ಪ್ರಧಾನಿ ನರೇಂದ್ರ ಮೋದಿಯಿಂದ FM ಟ್ರಾನ್ಸ್ಮೀಟರ್ಸ್ ಉದ್ಘಾಟನೆ
ಗಡಿಭಾಗದ ಪ್ರದೇಶಗಳು ಹಾಗೂ ಪ್ರಮುಖ ಜಿಲ್ಲೆಗಳಿಗೆ ರೇಡಿಯೊ ಸಂಪರ್ಕ ಕಲ್ಪಿಸುವ ಮಹತ್ತರ ಕ್ರಮ
Team Udayavani, Apr 28, 2023, 8:23 AM IST
ಹೊಸದಿಲ್ಲಿ: ಗಡಿಭಾಗದ ಪ್ರದೇಶಗಳು ಹಾಗೂ ಪ್ರಮುಖ ಜಿಲ್ಲೆಗಳಿಗೆ ರೇಡಿಯೊ ಸಂಪರ್ಕ ಕಲ್ಪಿಸುವ ಮಹತ್ತರ ಕ್ರಮದ ಭಾಗವಾಗಿ 18 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿರುವ 91 ಎಫ್ಎಂ ಟ್ರಾನ್ಸ್ಮೀಟರ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ. ಬಿಹಾರ, ಝಾರ್ಖಂಡ್, ಒಡಿಶಾ, ಪ.ಬಂಗಾಲ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಕೇರಳ , ತೆಲಂಗಾಣ, ಛತ್ತೀಸ್ಗಢ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಲಡಾಖ್, ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿನ 84 ಜಿಲ್ಲೆಗಳಲ್ಲಿ ಈಗಾಗಲೇ 91 ಹೊಸ 100 ವ್ಯಾಟ್ ಟ್ರಾನ್ಸ್ಮಿಟರ್ಗಳನ್ನು ಸ್ಥಾಪಿಸಲಾಗಿದೆ.