ವಿಶ್ವವಿಖ್ಯಾತ ಅಮರನಾಥ ಯಾತ್ರೆ 60 ದಿನಕ್ಕೇರಿಕೆ?
Team Udayavani, Apr 2, 2023, 7:45 AM IST
ಶ್ರೀನಗರ: ದ.ಕಾಶ್ಮೀರದಲ್ಲಿರುವ ವಿಶ್ವವಿಖ್ಯಾತ ಅಮರನಾಥ ಹಿಮಲಿಂಗ ದರ್ಶನಕ್ಕೆ ಈ ಬಾರಿ 60 ದಿನಗಳು ಕಾಲಾವಕಾಶ ನೀಡುವ ಸಾಧ್ಯತೆಯಿದೆ.
ಖಚಿತ ದಿನಾಂಕ ಇನ್ನೂ ಪ್ರಕಟವಾಗಿಲ್ಲದಿದ್ದರೂ, ಈ ವರ್ಷ ಜೂನ್ ಕೊನೆಯ ವಾರ ಆರಂಭವಾಗಿ, ಆ.30ಕ್ಕೆ ಮುಗಿಯಬಹುದು ಎನ್ನಲಾಗಿದೆ.
ಇದೇ ಅವಧಿಯಲ್ಲಿ ರಕ್ಷಾ ಬಂಧನ ಮತ್ತು ಶ್ರಾವಣ ಪೌರ್ಣಿಮೆ ಬರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು. ಶ್ರೀ ಅಮರನಾಥ ದೇವಸ್ಥಾನ ಮಂಡಳಿ (ಎಸ್ಎಎಸ್ಬಿ) ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಭೆಯನ್ನು ನಡೆಸಿದ್ದಾರೆ. ಕಳೆದ ವರ್ಷ ಜೂ.30ರಿಂದ ಆ.11ರವರೆಗೆ ಒಟ್ಟು 43 ದಿನಗಳ ಕಾಲ ಯಾತ್ರೆಗೆ ಅನುಮತಿ ನೀಡಲಾಗಿತ್ತು.