ಸ್ಯಾಂಟ್ರೋ ರವಿ ಪ್ರಕರಣ: ಇನ್ನೂ ಕೆಲವರ ಬಂಧನ ಸಾಧ್ಯತೆ: ಗೃಹ ಸಚಿವ ಆರಗ

Team Udayavani, Jan 14, 2023, 6:55 AM IST

ಸ್ಯಾಂಟ್ರೋ ರವಿ ಪ್ರಕರಣ: ಇನ್ನೂ ಕೆಲವರ ಬಂಧನ ಸಾಧ್ಯತೆ: ಗೃಹ ಸಚಿವ ಆರಗ

ಉಡುಪಿ: ಸ್ಯಾಂಟ್ರೋ ರವಿ ಪ್ರಕರಣದಲ್ಲಿ ರಾಜ್ಯ ಪೊಲೀಸರಿಗೆ ಯಾವುದೇ ನಿರ್ಬಂಧ ಹೇರಿಲ್ಲ. ನಿರಂತರ ಪ್ರಯತ್ನದಿಂದ ರಾಜ್ಯ ಪೊಲೀಸರು ಸ್ಯಾಂಟ್ರೋ ರವಿಯನ್ನು ಶುಕ್ರವಾರ ಗುಜರಾತ್‌ನಲ್ಲಿ ಬಂಧಿಸಿದ್ದಾರೆ.

ಒಂದೆರೆಡು ದಿನಗಳಲ್ಲಿ ರಾಜ್ಯಕ್ಕೆ ಕರೆತರಲಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಉಡುಪಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, 11 ದಿನ ಗಳ ಅನಂತರ ಸ್ಯಾಂಟ್ರೋ ರವಿ ಬಂಧನ ವಾಗಿದೆ. ನಾಲ್ಕೈದು ತಂಡ ರಚಿಸಿ ಮೈಸೂರು, ರಾಮನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಎಲ್ಲ ಪ್ರಕ್ರಿಯೆ ಮುಗಿಸಿಕೊಂಡು ಆತನನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ಈ ವಿಚಾರದಲ್ಲಿ ಸರಕಾರ ಯಾವುದೇ ಮೀನಾ ಮೇಷವೂ ಎಣಿಸಿಲ್ಲ. ಒತ್ತಡಕ್ಕೂ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಎಲ್ಲೇ ಇದ್ದರೂ, ಹೇಗೆ ಇದ್ದರೂ ಕರೆತಂದು ವಿಚಾರಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಆತ ನಡೆಸಿದ ಕೃತ್ಯಕ್ಕೆ ಸರಿಯಾದ ಶಿಕ್ಷೆಯಾಗ ಬೇಕು. 3-4 ಕಡೆ ಅಂತಿಮ ಕ್ಷಣದಲ್ಲಿ ಆತ ತಪ್ಪಿಸಿಕೊಂಡಿದ್ದ. ಎಲ್ಲ ಆಯಾಮದಲ್ಲೂ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಅಧಿಕಾರಿ, ರಾಜಕಾರಣಿ ಇದ್ದರೂ ಕೂಡ ತನಿಖೆಯಿಂದ ಹೊರಗೆಳೆಯುತ್ತೇವೆ ಎಂದು ಸಚಿವರು ಹೇಳಿದರು.

ಆರೋಪದಲ್ಲಿ ಹುರುಳಿಲ್ಲ
ಕಿಮ್ಮನೆ ರತ್ನಾಕರರು ಇ.ಡಿ. ದಾಳಿ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಕಚೇರಿ ಬಹಳ ವರ್ಷಗಳಿಂದ ಶಾರೀಕ್‌ ಕುಟುಂಬದ ಕಟ್ಟಡದಲ್ಲಿತ್ತು. ಶಾರಿಕ್‌ ಹೇಳಿಕೆ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ. ನನ್ನ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಅವರ ಮೇಲೆ ಇ.ಡಿ. ದಾಳಿ ಮಾಡಿಸುವಂತಹ ರಾಜಕೀಯ ದಾರಿದ್ರé ನನಗೆ ಬಂದಿಲ್ಲ ಎಂದರು.

ಕ್ಷೇತ್ರ ಹುಡುಕಾಟವೇ ಮುಗಿದಿಲ್ಲ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ, ಮಾಜಿ ಮುಖ್ಯಮಂತ್ರಿ, ವಿಪಕ್ಷದ ನಾಯಕರಿಗೆ ಕ್ಷೇತ್ರ ಹುಡುವುದೇ ಕೆಲಸ ಆಗಬಾರದು. ಹುಡುಕಾಟ ನಡೆಸುತ್ತಿದ್ದಾರೆ, ಸ್ಪರ್ಧೆ ಮಾಡಲು ಭಯಪಡುತ್ತಿದ್ದಾರೆ. ಶೋಚನೀಯ ಪರಿಸ್ಥಿತಿ ಇದ್ದು ಜನರ ಮೇಲೆ ನಂಬಿಕೆ ಕಳೆದುಕೊಂಡು ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡಾಡುತ್ತಿರುತ್ತಾರೆ. ಅವರು ಹಿಂದೆ ಬೇರೆಯವರನ್ನು ಸೋಲಿಸಿರಬಹುದು. ಹೀಗಾಗಿ ಈಗ ಅವರನ್ನು ಕಾರ್ಯಕರ್ತರು ಸೋಲಿಸುತ್ತಾರೆ ಎನ್ನುವ ಭಯ ಕಾಡುತ್ತಿದೆ ಎಂದು ಹೇಳಿದರು.

ಟಾಪ್ ನ್ಯೂಸ್

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Manipal ಗಾಂಜಾ ಸೇವನೆ: ಇಬ್ಬರು ಪೊಲೀಸ್ ವಶಕ್ಕೆ

Manipal ಗಾಂಜಾ ಸೇವನೆ: ಇಬ್ಬರು ಪೊಲೀಸ್ ವಶಕ್ಕೆ

Missing Case ಶಿರ್ವ: ನಾಲ್ವರು ಮದ್ರಸಾ ವಿದ್ಯಾರ್ಥಿಗಳು ನಾಪತ್ತೆ

Missing Case ಶಿರ್ವ: ನಾಲ್ವರು ಮದ್ರಸಾ ವಿದ್ಯಾರ್ಥಿಗಳು ನಾಪತ್ತೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

god promise kannada movie

Kannada Cinema; ‘ಗಾಡ್‌ ಪ್ರಾಮಿಸ್‌’ ಮುಹೂರ್ತ ಮಾಡಿದ್ರು

Wadgera; A crocodile appeared in the farm

Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.