ಮಾನ್ ಸಿಂಗ್, ಜ್ಯೋತಿಗೆ ಮ್ಯಾರಥಾನ್ ಪ್ರಶಸ್ತಿ
Team Udayavani, Feb 27, 2023, 5:05 AM IST
ಹೊಸದಿಲ್ಲಿ: ರವಿವಾರ ನಡೆದ “ನ್ಯೂ ಡೆಲ್ಲಿ ಮ್ಯಾರಥಾನ್’ನಲ್ಲಿ ಮಾನ್ ಸಿಂಗ್ ಮತ್ತು ಜ್ಯೋತಿ ಗಾವಟೆ ಕ್ರಮವಾಗಿ ಪುರುಷರ ಹಾಗೂ ವನಿತಾ ವಿಭಾಗದ ಚಾಂಪಿ ಯನ್ ಆಗಿ ಮೂಡಿಬಂದಿದ್ದಾರೆ. ಇವರಲ್ಲಿ ಜ್ಯೋತಿ ಅವರದು ಪ್ರಶಸ್ತಿ ಉಳಿಸಿಕೊಂಡ ಸಾಧನೆ. ಕಳೆದ ವರ್ಷದ ಮ್ಯಾರಥಾನ್ನಲ್ಲೂ ಅವರು ಚಾಂಪಿಯನ್ ಆಗಿದ್ದರು.
33 ನವರ್ಷದ ಮಾನ್ ಸಿಂಗ್ 42.195 ಕಿ.ಮೀ. ದೂರ ವನ್ನು 2:14:13 ಸೆಕೆಂಡ್ಗಳಲ್ಲಿ ದೂರವನ್ನು ಕ್ರಮಿಸಿ ಮೊದ ಲಿಗರಾದರು. ಈ ಸಾಧನೆಗಾಗಿ ಒಂದೂವರೆ ಲಕ್ಷ ರೂ. ಬಹು ಮಾನವನ್ನು ತಮ್ಮದಾಗಿಸಿಕೊಂಡರು. ಬೆಳ್ಳಿಯಪ್ಪ ಎ.ಬಿ. ಬೆಳ್ಳಿ ಪದಕ (2:14:15) ಮತ್ತು ಕಾರ್ತಿಕ್ ಕುಮಾರ್ ಕಂಚಿನ ಪದಕ ಗೆದ್ದರು (2:14:19).
2 ಗಂಟೆ, 15 ನಿಮಿಷಗಳಲ್ಲಿ ಗುರಿ ಮುಟ್ಟಿದ್ದರಿಂದ ಈ ಮೂವರೂ ಹಾಂಗ್ಝೂ ಏಷ್ಯಾಡ್ಗೆ ಅರ್ಹತೆ ಸಂಪಾದಿಸಿದರು. ಆದರೆ ಜ್ಯೋತಿ ಗಾವಟೆ 2:37:00 ಸಮಯದ ಮಾನದಂಡ ಮೀರಿದ ಕಾರಣ ಏಷ್ಯಾಡ್ ಅರ್ಹತೆ ಸಂಪಾದಿಸಲು ವಿಫಲರಾದರು (2:53:04). ಅಶ್ವಿನಿ ಜಾಧವ್ (2:53:06), ಜಿಗೆ¾ಟ್ ಡೋಲ್ಮಾ (2:56:41) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. 4 ವಿಭಾಗಗಳ ಸ್ಪರ್ಧೆಯಲ್ಲಿ 16 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