ಟಿ 20 ರ್ಯಾಂಕಿಂಗ್ ; 5 ಅಂಕ ಏರಿಕೆ ಸಾಧಿಸಿದ ವಿರಾಟ್ ಕೊಹ್ಲಿ
Team Udayavani, Oct 26, 2022, 4:20 PM IST
ನವದೆಹಲಿ :ಟಿ 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ಥಾನ ವಿರುದ್ಧ ಅಮೋಘ ಆಟವಾಡಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಏರಿಕೆ ಕಂಡಿದ್ದು,ಐಸಿಸಿ ಟಿ 20 ರ್ಯಾಂಕಿಂಗ್ ನಲ್ಲಿ 9 ನೇ ಸ್ಥಾನಕ್ಕೆ ಬಂದಿದ್ದಾರೆ.
5 ಸ್ಥಾನ ಪ್ರಗತಿ ಸಾಧಿಸಿರುವ ಕೊಹ್ಲಿ 9 ನೇ ಸ್ಥಾನ ಪಡೆದಿದ್ದು, ಭಾರತ ತಂಡದ ಇನ್ನೊಬ್ಬ ಸ್ಟಾರ್ ಆಟಗಾರ ಸೂರ್ಯ ಕುಮಾರ್ ಯಾದವ್ 3 ನೇ ಸ್ಥಾನದಲ್ಲಿದ್ದು, ನಾಯಕ ರೋಹಿತ್ ಶರ್ಮ 16 ನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ಥಾನದ ವಿಕೆಟ್ಕೀಪರ್-ಬ್ಯಾಟ್ಸ್ ಮ್ಯಾನ್ ಮೊಹಮ್ಮದ್ ರಿಜ್ವಾನ್ (849 ರೇಟಿಂಗ್ ಪಾಯಿಂಟ್) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ, ನ್ಯೂಜಿಲ್ಯಾಂಡ್ ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ (831) ಎರಡನೇ ಸ್ಥಾನದಲ್ಲಿದ್ದಾರೆ. ಕಾನ್ವೆ 58 ಎಸೆತಗಳಲ್ಲಿ ಅಜೇಯ 92 ರನ್ ಗಳಿಸಿ ನ್ಯೂಜಿಲ್ಯಾಂಡ್ ತನ್ನ ವಿಶ್ವ ಕಪ್ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು 89 ರನ್ಗಳಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬೌಲಿಂಗ್ ನಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ 10 ನೇ ಸ್ಥಾನ ದಲ್ಲಿದ್ದಾರೆ.ಸ್ಪಿನ್ನರ್ ಆರ್. ಅಶ್ವಿನ್ 21ನೇ ಸ್ಥಾನ ದಲ್ಲಿದ್ದಾರೆ. ಆಲ್ ರೌಂಡರ್ ಗಳ ಸಾಲಿನಲ್ಲಿ ಹಾರ್ದಿಕ್ ಪಾಂಡ್ಯ 3 ನೇ ಸ್ಥಾನದಲ್ಲಿದ್ದಾರೆ.