ಪಾಕ್ ನ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿ ಮೇಲೆ ಗುಂಡಿನ ದಾಳಿ
Team Udayavani, Feb 25, 2023, 11:01 AM IST
ಕರಾಚಿ: ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿ ಮಾರ್ವಿಯಾ ಮಲ್ಲಿಕ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲು ಯತ್ನಿಸಿದ ಘಟನೆ ನಡೆದಿದೆ.
ಗುರುವಾರ ರಾತ್ರಿ (ಫೆ.23 ರಂದು) ಲಾಹೋರ್ ನ ನಿವಾಸದ ಹೊರಗೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಮಾರ್ವಿಯಾ ಅವರು ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.
ತೃತೀಯ ಲಿಂಗಿ ಸಮುದಾಯದ ವಿರುದ್ಧ ಧ್ವನಿ ಎತ್ತಿದ ಕಾರಣ ಕಳೆದ ಕೆಲ ಸಮಯದಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ದಾಳಿಯ ಬಳಿಕ ಮಾರ್ವಿಯಾ ಪೊಲೀಸರಿಗೆ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವಹಿಂದೂ ಪರಿಷತ್, ಬಜರಂಗದಳವನ್ನು ಉಗ್ರ ಸಂಘಟನೆ ಎಂದು ಘೋಷಿಸಿ; ಮೌಲಾನಾ ರಜಾ ಖಾನ್
ಸುರಕ್ಷತೆಯ ದೃಷ್ಟಿಯಿಂದ ಲಾಹೋರ್ ನಿಂದ ಬೇರೆಡೆ ತೆರಳಿದ್ದ ಮಾರ್ವಿಯಾ ಕಳೆದ ಕೆಲ ದಿನಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಯೊಂದಕ್ಕೆ ಲಾಹೋರ್ ಗೆ ಬಂದಿದ್ದರು. ಅದೇ ವೇಳೆ ಈ ಘಟನೆ ಸಂಭವಿಸಿದೆ.
ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿಯಾಗಿ 2018 ರಲ್ಲಿ ಇತಿಹಾಸ ಬರೆದಿದ್ದರು. ಆ ದಿನದಿಂದ ಮಾರ್ವಿಯಾ ತೃತೀಯ ಲಿಂಗಿಯ ಸಮುದಾಯದ ಬಗ್ಗೆ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಕುಟುಂಬದ ಸಹಾಯವಿಲ್ಲದೆ, ಅಲ್ಲಿ, ಇಲ್ಲಿ ಕೆಲಸ ಮಾಡಿ ಶಿಕ್ಷಣವನ್ನು ಮುಗಿಸಿ ಕಷ್ಟದಿಂದ ಮೇಲೆ ಬಂದ ಮಾರ್ವಿಯಾ ಅವರನ್ನು ಪಾಕಿಸ್ತಾನದ ಸ್ಥಳೀಯ ಸುದ್ದಿ ವಾಹಿನಿ ಕೊಹಿನೂರ್ ಸುದ್ದಿ ವಾಚಕಿಯ ಕೆಲಸಕ್ಕೆ ಆಯ್ಕೆ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