ಧಾರವಾಡ ಗ್ರಾಮೀಣದಲ್ಲಿ ಪಾಳೆಗಾರರ ಸಮರ?


Team Udayavani, Mar 15, 2023, 6:10 AM IST

ಧಾರವಾಡ ಗ್ರಾಮೀಣದಲ್ಲಿ ಪಾಳೆಗಾರರ ಸಮರ?

ಧಾರವಾಡ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಮತ್ತು ಹಾಲಿ ಶಾಸಕ ಅಮೃತ ದೇಸಾಯಿ ಮಧ್ಯೆ ಸ್ಪರ್ಧೆ ನಡೆಯು­ವುದೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಜಿದ್ದಾಜಿದ್ದಿನ ಕಣ ಈ ಕ್ಷೇತ್ರ. ಇದಕ್ಕೆ ಕಾರಣ ಕಾಂಗ್ರೆಸ್‌ನ ಹುರಿಯಾಳು ವಿನಯ್‌ ಕುಲಕರ್ಣಿ. ಕೈ ಪಕ್ಷವನ್ನು ಗಟ್ಟಿಯಾಗಿಸಿದ್ದು ವಿನಯ್‌. ಸ್ವಸ್ಥಾನ ಎನಿಸಿರುವ ಈ ಕ್ಷೇತ್ರದಲ್ಲೇ ಅವರು ಈ ಬಾರಿ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದನ್ನು ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಪಕ್ಷದ ಮುಖಂಡರು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ.

ಆದರೆ ಬಿಜೆಪಿಯಿಂದ ಹಾಲಿ ಶಾಸಕ ಅಮೃತ ದೇಸಾಯಿ ಮತ್ತೆ ಕಣಕ್ಕಿಳಿಯುವುದನ್ನು ಅವರ ಬೆಂಬಲಿಗರೇ ಸ್ಪಷ್ಟವಾಗಿ ಹೇಳುತ್ತಿಲ್ಲ. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ ಸದ್ಯಕ್ಕೆ ದೇಸಾಯಿ ಅವರ ಗೆಲುವು ಕಠಿನ ಎನ್ನುವ ಅಂಶ ಗೊತ್ತಾಗುತ್ತಿದ್ದಂತೆಯೇ ಬಿ.ಎಸ್‌. ಯಡಿ ಯೂರಪ್ಪ ಅವರ ಕಟ್ಟಾ ಬೆಂಬಲಿಗ, ಜೈನ ಸಮುದಾಯದ ತವನಪ್ಪ ಅಷ್ಟಗಿ ಅವರ ಹೆಸರು ಮುಂಚೂಣಿಗೆ ಬಂದು ನಿಂತಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್‌ ಕರ್ನಾ ಟಕದಲ್ಲೂ ಗುಜರಾತ್‌ ಮಾದರಿ ಟಿಕೆಟ್‌ ಹಂಚಿಕೆ ಮಾಡಿದರೆ ಹುಬ್ಬಳ್ಳಿ ತಾಲೂಕು ಮೂಲದ ಬೆಂಗಳೂರಿನ ಖಾಸಗಿ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವ ಪತ್ರಕರ್ತನ ಹೆಸರು ಕೂಡ ಕೇಳಿಬರುತ್ತಿದೆ. ಒಂದೊಮ್ಮೆ ವಿನಯ್‌ ಕುಲಕರ್ಣಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿಯ ಕಾಂಗ್ರೆಸ್‌ ಅಭ್ಯರ್ಥಿಯಾದರೆ ದೇಸಾಯಿಗೇ ಟಿಕೆಟ್‌ ಪಕ್ಕಾ ಎನ್ನಲಾಗಿದೆ.

ಸಚಿವ ಜೋಶಿ ತಂತ್ರಗಾರಿಕೆ: ಇನ್ನು ಧಾರವಾಡ ಗ್ರಾಮೀಣ ಕ್ಷೇತ್ರವಷ್ಟೇ ಅಲ್ಲ ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲೂ ಪರೋಕ್ಷವಾಗಿ ತಮ್ಮ ರಾಜಕೀಯ ಪ್ರಭಾವ ಇಟ್ಟುಕೊಂಡೇ ಬಂದಿದ್ದಾರೆ.

