ಮಂಗಳೂರು ಜುವೆಲರಿ ಸಿಬ್ಬಂದಿ ಹತ್ಯೆ ಕೇಸ್: ದುಷ್ಕರ್ಮಿಯ ಚಿತ್ರ ಬಿಡುಗಡೆ ಮಾಡಿದ ಪೊಲೀಸರು

Team Udayavani, Feb 6, 2023, 12:50 PM IST

ಮಂಗಳೂರು ಜುವೆಲರಿ ಸಿಬ್ಬಂದಿ ಹತ್ಯೆ ಕೇಸ್: ದುಷ್ಕರ್ಮಿಯ ಚಿತ್ರ ಬಿಡುಗಡೆ ಮಾಡಿದ ಪೊಲೀಸರು

ಮಂಗಳೂರು: ನಗರದ ಜುವೆಲರಿ ಅಂಗಡಿಯೊಂದರಲ್ಲಿ ಶುಕ್ರವಾರ ಹಾಡಹಗಲೇ ಸಿಬಂದಿಯನ್ನು ಹತ್ಯೆಗೈದ ಆರೋಪಿಯ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ಪ್ರಕರಣದ ಶಂಕಿತ ಆರೋಪಿಯ ಸಿಸಿ ಕೆಮರಾ ಚಿತ್ರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ಟಿ20 ಮ್ಯಾಚ್; ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಚಚ್ಚಿದ ಇಫ್ತಿಕಾರ್ ಅಹಮದ್; ವಿಡಿಯೋ ನೋಡಿ

ನಗರದ ಹೃದಯ ಭಾಗದಲ್ಲಿ ಹಾಡುಹಗಲೇ ನಡೆದ ಕೊಲೆ ಪ್ರಕರಣದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಪೊಲೀಸರು ಅಕ್ಕಪಕ್ಕದ ಅಂಗಡಿಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಇದರನ್ವಯ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

3 ಸರ ದರೋಡೆ

ಘಟನೆ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 12 ಗ್ರಾಂ ತೂಕದ 60,000 ರೂ. ಮೌಲ್ಯದ 3 ಚಿನ್ನದ ಸರಗಳನ್ನು ದರೋಡೆ ಮಾಡಲಾಗಿದೆ ಎಂದು ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ದುಷ್ಕರ್ಮಿ ಮಾಸ್ಕ್, ಕ್ಯಾಪ್‌ ಮತ್ತು ಜರ್ಕಿನ್‌ ಧರಿಸಿದ್ದ. ಆತ ಕೃತ್ಯ ನಡೆಸುವಾಗಲೂ ಅದನ್ನು ತೆಗೆದಿರಲಿಲ್ಲ. ಅಲ್ಲದೆ ಜುವೆಲರಿ ಅಂಗಡಿಯೊಳಗಿನ ಸಿಸಿ ಕೆಮರಾದ ದೃಶ್ಯ ಸಮರ್ಪಕವಾಗಿ ದೊರೆಯದೆ ಇರುವುದು ಕೂಡ ತನಿಖೆಗೆ ತೊಡಕಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಡ ಕುಟುಂಬದ ಅಮಾಯಕ

ದುಷ್ಕರ್ಮಿಗಳಿಂದ ಹತ್ಯೆಯಾದ ಜುವೆಲರಿ ಅಂಗಡಿಯ ಸಿಬಂದಿ ರಾಘವ ಆಚಾರ್ಯ (55) ಅವರದ್ದು ಬಡ ಕುಟುಂಬ. ಅತ್ತಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹಲವು ವರ್ಷಗಳಿಂದ ವಿವಿಧೆಡೆ ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕಳೆದ 7 ವರ್ಷಗಳಿಂದ ಕೃತ್ಯ ನಡೆದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಘವ ಆಚಾರ್ಯ ಅವರ ಓರ್ವ ಪುತ್ರ ಊರಿನಲ್ಲಿ ಸರಿಯಾದ ಕೆಲಸ ಸಿಗದೆ ಇತ್ತೀಚೆಗಷ್ಟೆ ದುಬಾೖಗೆ ಕೆಲಸ ಹುಡುಕಿಕೊಂಡು ಹೋಗಿದ್ದರು. ಇನ್ನೋರ್ವ ಪುತ್ರ ಕೂಡ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಪುತ್ರಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾಘವ ಅವರ ಪತ್ನಿ ಬೇಕರಿಯಲ್ಲಿ ಕೆಲಸ ಮಾಡುತ್ತಾ ಕುಟುಂಬಕ್ಕೆ ಹೆಗಲು ಕೊಡುತ್ತಿದ್ದಾರೆ. ಇದೀಗ ರಾಘವ ಅವರ ಹತ್ಯೆಯಿಂದ ಕುಟುಂಬ ಕಂಗಾಲಾಗಿದೆ.

ಟಾಪ್ ನ್ಯೂಸ್

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.