Mukesh Ambani; ಸ್ನೇಹಿತ, ರಿಲಯನ್ಸ್‌ ಉದ್ಯೋಗಿಗೆ 1,500 ಕೋಟಿ ರೂ. ಮೌಲ್ಯದ ಬಂಗಲೆ ಉಡುಗೊರೆ

ಕೆಲವೊಂದು ಪೀಠೋಪಕರಣಗಳನ್ನು ಇಟಲಿಯಿಂದ ಖರೀದಿಸಲಾಗಿದೆ

Team Udayavani, Apr 25, 2023, 2:53 PM IST

Mukesh Ambani; ಸ್ನೇಹಿತ, ರಿಲಯನ್ಸ್‌ ಉದ್ಯೋಗಿಗೆ 1,500 ಕೋಟಿ ರೂ. ಮೌಲ್ಯದ ಬಂಗಲೆ ಉಡುಗೊರೆ

ಮುಂಬೈ: ಭಾರತದ ಆಗರ್ಭ ಶ್ರೀಮಂತ ಉದ್ಯಮಿ, ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ತನ್ನ  ಆಪ್ತ, ಕಂಪನಿಯ ಉದ್ಯೋಗಿಯೊಬ್ಬರಿಗೆ ಮುಂಬೈಯಲ್ಲಿ ಬರೋಬ್ಬರಿ 1,500 ಕೋಟಿ ರೂಪಾಯಿ ಮೌಲ್ಯದ ಬೃಹತ್‌ ಬಂಗಲೆಯನ್ನು ಉಡುಗೊರೆಯಾಗಿ ನೀಡಿರುವುದಾಗಿ ಡಿಎನ್‌ ಎ ವರದಿ ಮಾಡಿದೆ.

ಇದನ್ನೂ ಓದಿ:ಗೇಮ್‌ ಆಡುತ್ತಿರುವಾಗ ಮೊಬೈಲ್‌ ಸ್ಫೋಟಗೊಂಡು 8 ವರ್ಷದ ಬಾಲಕಿ ಮೃತ್ಯು

ಮುಕೇಶ್‌ ಅಂಬಾನಿಯವರ ಬಲಗೈ ಬಂಟ ಎಂದೇ ಜನಪ್ರಿಯರಾಗಿರುವ ಮನೋಜ್‌ ಮೋದಿಗೆ ಮುಂಬೈನ ನೇಪಿಯನ್‌ ಸೀ ರೋಡ್‌ ಸಮೀಪದಲ್ಲಿರುವ ಬಂಗಲೆಯನ್ನು ಉಡುಗೊರೆಯಾಗಿ ನೀಡಲಾಗಿದೆ.

ಮ್ಯಾಜಿಕ್‌ ಬ್ರಿಕ್ಸ್‌ ಡಾಟ್‌ ಕಾಮ್‌ ವರದಿ ಪ್ರಕಾರ, 1.7 ಲಕ್ಷ ಚದರ ಅಡಿಯಷ್ಟು ವಿಸ್ತಾರದ ಪ್ರದೇಶದಲ್ಲಿ 22 ಅಂತಸ್ತುಗಳ ಬಹುಮಹಡಿ ಕಟ್ಟಡವನ್ನು ಮನೋಜ್‌ ಮೋದಿಯವರಿಗೆ ನೀಡಲಾಗಿದ್ದು, ಇದು 1,500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಾಗಿದೆ ಎಂದು ತಿಳಿಸಿದೆ.

ಮುಕೇಶ್‌ ಅಂಬಾನಿ ಉಡುಗೊರೆಯಾಗಿ ನೀಡಿರುವ ಈ ಬಂಗಲೆಯನ್ನು ತಲಾತಿ ಮತ್ತು ಎಲ್‌ ಎಲ್‌ ಪಿ ಪಾರ್ಟನರ್ಸ್‌ ವಿನ್ಯಾಸಗೊಳಿಸಿದ್ದು, ಕೆಲವೊಂದು ಪೀಠೋಪಕರಣಗಳನ್ನು ಇಟಲಿಯಿಂದ ಖರೀದಿಸಲಾಗಿದೆ ಎಂದು ಡಿಎನ್‌ ಎ ವರದಿ ವಿವರಿಸಿದೆ.

ಯಾರಿವರು ಮನೋಜ್‌ Modi :

ಮನೋಜ್‌ ಮೋದಿ ಅವರು ಮುಕೇಶ್‌ ಅಂಬಾನಿಯ ಬ್ಯಾಚ್‌ ಮೇಟ್.‌ ಇವರಿಬ್ಬರು ಕಾಲೇಜು ವಿದ್ಯಾಭ್ಯಾಸ ಹಾಗೂ ಮುಂಬೈ ಯೂನಿರ್ವಸಿಟಿಯ ಕೆಮಿಕಲ್‌ ಟೆಕ್ನಾಲಜಿ ಪದವಿಯಿಂದ ಈವರೆಗೂ ಆತ್ಮೀಯ ಗೆಳೆಯರಾಗಿದ್ದಾರೆ. ಮುಕೇಶ್‌ ಅಂಬಾನಿಯ ತಂದೆ ಧೀರೂಭಾಯಿ ಅಂಬಾನಿ ರಿಲಯನ್ಸ್‌ ಕಂಪನಿಯನ್ನು ಮುನ್ನಡೆಸುತ್ತಿದ್ದ (1980) ಸಂದರ್ಭದಲ್ಲಿ ಮನೋಜ್‌ ಮೋದಿ ಕಂಪನಿಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಮುಕೇಶ್‌ ಮತ್ತು ನೀತಾ ಅಂಬಾನಿ ಜೊತೆ ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಮನೋಜ್‌ ಮೋದಿ ಅವರು ಆಕಾಶ್‌ ಅಂಬಾನಿ ಮತ್ತು ಇಶಾ ಅಂಬಾನಿಯ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ರಿಲಯನ್ಸ್‌ ಕಂಪನಿಯ ಬಹುಕೋಟಿ ರೂಪಾಯಿ ಒಪ್ಪಂದಗಳ ಹಿಂದಿನ ರೂವಾರಿ ಈ ಮನೋಜ್‌ ಮೋದಿ. ಪ್ರಸ್ತುತ ಮೋದಿ ರಿಲಯನ್ಸ್‌ ರಿಟೈಲ್‌ ಮತ್ತು ರಿಲಯನ್ಸ್‌ ಜಿಯೋದ ನಿರ್ದೇಶಕರಾಗಿದ್ದಾರೆ.

ಟಾಪ್ ನ್ಯೂಸ್

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್;‌ ಭಾರೀ ನಷ್ಟ

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.