ಅದರಲ್ಲೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಸೋಲಿಸಲು ಜೋಶಿ ಅವರು ಹೆಣೆದ ರಾಜಕೀಯ ತಂತ್ರಗಾರಿಕೆ 2018ರ ಚುನಾವಣೆಯಲ್ಲಿ ಯಶಸ್ವಿಯಾಗಿ, ಅಮೃತ ದೇಸಾಯಿ ಜಯಗಳಿಸಿದ್ದರು ಎಂಬ ಮಾತು ಈಗಲೂ ರಾಜಕೀಯ ವೇದಿಕೆಗಳಲ್ಲಿ ಕೇಳಿಬರುತ್ತಿದೆ. ಆದರೆ ಈ ಬಾರಿ ಪಾಳೆಗಾರರಾದ ಅಮೃತ ದೇಸಾಯಿ ಮತ್ತು ವಿನಯ್‌ ಕುಲಕರ್ಣಿ ಮಧ್ಯೆ ಫೈಟ್‌ ನಡೆಯುತ್ತದೆಯೇ? ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಕಾರಣ ಈ ಇಬ್ಬರ ಮಧ್ಯೆ ಮಾತ್ರ ಇಲ್ಲಿ ಜುಗಲ್‌ ಬಂದಿ ನಡೆಯಲು ಸಾಧ್ಯ. ಈ ಪೈಕಿ ಯಾರೇ ಕಣದಿಂದ ಹಿಂದೆ ಸರಿದರೂ ಪಾಳೆಗಾರರ ಬಿಗ್‌ ಫೈಟ್‌ ಮುಗಿದು ಫಲಿತಾಂಶವೂ ವ್ಯತ್ಯಾಸವಾಗುತ್ತದೆ.

ವಿನಯ್‌ಗೆ ಅನುಕಂಪ: ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರು ಕ್ಷೇತ್ರ ಮತ್ತು ಧಾರವಾಡ ಜಿಲ್ಲೆಗೆ ಪ್ರವೇ ಶಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಲ್ಲಿ ಬಂದು ಉಳಿದುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಮಾಡಿದ ಕೆಲಸ ಮತ್ತೂಮ್ಮೆ ಕ್ಷೇತ್ರದ ಮತ ದಾರರಿಗೆ ಮನವರಿಕೆ ಮಾಡಿಕೊಟ್ಟು ಮತ ಕೇಳುತ್ತಿದ್ದಾರೆ.

ಜಿಲ್ಲಾ ಪ್ರವೇಶ ನಿಷೇಧಿಸಿದ್ದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಅನುಕಂಪದ ಅಲೆ ಶುರುವಾಗಿದ್ದು, ವಿನಯ್‌ ಮತ್ತೆ ಗೆಲ್ಲ ಬೇಕೆಂದು ಈಗಲೇ ಮನೆ ಮನೆ ಪ್ರಚಾರ ಶುರು ಮಾಡಿದ್ದಾರೆ. ಅದು ಅಲ್ಲದೇ ವಿನಯ್‌ ಪಂಚಮಸಾಲಿ ಸಮುದಾಯದ ಹುರಿಯಾಳು ಮಾತ್ರವಲ್ಲ, ಇತರಲಿಂಗಾಯತ ಒಳಪಂಗಡ ಗಳ ಜತೆಗೂ ಇಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾ ಗಿ ಬಿಜೆಪಿ ಅಲೆ ಎದ್ದರೆ ಮಾತ್ರ ದೇಸಾಯಿ ತೇಲಲು ಸಾಧ್ಯ ಎನ್ನುತ್ತಿದ್ದಾರೆ ಗ್ರಾಮೀಣ ಕ್ಷೇತ್ರದ ಜನ. ಹೀಗಾ ಗಿಯೇ ಕ್ಷೇತ್ರ ದಲ್ಲಿ ಯಾರಿಗೆ ಟಿಕೆಟ್‌? ಯಾರ ನಡುವೆ ಸ್ಪರ್ಧೆ ಎಂಬ ಕುತೂ ಹಲ ಏರ್ಪಟ್ಟಿದೆ.

ತಮಟೆ ಹೊಡೆದ ಇಸ್ಮಾಯಿಲ್‌
ಈ ಕ್ಷೇತ್ರದಲ್ಲಿ ಕೈ ಮತ್ತು ಕಮಲ ಪಡೆ ಮಾತ್ರ ತೀವ್ರ ಸೆಣಸಾಟ ನಡೆಸುವುದು ಪಕ್ಕಾ. ಇಲ್ಲಿ ಜೆಡಿಎಸ್‌ ಅಥವಾ ಪಕ್ಷೇತರ ಅಭ್ಯರ್ಥಿಗಳ ಪ್ರಭಾವ ಅಷ್ಟಕ್ಕಷ್ಟೇ. ಸದ್ಯಕ್ಕೆ ಕಾಂಗ್ರೆಸ್‌ನಿಂದ ಇಸ್ಮಾಯಿಲ್‌ ತಮಟಗಾರ ಕೂಡ ಕಣಕ್ಕಿಳಿಯಲು ಸಜ್ಜಾಗಿದ್ದು, ಒಂದು ವೇಳೆ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿದರೆ ಜೆಡಿಎಸ್‌ನಿಂದ ಹುರಿಯಾಳಾಗುವ ಸಾಧ್ಯತೆ ಇದೆ. ಇತ್ತ ಬಿಜೆಪಿಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ ಹಾಗೂ ಸವಿತಾ ಅರಮಶೆಟ್ಟಿ ಹೆಸರು ಜೋರಾಗಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ಕೈ ಮತ್ತು ಕಮಲಕ್ಕೆ ಈ ಬಾರಿ ಬಂಡಾಯದ ಬಿಸಿ ತಟ್ಟುವುದಂತೂ ಪಕ್ಕಾ.

-ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.