ಶೌಚಕ್ಕೆ ಬಂದ ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದ ವಿದ್ಯಾರ್ಥಿ

ಶೌಚಾಲಯದೊಳಗೆ ಅಡಗಿ ಕೃತ್ಯ ಎಸಗಿದ ವಿದ್ಯಾರ್ಥಿ, 1200ಕ್ಕೂ ಹೆಚ್ಚು ವಿಡಿಯೋ

Team Udayavani, Nov 23, 2022, 12:49 PM IST

tdy-5

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮಹಿಳಾ ಶೌಚಾಲಯಕ್ಕೆ ಒಳನುಗ್ಗಿ ರಹಸ್ಯವಾಗಿ ವಿದ್ಯಾರ್ಥಿನಿಯರ ಖಾಸಗಿ ದೃಶ್ಯ ಚಿತ್ರೀಕರಿಸುತ್ತಿದ್ದ ಯುವಕ ಕೊನೆಗೂ ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನ ಮೊಬೈಲ್‌ ಪರಿಶೀಲಿಸಿದಾಗ 1,200ಕ್ಕೂ ಹೆಚ್ಚು ಯುವತಿಯರ ಖಾಸಗಿ ದೃಶ್ಯವಿರುವ ಫೋಟೋ, ವಿಡಿಯೋ ಪತ್ತೆಯಾಗಿದೆ.

ದ್ವಾರಕಾನಗರದ ನಿವಾಸಿ ಉತ್ತರ ಭಾರತ ಮೂಲದ ಶುಭಂ ಆಜಾದ್‌(21) ಬಂಧಿತ. ಹೊಸಕೆರೆಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ 5ನೇ ಸೆಮಿಸ್ಟರ್‌ ಬಿಬಿಎ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ.

ಆರೋಪಿಯು ಕಾಲೇಜಿನ ಒಂದು ಮಹಿಳಾ ಶೌಚಾಲಯದಲ್ಲಿ ಅವಿತುಕೊಳ್ಳುತ್ತಿದ್ದ. ಶೌಚಕ್ಕಾಗಿ ವಿದ್ಯಾರ್ಥಿನಿಯರು ಬರುವ ವೇಳೆ ತಾನು ಅವಿತು ಕುಳಿತ ಪಕ್ಕದ ಶೌಚಾಲಯದ ಮೇಲೆ ಹತ್ತಿ ವಿದ್ಯಾರ್ಥಿನಿಯರ ಗಮನಕ್ಕೆ ಬಾರದಂತೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ. ನ.13ರಂದು ಸಂಜೆ ಇಬ್ಬರು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದ ವೇಳೆ 2 ಶೌಚಾಲಯಗಳೂ ಒಳಗಿನಿಂದ ಲಾಕ್‌ ಆಗಿದ್ದವು. ಹೀಗಾಗಿ ಇವರು ಕಾಯುತ್ತಿದ್ದಾಗ, ಆರೋಪಿಯು ಶೌಚಗೃಹದ ಮೇಲಿಂದ ಮೊಬೈಲ್‌ನಲ್ಲಿ ರಹಸ್ಯವಾಗಿ ವಿಡಿಯೋ ಸೆರೆಹಿಡಿಯುವುದನ್ನು ಗಮನಿಸಿ ಹೌಹಾರಿದ್ದರು.

ಇದನ್ನು ಕಂಡ ಆರೋಪಿಯು ಆತಂಕದಿಂದ ಶೌಚಾಲಯದ ಒಳಗೆ ಕುಳಿತುಕೊಂಡು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಬ್ಬರು ಯುವತಿಯರೂ ಜೋರಾಗಿ ಬಾಗಿಲು ಬಡಿದಾಗ ಬೇರೆ ದಾರಿ ಕಾಣದೇ ಬಾಗಿಲು ತೆಗೆದು ಹೊರಗೆ ಓಡಿ ಹೋಗಿದ್ದ. ವಿದ್ಯಾರ್ಥಿನಿಯರು ಮೇಲಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯು ಮಹಿಳಾ ಶೌಚಾಲಯದ ಬಳಿ ಇರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಯ ಭಾವ ಚಿತ್ರ ಕಂಡು ಬಂದಿತ್ತು. ಈ ಭಾವಚಿತ್ರವನ್ನು ಕೂಡಲೇ ಕಾಲೇಜಿನ ಎಲ್ಲ ವಿಭಾಗಕ್ಕೂ ಕಳುಹಿಸಿ ಗುರುತಿಸುವಂತೆ ತಿಳಿಸಿದಾಗ ಬಿಬಿಎ ವಿಭಾಗದ ಮುಖ್ಯಸ್ಥರು ಆರೋಪಿ ಶುಭಂ ಆಜಾದ್‌ನ ವಿವರವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧಿಕಾರಿಗಳಿಗೆ ನೀಡಿದ್ದರು. ಕೂಡಲೇ ಶುಭಂನನ್ನು ಕರೆದು ವಿಚಾರಣೆ ಮಾಡಿದಾಗ ಆತ ಸತ್ಯ ಬಾಯ್ಬಿಟ್ಟಿ ದ್ದಾನೆ. ವಿದ್ಯಾರ್ಥಿನಿಯರು ಶೌಚಾಲಯ ದೊಳಗೆ ಬಂದು ಬಟ್ಟೆ ತೆಗೆಯುವ ಸಂದರ್ಭದಲ್ಲಿ ವಿಡಿಯೋ ಮಾಡಿಕೊಂಡಿರುತ್ತೇನೆ. ಇದೇ ರೀತಿ 1,200 ವಿಡಿಯೋಗಳು ನನ್ನ ಮೊಬೈಲ್‌ ನಲ್ಲಿವೆ ಎಂದು ಹೇಳಿದ್ದ.

ನಂತರ ಕ್ಷಮಾಪಣಾ ಪತ್ರ ಬರೆದು ಕೊಟ್ಟಿದ್ದ. ಆತನಿಗೆ ‌ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಆರೋಪಿಯು ನ.18 ರಂದು ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದಾಗ ಕಾಲೇಜಿನ ಉಪನ್ಯಾಸ ಕರು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀ ಗ ಆರೋಪಿಯನ್ನು ಬಂಧಿಸಿ. ಆತನ ಮೊಬೈಲ್‌ ಜಪ್ತಿ ಮಾಡಿ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ.

ಟಾಪ್ ನ್ಯೂಸ್

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.