Vande Bharat Express; 6 ತಿಂಗಳಲ್ಲಿ ಮಂಗಳೂರಿಗೆ “ವಂದೇ ಭಾರತ್‌’?

ಕೇರಳದಿಂದ ವಿಸ್ತರಣೆಗೆ ಮಂಗಳೂರಿಗರ ಪ್ರಬಲ ವಿರೋಧ

Team Udayavani, Apr 19, 2023, 7:17 AM IST

Vande Bharat Express; ಮಂಗಳೂರಿಗಿಲ್ಲ; ಕಾಸರಗೋಡು ವರೆಗೆ ಮಾತ್ರ!

ಮಂಗಳೂರು: “ವಂದೇ ಭಾರತ್‌’ ರೈಲನ್ನು ಮಂಗಳೂರಿಗೆ ವಿಸ್ತ ರಿಸುವ ಪ್ರಸ್ತಾವನೆಗೆ ಪೂರಕವಾಗಿ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗುತ್ತಿದೆ.

ಕಾಮಗಾರಿಗಳು ನಾಲ್ಕೈದು ತಿಂಗಳುಗಳಲ್ಲಿ ಪೂರ್ಣಗೊಂಡು, ಇನ್ನಾರು ತಿಂಗಳಲ್ಲಿ ಮಂಗಳೂರಿಗೆ ವಂದೇ ಭಾರತ್‌ ರೈಲು ಬರುವ ಲಕ್ಷಣಗಳು ಇವೆ.

ಈಗಿರುವ ಪಿಟ್‌ಲೆನ್‌ನಲ್ಲೇ ಕೆಲವು ಮಾರ್ಪಾಡು ಮಾಡಿ, ಎಲೆಕ್ಟ್ರಿಕ್‌ ಲೈನ್‌ ಅಳವಡಿಸಿ, ಆ ಮೂಲಕ ವಂದೇ ಭಾರತ್‌ ಕೋಚ್‌ಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯನ್ನು ಸುಮಾರು 62.47 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿ ಕೊಳ್ಳಲಾಗಿದೆ.

ಸದ್ಯ ಮಂಗಳೂರು ಸೆಂಟ್ರಲ್‌ನಲ್ಲಿ ಮೂರು ಪ್ಲಾಟ್‌ಫಾರಂ ಇದ್ದು, ಪ್ಲಾಟ್‌ಫಾರಂ ನಂ. 4, 5 ಅಭಿವೃದ್ಧಿಯ ಹಂತದಲ್ಲಿವೆ. ಇದಕ್ಕೆ ಪೂರಕವಾಗಿ ರೈಲು ಎಂಜಿನಿಯರಿಂಗ್‌ ಕಚೇರಿ ಸಂಕೀರ್ಣ ವನ್ನು ಪ್ಲಾಟ್‌ಫಾರಂ ಬದಿಯಿಂದ ಈಗಿನ 2ನೇ ಪ್ರವೇಶ ದ್ವಾರದ ಬಳಿಯ ನೂತನ ಕಾಂಪ್ಲೆಕ್ಸ್‌ಗೆ ಸ್ಥಳಾಂತರಿ ಸುವ ಕಾರ್ಯ ನಡೆದಿದೆ. ಹಳೆಯ ಕಟ್ಟಡ ತೆರವು ಗೊಳಿಸಲಾಗುವುದು ಎಂದು ರೈಲ್ವೇ ಮೂಲಗಳು ತಿಳಿಸಿವೆ.

ವಿಸ್ತರಣೆ ಬೇಡ, ಮಂಗಳೂರು- ಮುಂಬಯಿ ಇರಲಿ
ಒಂದೆಡೆ ದಕ್ಷಿಣ ರೈಲ್ವೇ ಮಂಗಳೂರು ಸೆಂಟ್ರಲ್‌ನಲ್ಲಿ ಪೂರಕ ಕಾಮಗಾರಿ ಕೈಗೊಳ್ಳುತ್ತಿರುವಂತೆಯೇ ಕೇರಳದ ಸಚಿವ ವಿ. ಮುರಳೀಧರನ್‌ ಅವರ ಒತ್ತಾಸೆಯ ಮೇರೆಗೆ ಕಲ್ಲಿಕೋಟೆ- ಕಣ್ಣೂರು ವಂದೇ ಭಾರತ್‌ ರೈಲನ್ನು ಕಾಸರ ಗೋಡು ವರೆಗೆ ವಿಸ್ತರಿಸಲು ರೈಲ್ವೇ ಸಚಿವ ಅಶ್ವಿ‌ನ್‌ ವೈಷ್ಣವ್‌ ಆದೇಶಿಸಿದ್ದಾರೆ. ಅದನ್ನು ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಬೇಕು ಎನ್ನುವುದು ಕೇರಳದ ಜನಪ್ರತಿನಿಧಿಗಳ ಒತ್ತಾಸೆ.

