ಮೊದಲ ಟೆಸ್ಟ್ ರೋಚಕ ಹಂತಕ್ಕೆ; ಇಂಗ್ಲೆಂಡ್ ವಿರುದ್ದ ಗೆಲುವಿನ ನಿರೀಕ್ಷೆಯಲ್ಲಿ ಪಾಕ್
Team Udayavani, Dec 5, 2022, 6:20 AM IST
ರಾವಲ್ಪಿಂಡಿ: ಪ್ರವಾಸಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ರೋಚಕ ಹಂತ ತಲುಪಿದೆ. ಈ ಟೆಸ್ಟ್ನಲ್ಲಿ ಪಾಕಿಸ್ತಾನ ಗೆಲುವಿಗೆ 343 ರನ್ ತೆಗೆಯುವ ಸವಾಲನ್ನು ಇಂಗ್ಲೆಂಡ್ ನೀಡುವ ಧೈರ್ಯ ಮಾಡಿದೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದು 80 ರನ್ ಗಳಿಸಿದೆ. ಅಂತಿಮ ದಿನವಾದ ಸೋಮವಾರ ಇನ್ನುಳಿದ 90 ಓವರ್ಗಳಲ್ಲಿ ಗೆಲ್ಲಲು ಪಾಕಿಸ್ತಾನ 263 ರನ್ ಗಳಿಸಬೇಕಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಇಮಾಮ್ ಉಲ್ ಹಕ್ 43 ರನ್ನುಗಳಿಂದ ಆಡುತ್ತಿದ್ದಾರೆ.
ದಿನದಾಟ ಅಂತ್ಯಗೊಳ್ಳಲು ಎರಡು ಓವರ್ ಇರುವಾಗ ಜೀವದಾನ ಪಡೆದ ಸೌದ್ ಶಕೀಲ್ 24 ರನ್ನುಗಳಿಂದ ಆಡುತ್ತಿದ್ದಾರೆ. ವಿಕೆಟ್ನ ಹತ್ತಿರ ಕೀಟನ್ ಜೆನ್ನಿಂಗ್ಸ್ ಎರಡು ಕೈಯಲ್ಲಿ ಹಿಡಿಯಬಹುದಾದ ಕ್ಯಾಚನ್ನು ಕೈಚೆಲ್ಲಿದ್ದರು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 657 ಮತ್ತು ದ್ವಿತೀಯ ಇನ್ನಿಂಗ್ಸ್ 264ಕ್ಕೆ 7 ಡಿಕ್ಲೇರ್
ಪಾಕಿಸ್ತಾನ 579 ಮತ್ತು 2 ವಿಕೆಟಿಗೆ 80.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು