ಮುಂದಿನ ವರ್ಷ ಮಹಾಜನಗಣತಿ? 2021ರಿಂದ ಬಾಕಿ ಆಗಿರುವ ಕಾರ್ಯಕ್ರಮ

Team Udayavani, Dec 7, 2022, 6:57 AM IST

ಮುಂದಿನ ವರ್ಷ ಮಹಾಜನಗಣತಿ? 2021ರಿಂದ ಬಾಕಿ ಆಗಿರುವ ಕಾರ್ಯಕ್ರಮ

ಮಂಗಳೂರು: ಎಲ್ಲವೂ ಅಂದುಕೊಂ ಡಂತೆ ನಡೆದರೆ ಮುಂದಿನ ವರ್ಷ ದೇಶಾದ್ಯಂತ ಜನಗಣತಿ ನಡೆಯಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಟ್ಟದಲ್ಲಿ ಚಿಂತನೆಗಳು ನಡೆಯುತ್ತಿವೆ.

ದೇಶದಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದದ್ದು 2011ರ ಫೆಬ್ರವರಿ- ಮಾರ್ಚ್‌ನಲ್ಲಿ. 10 ವರ್ಷಗಳ ಬಳಿಕ ಅಂದರೆ 2021ರಲ್ಲಿ ಮತ್ತೆ ಗಣತಿ ನಡೆಯಬೇಕಿತ್ತಾದರೂ ಆಗ ಕೋವಿಡ್‌ ಸಾಂಕ್ರಾಮಿಕ ಹಾವಳಿ ಎಬ್ಬಿಸಿದ್ದರಿಂದ ಸಾಧ್ಯ ವಾಗಿರಲಿಲ್ಲ. ಇನ್ನೀಗ 2023ರಲ್ಲಿ ಜನಗಣತಿ ನಡೆಯುವ ಸಾಧ್ಯತೆಯಿದೆ.

ಸರಕಾರ ಜನರಿಗಾಗಿ ರೂಪಿಸುವ ಯಾವುದೇ ಯೋಜನೆಗೆ ಜನಸಂಖ್ಯೆಯ ವಿವರವೇ ಆಧಾರ. ಆದ್ದರಿಂದ ಇದು ನಿಯಮಿತವಾಗಿ ನಡೆಯಲೇಬೇಕು. ಆದರೆ ಸದ್ಯ ಗಣತಿ ನಡೆಯದೆ ಇರುವುದರಿಂದ ವಿವಿಧ ಇಲಾಖೆಗಳಿಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಸದ್ಯ ಈ ಹಿಂದಿನ ಗಣತಿಗಳಿಂದ ಪಡೆದ ಜನಸಂಖ್ಯೆಯ ಬೆಳವಣಿಗೆ ದರದ ಸರಾಸರಿ ಆಧಾರದಲ್ಲಿ ಇಲಾಖೆಗಳಿಗೆ ಅಗತ್ಯವಾದ ಜನಸಂಖ್ಯಾ ಅಂಕಿಅಂಶವನ್ನು ಒದಗಿಸಲಾಗುತ್ತಿದೆ.

ತರಬೇತಿ ನೀಡಲಾಗಿತ್ತು
ಗಣತಿಗೆ ಸಂಬಂಧಿಸಿದಂತೆ 2020ರ ಅಂತ್ಯದ ವೇಳೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿತ್ತು. ಆ್ಯಪ್‌ ಕೂಡ ಸಿದ್ಧವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಮಾಸ್ಟರ್‌ ಟ್ರೈನರ್ ಬೆಂಗಳೂರಿಗೆ ತೆರಳಿ ತರಬೇತಿ ಪಡೆದಿದ್ದರು. 35 ಮಂದಿ ತಹಶೀಲ್ದಾರ್‌ ಗ್ರೇಡ್‌ ಅಧಿಕಾರಿಗಳನ್ನು ಜನಗಣತಿಯಲ್ಲಿ ಚಾರ್ಜ್‌ ಆಫೀಸರ್‌ಗಳಾಗಿ ನಿಯೋಜಿಸಲಾಗಿತ್ತು. 114 ಮಂದಿ ಫೀಲ್ಡ್‌ ಟ್ರೈನರ್ಗಳಿಗೆ ತರಬೇತಿ ನೀಡಿ, ಆ್ಯಪ್‌ನ ಡಾಟಾ ಸಂಗ್ರಹಕ್ಕೆ 64 ಮಂದಿ ಕಂಪ್ಯೂಟರ್‌ ನಿರ್ವಾಹಕರನ್ನೂ ನೇಮಕ ಮಾಡಿ ತರಬೇತಿ ನೀಡಲಾಗಿತ್ತು. ಈ ಎಲ್ಲ ಅಧಿಕಾರಿ, ಸಿಬಂದಿಯನ್ನು ಸದ್ಯಕ್ಕೆ ಕೆಲಸದಿಂದ ಹಿಂಪಡೆಯಲಾಗಿದೆ.

ಅನುದಾನ ಹಂಚಿಕೆ ಮೇಲೆ ಪರಿಣಾಮ
ಜನಗಣತಿ ನಡೆಯದಿರುವುದು ಕೇಂದ್ರದಿಂದ ರಾಜ್ಯಗಳಿಗೆ ಬಿಡುಗಡೆಯಾಗುವ ಅನುದಾನ ಹಂಚಿಕೆ ಮೇಲೆ ಪರಿಣಾಮ ಬೀರುತ್ತದೆ. ಅನುದಾನಗಳು 15ನೇ ಹಣಕಾಸು ಆಯೋಗದ ಶಿಫಾರಸಿನ ಮೇಲೆ ಬಿಡುಗಡೆಯಾತ್ತವೆ. ಈ ಆಯೋಗ 2011ರ ಜನಗಣತಿ ಆಧಾರದಲ್ಲಿ 2017ರಲ್ಲಿ ರಚಿಸಲಾಗಿದ್ದು, 2025 26ರಲ್ಲಿ ಅದರ ಅವಧಿ ಮುಗಿಯುತ್ತದೆ. ಸದ್ಯ ಆಯೋಗದದಲ್ಲಿರುವ ಅಂಕಿ- ಅಂಶ (ಡಾಟಾ) 10 ವರ್ಷ ಹಳೆಯದು.

ಹೊಸ ತಾಲೂಕುಗಳು ರಚನೆ ಯಾಗಿರುವುದರಿಂದ ಗಡಿ ಪ್ರದೇಶ ಗಳಿಗೆ ಸಂಬಂಧಿಸಿದ ಬದಲಾವಣೆಗಳ ಬಗ್ಗೆ
ಡಿ. 31ರೊಳಗೆ ತಿಳಿಸುವಂತೆ ಸರಕಾರದಿಂದ ಸೂಚನೆ ಬಂದಿದೆ. ಆದರೆ ಗಣತಿಯನ್ನು ಯಾವಾಗ, ಹೇಗೆ ಆರಂಭಿಸ ಬೇಕು ಎನ್ನುವ ಕುರಿತು ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ.
-ಸುಷ್ಮಾ ಕೆ.ಎಸ್‌.
-ಸಂಖ್ಯಾ ಸಂಗ್ರಹಣಾಧಿಕಾರಿ (ಪ್ರಭಾರ), ದ.ಕ. ಜಿಲ್ಲೆ

-  ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.