ಆದರೆ ಇದರಿಂದ ಕನ್ನಡಿಗ ರಿಗೆ ಪ್ರಯೋಜನವಿಲ್ಲ, ಮಂಗಳೂರು- ಮುಂಬಯಿ ಮಧ್ಯೆ ವಂದೇ ಭಾರತ್‌ ರೈಲು ಆರಂಭಿಸಲು ಒತ್ತಾಯಿಸಲಾ ಗುತ್ತಿದೆ ಎನ್ನುತ್ತಾರೆ ಪಶ್ಚಿಮ ರೈಲ್ವೇ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್‌.

ಮಂಗಳೂರಿನಲ್ಲಿ ನಿರ್ಮಾಣವಾ ಗುತ್ತಿರುವ ಹೆಚ್ಚುವರಿ ಪ್ಲಾಟ್‌ಫಾರಂಗಳನ್ನು ಮುಂಬಯಿ ಹಾಗೂ ಬೆಂಗಳೂರಿನ ಕಡೆಗಿನ ರೈಲುಗಳಿಗೆ ಬಳಕೆ ಮಾಡಿದರೆ ಮಾತ್ರ ಇಲ್ಲಿನ ಜನರಿಗೆ ಉಪಯೋಗ. ಇಲ್ಲವಾದರೆ ಕೇರಳ, ತಮಿಳುನಾಡಿ ನವರಿಗಷ್ಟೇ ಪ್ರಯೋಜನ. ವಿಜಯಪುರ- ಮಂಗಳೂರು ಜಂಕ್ಷನ್‌ ರೈಲನ್ನು ಸೆಂಟ್ರಲ್‌ಗೆ ವಿಸ್ತರಿಸಬೇಕು, ಗುಲ್ಬರ್ಗ, ದಿಲ್ಲಿ, ವಾರಣಾಸಿ, ಬೆಂಗಳೂರಿಗೆ ಹೊಸ ರೈಲು ಆರಂಭಿಸಬೇಕು. ಹಾಗಾಗಿ ವಂದೇ ಭಾರತ್‌ ಸದ್ಯಕ್ಕೆ ಕೇರಳದಿಂದ ಇಲ್ಲಿಗೆ ವಿಸ್ತರಣೆ ಬೇಡ ಎನ್ನುತ್ತಾರೆ ರೈಲ್ವೇ ಬಳಕೆದಾರರ ಸಂಘದ ವಿನಯಚಂದ್ರ.

ವಂದೇ ಭಾರತ್‌ ಕಾಸರಗೋಡುವರೆಗೆ ವಿಸ್ತರಣೆ
ಕಾಸರಗೋಡು, ಎ. 18: ಕೇರಳದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ತಿರುವನಂತಪುರದಿಂದ ಕಾಸರಗೋಡು ವರೆಗೆ ಸರ್ವೀಸ್‌ ನಡೆಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಥಮ ಹಂತದಲ್ಲಿ ಒಂದೂವರೆ ವರ್ಷದಲ್ಲಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸಲು ಸೌಕರ್ಯ ಕಲ್ಪಿಸಲಾಗುವುದು. ಎರಡನೇ ಹಂತದಲ್ಲಿ 130 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಕೆಲವು ಪ್ರದೇಶಗಳಲ್ಲಿ ತಿರುವುಗಳನ್ನು ತೆರವುಗೊಳಿಸಬೇಕಾಗುವುದು. ಅದಕ್ಕಾಗಿ ಭೂಸ್ವಾಧೀನ ನಡೆಸಬೇಕಾಗಿದೆ. ಇದಕ್ಕೆ ಎರಡರಿಂದ ಮೂರು ವರ್ಷ ಬೇಕಾಗಿ ಬರಬಹುದು. ಗರಿಷ್ಠ 160 ಕಿ.ಮೀ. ವೇಗ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಮಂಗಳೂರು ಸೆಂಟ್ರಲ್‌ಗೆ ಯಾವಾಗ ವಂದೇ ಭಾರತ್‌ ವಿಸ್ತರಣೆ ಯಾಗುತ್ತದೆ ಎನ್ನುವುದನ್ನು ಹೇಳ ಲಾಗದು. ಆದರೆ ಪೂರಕವಾದ ನಿರ್ವಹಣ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
– ಪ್ರವೀಣ್‌ ಕುಮಾರ್‌, ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌, ದ. ರೈಲ್ವೇ

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.