ಮೋದಿ ಎಷ್ಟೇ ಬಾರಿ ಬಂದ್ರೂ ಕಾಂಗ್ರೆಸ್‌ಗೆ ಅಧಿಕಾರ

Team Udayavani, Apr 10, 2023, 3:04 PM IST

TDY-15

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಚುನಾವಣೆ ಸಂದರ್ಭವಾಗಿರುವ ಕಾರಣ ಪದೇ ಪದೇ ಬರುತ್ತಿದ್ದಾರೆ. ಅವರು ಎಷ್ಟೇ ಬಾರಿ ಬಂದರೂ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಸಿ. ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬದನಗುಪ್ಪೆ ಹಾಗೂ ಹೆಗ್ಗೊಠಾರ ಗ್ರಾಪಂ ಕೇಂದ್ರ ಮತ್ತು ಬೆಂಡರವಾಡಿ, ಮೇಗಲ ಹುಂಡಿ, ಮುತ್ತಿಗೆ, ಬಿ. ಮಲ್ಲಯ್ಯನಪುರ, ಪುಣ್ಯದ ಹುಂಡಿ ಗ್ರಾಮಗಳಲ್ಲಿ ಭಾನುವಾರ ಮನೆಮನೆಗೆ ತೆರಲಿ ಮತಯಾಚಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಇದೆ. ಅನೇಕ ಸಮೀಕ್ಷೆಗಳ ವರದಿಯನ್ನು ನೋಡಿದರು ಸಹ ಕಾಂಗ್ರೆಸ್‌ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯಲಿದೆ ಎಂಬ ಮಾಹಿತಿ ಇದೆ. ಹೀಗಾಗಿ ಹೇಗಾದರೂ ಮಾಡಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಪದೇ ಪದೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ್ಕೆ ಬರುತ್ತಿದ್ದಾರೆ. ಇನ್ನು ಚುನಾವಣಾ ಪ್ರಚಾರಕ್ಕೆ 20 ಬಾರಿ ಬರುತ್ತಾರೆ ಎಂಬ ಮಾಹಿತಿ ಇದೆ. ನಮ್ಮ ರಾಜ್ಯದ ಜನರು ದಡ್ಡರಲ್ಲ. ಬಿಜೆಪಿ ಭ್ರಷ್ಟ ಆಡಳಿತವನ್ನು ನೋಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದರು.

