿರೂಪಕ ಸಲ್ಮಾನ್‌ ಖಾನ್‌. ವಾರದಲ್ಲಿ ಎರಡು ದಿನ ವೇದಿಕೆಗೆ ಬಂದು ಇಡೀ ವಾರದ ಆಗುಹೋಗುಗಳನ್ನು ಸ್ಪರ್ಧಿಗಳೊಂದಿಗೆ ಚರ್ಚಿಸುವ ಸಲ್ಮಾನ್‌ ಖಾನ್‌ ಒಂದು ಎಪಿಸೋಡ್‌ ನಿರೂಪಣೆ ಮಾಡಲು ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಇತ್ತೀಚಿಗೆ ಚರ್ಚೆ ನಡೆದಿತ್ತು. ಅವರು 1000 ಕೋಟಿ ರೂ. ಪಡೆದುಕೊಳ್ಳುತ್ತಾರೆ ಎನ್ನುವ ಸುದ್ದಿಯನ್ನು ಸ್ವತಃ ಸಲ್ಮಾನ್‌ ಅವರೇ ಕೇಳಿ, ಅದು ಸುಳ್ಳೆಂದು ಹೇಳಿದ್ದರು.

ಹಾಗಾದರೆ ಹಿಂದಿ ಬಿಗ್‌ ಬಾಸ್ ನಲ್ಲಿ ಇದುವರೆಗೆ ಯಾರೆಲ್ಲಾ ನಿರೂಪಕರಿದ್ದರು, ಅವರು ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವುದರ ಒಂದು ವರದಿ ಇಲ್ಲಿದೆ.

ಅರ್ಷದ್ ವರ್ಸಿ: ಹಿಂದಿ ಬಿಗ್‌ ಬಾಸ್‌ ಆರಂಭಿಕ ಸೀಸನ್‌ ನಲ್ಲಿ ನಿರೂಪಕರಾಗಿ ಅರ್ಷದ್ ವರ್ಸಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ  ಅವರು ಕಾರ್ಯಕ್ರಮದ ಒಂದು ಎಪಿಸೋಡ್‌ ಗೆ 20 ಲಕ್ಷ ರೂ. ಸಂಭಾವನೆ ಪಡೆದುಕೊಂಡಿದ್ದರು.

ಶಿಲ್ಪಾ ಶೆಟ್ಟಿ: ನಟಿ ಶಿಲ್ಪಾ ಶೆಟ್ಟಿ ಬಿಗ್‌ ಬಾಸ್‌ ಕಾರ್ಯಕ್ರಮದ 2ನೇ ಸೀಸನ್‌ ನ್ನು ನಡೆಸಿಕೊಟ್ಟಿದ್ದರು, ಒಂದೊಂದು ಎಪಿಸೋಡ್‌ ಗೆ ಅವರು ತಲಾ 15 ಲಕ್ಷ ರೂ. ಸಂಭಾವನೆಯನ್ನು ಪಡೆದಿದ್ದರು.

ಅಮಿತಾಭ್‌ ಬಚ್ಚನ್:‌ ನಿಮಗೆ ಗೊತ್ತಾ? ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರು ಬಿಗ್‌ ಬಾಸ್‌ 3ನೇ ಸೀಸನ್‌ ನ್ನು ನಡೆಸಿಕೊಟ್ಟಿದ್ದರು. ನಿರೂಪಕರಾಗಿ ಅವರು ಆ ಸೀಸನ್‌ ನಲ್ಲಿ 126 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದರು.

ಸಲ್ಮಾನ್‌ ಖಾನ್:‌ ನಟ ಸಲ್ಮಾನ್‌ ಖಾನ್‌ ಇದೇ ಮೊದಲ ಬಾರಿ ಬಿಗ್‌ ಬಾಸ್‌ ನಡೆಸಿಕೊಡುತ್ತಿಲ್ಲ. ಈ ಹಿಂದೆ ಬಿಗ್‌ ಬಾಸ್‌ ನ ಸೀಸನ್‌ 4, 5, 6, 7 ನ್ನು ಅವರು ನಡೆಸಿಕೊಟ್ಟಿದ್ದಾರೆ. ಆ ಸೀಸನ್‌ ಗಳಲ್ಲಿ ತಲಾ ಒಂದು ಎಪಿಸೋಡ್‌ ಗೆ ಅವರು 2.5 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದರು. ಇದಾದ ಬಳಿಕ ಸೀಸನ್‌ 8,9 ರ ಒಂದೊಂದು ಎಪಿಸೋಡ್‌ 8 ಕೋಟಿ ಪಡೆಯುತ್ತಿದ್ದರು. ಬಿಗ್‌ ಬಾಸ್‌ ನ 11 ನೇ ಸೀಸನ್‌ ನ ಎಪಿಸೋಡ್‌ ಒಂದಕ್ಕೆ 12 ಕೋಟಿ ಪಡೆಯುತ್ತಿದ್ದರು. 13,14 ಹಾಗೂ 15ನೇ ಸೀಸನ್‌ ಗೆ 12 ಕೋಟಿ ಪಡೆಯುತ್ತಿದ್ದರು ಎಂದು ಪಿಂಕ್‌ ವಿಲ್ಲಾ ವರದಿ ತಿಳಿಸಿದೆ.

ಸಂಜಯ್‌ ದತ್:‌  ಸಂಜಯ್‌ ದತ್‌ ಅವರು ಕೂಡ ಸಲ್ಮಾನ್‌ ಖಾನ್‌ ಅವರೊಂದಿಗೆ ಬಿಗ್‌ ಬಾಸ್ ನ 5ನೇ ಸೀಸನ್‌ ನ್ನು ನಡೆಸಿಕೊಟ್ಟಿದ್ದರು. ಅವರು ಒಂದು ಎಪಿಸೋಡ್‌ ಗೆ 1 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದರು.

ಫರಾ ಖಾನ್: ಬಿಗ್‌ ಬಾಸ್‌ ನ ಹಲ್ಲ ಬೋಲ್‌ ಸೀಸನ್‌ ನ್ನು ನಡೆಸಿಕೊಟ್ಟ ನಿರ್ದೇಶಕಿ ಫರಾ ಖಾನ್‌ ಒಂದು ಎಪಿಸೋಡ್ ಗೆ 10 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು.

16 ನೇ ಸೀಸನ್‌ ಗೆ ಸಲ್ಮಾನ್‌ ಖಾನ್‌ ಎಷ್ಟು ಸಂಭಾವನೆ ಪಡೆದುಕೊಳ್ಳಲ್ಲಿದ್ದಾರೆ ಎನ್ನುವುದು ಇದುವರೆಗೆ ಅಧಿಕೃತವಾಗಿ ತಿಳಿದು ಬಂದಿಲ್ಲ.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.