ಅರ್ಥ ವ್ಯವಸ್ಥೆ ಬೆಳವಣಿಗೆ ಇಳಿಕೆ : ವಿಶ್ವಬ್ಯಾಂಕ್
Team Udayavani, Oct 7, 2022, 6:50 AM IST
ವಾಷಿಂಗ್ಟನ್: ಪ್ರಸಕ್ತ ವಿತ್ತೀಯ ವರ್ಷಕ್ಕಾಗಿ ದೇಶದ ಅರ್ಥ ವ್ಯವಸ್ಥೆ ಶೇ.6.5ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ವಿಶ್ವಬ್ಯಾಂಕ್ ಗುರುವಾರ ಹೇಳಿದೆ.
ಆದರೆ, ಜಗತ್ತಿನ ಇತರ ರಾಷ್ಟ್ರಗಳ ಅರ್ಥ ವ್ಯವಸ್ಥೆಗಳಿಗೆ ಹೋಲಿಕೆ ಮಾಡಿದರೆ, ಕೊರೊನಾ ಅನಂತರದಲ್ಲಿ ಭಾರತದ ಅರ್ಥ ವ್ಯವಸ್ಥೆ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೇಳಿದೆ. ಜಗತ್ತಿನ ಒಟ್ಟಾರೆ ವಾತಾವರಣ ಕೈಮೀರಿ ಹೋಗುತ್ತಿರುವುದರಿಂದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಹೀಗಾಗಿ, ಜೂನ್ನಲ್ಲಿ ಇದ್ದ ಶೇ.6.6ಕ್ಕಿಂತ ಶೇ.1ರಷ್ಟು ಬೆಳವಣಿಗೆ ನಿರೀಕ್ಷೆಯನ್ನು ಕಡಿಮೆಗೊಳಿಸುತ್ತಿರುವುದಾಗಿ ಅದು ಪ್ರತಿಪಾದಿಸಿದೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಭಾರತದ ಸ್ಥಿತಿ ಅತ್ಯುತ್ತಮವೇ ಆಗಿದೆ. ಆದರೆ ಜಗತ್ತಿನಲ್ಲಿ ಉಂಟಾಗುತ್ತಿರುವ ತಲ್ಲಣಗಳಿಂದಾಗಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.6.5ರ ದರದಲ್ಲಿ ಅರ್ಥ ವ್ಯವಸ್ಥೆ ಬೆಳವಣಿಗೆ ಕಾಣಲಿದೆ ಎಂದು ದಕ್ಷಿಣ ಏಷ್ಯಾಕ್ಕಾಗಿನ ವಿಶ್ವಬ್ಯಾಂಕ್ನ ಹಣಕಾಸು ತಜ್ಞ ಹ್ಯಾನ್ಸ್ ಟಿಮ್ಮರ್ ಹೇಳಿದ್ದಾರೆ.