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಈಗಾಗಲೇ ಕಾಂಗ್ರೆಸ್‌ ಪಕ್ಷ ಟಿಕೆಟ್‌ ಘೋಷಣೆ ಮಾಡಿ, ಚುನಾವಣಾ ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರಚಾರವನ್ನೂ ಸಹ ಆರಂಭಿಸಿದ್ದೇವೆ. ಆದರೆ ಉಳಿದ ಪಕ್ಷಗಳಲ್ಲಿ ಇನ್ನು ಸಹ ಟಿಕೆಟ್‌ ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಿ ದ್ದಾರೆ. ಇದರ ಅರ್ಥ ಇವರಾರು ಗೆಲ್ಲುವುದಿಲ್ಲ ಎಂದು ಆ ಪಕ್ಷಗಳ ವರಿಷ್ಠರು ಭಾವಿಸಿದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ: ಸಂಸದರಾಗಿದ್ದ ಅವರ ಅವಧಿಯಲ್ಲಿ ದಿ. ಆರ್‌. ಧ್ರುವನಾರಾಯಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ನಮ್ಮ ಕಣ್ಮುಂದೆ ಇವೆ. ರಾಷ್ಟ್ರೀಯ ಹೆದ್ದಾರಿಗಳ ಮಂಜೂರಾತಿ ಮತ್ತು ಅಭಿವೃದ್ಧಿ, ಕೇಂದ್ರೀಯ ವಿದ್ಯಾಲಯ, ಕೃಷಿ ಕಾಲೇಜು, ಕಾನೂನು ಕಾಲೇಜು, ಪಾಸ್‌ಪೋರ್ಟ್‌ ಕೇಂದ್ರ ಸೇರಿದಂತೆ ಕೇಂದ್ರದ ವಿವಿಧ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದಾರೆ. ಅಲ್ಲದೇ, ಮೂರು ಬಾರಿ ನಾನು ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಚಾಮರಾಜನಗರದಲ್ಲಿ ರಸ್ತೆಗಳ ಅಗಲೀಕರಣ, ಸರ್ಕಾರಿ ವೈದ್ಯಕೀಯ ಕಾಲೇಜು, ಇಂಜಿನಿಯ ರಿಂಗ್‌ ಕಾಲೇಜು, ಸಿಮ್ಸ್‌ ಆಸ್ಪತ್ರೆ, ಹಳ್ಳಿಗಳಿಗೆ ನದಿಮೂಲದಿಂದ ಕುಡಿಯುವ ನೀರಿನ ಸೌಲಭ್ಯ, ಚಾಮರಾಜೇಶ್ವರ ದೇವಸ್ಥಾನದ ಜೀರ್ಣೋದ್ದಾರ, ನೂತನ ರಥ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಾನು ಕೈಗೊಂಡಿರುವ ಕೆಲಸಗಳೇ ನನ್ನ ಗೆಲುವಿಗೆ ಕಾರಣವಾಗಲಿದೆ ಎಂದು ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ವಾಟಾಳ್‌ ಪಕ್ಷ ತೊರೆದು ಮುಖಂಡರಾದ ಹೆಗ್ಗೊಠಾರ ಕುಮಾರ್‌, ರಾಮಯ್ಯ, ಬಿ. ಮಂಜು, ಧ್ರುವ, ಅಂಬಿಕಾ ವಿಲ್ಸನ್‌, ರವಿ ಅನೇಕರು ತಮ್ಮ ಬೆಂಬಲಿಗ ರೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ. ಮರಿಸ್ವಾಮಿ, ಪು. ಶ್ರೀನಿವಾಸನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ನಾಗೇಂದ್ರ, ನಿರ್ದೇಶಕ ಗುರುಸ್ವಾಮಿ, ಮುಖಂಡರಾದ ಪಿ.ಶೇಖರ್‌, ಬಸುಮರಿ, ಕೃಷ್ಣ, ಮುತ್ತಿಗೆ ದೊರೆ, ಮಹದೇವಪ್ರಸಾದ್‌, ನಟರಾಜು, ದೊರೆರಾಜು, ಮಹದೇವಸ್ವಾಮಿ ಇದ್ದರು.

ಟಾಪ್ ನ್ಯೂಸ್

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ

LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ

Good rain continues Chikkamagaluru

Chikkamagaluru; ಮಲೆನಾಡಿಗರಲ್ಲಿ ಮಂದಹಾಸ ಮೂಡಿಸಿದ ಮಳೆರಾಯ

Belagavi; ಬಿರು ಬೇಸಿಗೆಯಲ್ಲೂ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ

Belagavi; ಬಿರು ಬೇಸಿಗೆಯಲ್ಲೂ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ

Kollywood Actor: ದಳಪತಿ ವಿಜಯ್‌ ಬಳಿಕ ರಾಜಕೀಯದತ್ತ ಮತ್ತೊಬ್ಬ ಖ್ಯಾತ ಕಾಲಿವುಡ್‌ ನಟ?

Kollywood Actor: ದಳಪತಿ ವಿಜಯ್‌ ಬಳಿಕ ರಾಜಕೀಯದತ್ತ ಮತ್ತೊಬ್ಬ ಖ್ಯಾತ ಕಾಲಿವುಡ್‌ ನಟ?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

Patanjali Ads Case: ಬಾಬಾ ರಾಮದೇವ್ ಪ್ರಭಾವಿ ಹೌದು, ಆದರೆ…..: ಸುಪ್ರೀಂ ಕೋರ್ಟ್

Patanjali Ads Case: ಬಾಬಾ ರಾಮದೇವ್ ಪ್ರಭಾವಿ ಹೌದು, ಆದರೆ…..: ಸುಪ್ರೀಂ ಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqe

Gundlupete; ಓವರ್ ಟೇಕ್ ಭರದಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

1-ewqeqwqewq

Gundlupete; ಸತತ‌ 25 ದಿನಗಳ ಕಾಲ ಕೂಂಬಿಂಗ್ ಯಶಸ್ವಿ:ಪುಂಡಾನೆ ಸೆರೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ

ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

6-hunsur

Hunsur: ನಾಗರಹೊಳೆಯಲ್ಲಿ ಗುಂಡಿಕ್ಕಿ ಅಪರೂಪದ ಕೂರ ಭೇಟೆಯಾಡಿದ್ದ ಇಬ್ಬರ ಬಂಧನ; ಓರ್ವ ಪರಾರಿ

LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ

LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.